ಪೋಸ್ಟಲ್ ತಂಡಕ್ಕೆ ಜಯ

7

ಪೋಸ್ಟಲ್ ತಂಡಕ್ಕೆ ಜಯ

Published:
Updated:
ಪೋಸ್ಟಲ್ ತಂಡಕ್ಕೆ ಜಯ

ಬೆಂಗಳೂರು: ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಎ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು.ಆಶೋಕನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ ತಂಡ 2-0ಗೋಲುಗಳಿಂದ ಎಸ್‌ಎಐ ತಂಡವನ್ನು ಮಣಿಸಿತು.ವಿಜಯಿ ತಂಡದ ಅಮೊಸ್ 53ನೇ ನಿಮಿಷದಲ್ಲಿ ಮೊದಲ ಗೋಲಿನ ಖಾತೆ ತೆರೆದರು. ನಂತರ ಪ್ರಕಾಶ್ 63ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿತ್ತರು. ಎಸ್‌ಎಐ ತಂಡದ ಪರವಾಗಿ ಯಾವುದೇ ಗೋಲುಗಳು ಬರಲಿಲ್ಲ.ಎಸ್‌ಎಐ ತಂಡ ಗೋಲು ಗಳಿಸುವ ಸಾಕಷ್ಟು ಅವಕಾಶಗಳನ್ನು ವಿಜಯಿ ತಂಡದ ಗೋಲ್ ಕೀಪರ್ ವಿಫಲಗೊಳಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ಸೌಥರ್ನ್ ಬ್ಲೂಸ್ ತಂಡ 2-1ಗೋಲುಗಳಿಂದ ಸರ್ಕಾರಿ ಮುದ್ರಣಾಲಯ ತಂಡದ ಎದುರು ರೋಚಕ ಗೆಲುವು ಸಾಧಿಸಿತು.ಬ್ಲೂಸ್ ತಂಡದ ಶ್ರೀಕಾಂತ್ ಹಾಗೂ ಪ್ರಭಾಕರ್ ಅವರು ಕ್ರಮವಾಗಿ 16 ಹಾಗೂ 64ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮುದ್ರಣಾಲಯ ತಂಡದ ರಾಜೀವ್ 65ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುವ ಯತ್ನ ವಿಫಲವಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry