ಮಂಗಳವಾರ, ಜನವರಿ 28, 2020
19 °C

ಪೋಸ್‌ ನೀಡಿದರು, ಹೊರಟುಹೋದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆ.ಆರ್‌. ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಸ್ವಚ್ಛತಾ ಆಂದೋಲನ ಕಾರ್ಯ ಕ್ರಮ ಕೇವಲ ಛಾಯಾ ಗ್ರಾಹಕರಿಗೆ ಪೋಸ್‌ ನೀಡಲು ಸೀಮಿತ ವಾಯಿತು.ಚಾಮರಾಜಪೇಟೆ ಬಿಬಿಎಂಪಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಆಂದೋಲನದಲ್ಲಿ ಭಾಗವ ಹಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಬೆಳಿಗ್ಗೆ 9ಕ್ಕೆ ಮಾರುಕಟ್ಟೆಗೆ ಹೋದಾಗ ಯಾರೂ ಬಂದಿರಲಿಲ್ಲ. 9.30ರ ಸುಮಾರಿಗೆ ವಿದ್ಯಾರ್ಥಿಗಳು ಮತ್ತು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಮಾರು ಕಟ್ಟೆಯಲ್ಲಿ ಕಾಣಿಸಿಕೊಂಡರು.ಛಾಯಾಗ್ರಾಹಕರು ಕ್ಯಾಮೆರಾ ಕ್ಲಿಕ್ಕಿಸುವವರೆಗೆ ಎಲ್ಲರೂ ಕಸಗುಡಿಸಿದರು. ಕ್ಯಾಮೆರಾಗಳು ಬ್ಯಾಗ್‌ ಒಳಗೆ ಸೇರುತ್ತಿದ್ದಂತೆ ವಿದ್ಯಾರ್ಥಿಗಳು ಹೊರಟುಹೋದರು, ಮೇಯರ್‌ ಮೆಯೋ ಹಾಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಪಾಲ್ಗೊ ಳ್ಳಲು ತೆರಳಿದರು. ಯಥಾಪ್ರಕಾರ ಪೌರಕಾರ್ಮಿಕರು ಮಾರುಕಟ್ಟೆ ಕಸ ಗುಡಿಸಿದರು.

ಪ್ರತಿಕ್ರಿಯಿಸಿ (+)