ಬೆಂಗಳೂರು: ಆರೋಗ್ಯ ಶುಶ್ರೂಷ ಕಂಪೆನಿಯಾದ ಅಬ್ಬಾಟ್ನ ಪ್ರಥಮ ಪೌಷ್ಠಿಕತೆ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ನಗರದ ಬಯೋಕಾನ್ ಪಾರ್ಕ್ನಲ್ಲಿ ಪ್ರಧಾನಮಂತ್ರಿಗಳ ಸಲಹೆಗಾರ ಡಾ. ಸ್ಯಾಮ್ ಪಿತ್ರೋಡ ಸೋಮವಾರ ಉದ್ಘಾಟಿಸಿದರು.

ಅತ್ಯಾಧುನಿಕವಾದ ಪ್ರಥಮ ಪೌಷ್ಠಿಕತೆ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವು ಕೈಗೆಟಕುವ ಪೌಷ್ಠಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಗಮನವನ್ನು ಕೇಂದ್ರೀಕರಿಸುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರವು 13,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣವಿದೆ.

ಕೇಂದ್ರದಲ್ಲಿ ವಿಶ್ಲೇಷಣಾತ್ಮಕ ಪ್ರಯೋಗಾಲಯ, ಉತ್ಪನ್ನ ಅಭಿವೃದ್ಧಿ ಪ್ರಯೋಗಾಲಯ, ಸ್ವಾದ ವಿಶ್ಲೇಷಿಸಲು ಪ್ರಯೋಗಾಲಯ, ಸೆನ್ಸರಿ ಎಲಿಮೆಂಟ್ ಮತ್ತು ಪ್ಯಾಕೇಜಿಂಗ್ ಒಳಗೊಂಡಿವೆ. ವಿಶ್ಲೇಷಣಾ ಪ್ರಯೋಗಾಲಯವು ಸೂಕ್ಷ್ಮ ಪೌಷ್ಠಿಕತೆಯಿಂದ ಹಿಡಿದು ಸೂಕ್ಷ್ಮ ಜೀವಾಣುಗಳ ಪರೀಕ್ಷೆವರೆಗೆ ಪೌಷ್ಠಿಕತೆ ವಿಶ್ಲೇಷಣೆಗೆ ವಿಶಾಲ ಹರವಿನ ತಂತ್ರಜ್ಞಾನದೊಂದಿಗೆ ಕೂಡಿದೆ.

ಈ ಹೊಸ ಕೇಂದ್ರವು ತಾಯಿ ಹಾಗೂ ಶಿಶುವಿನ ಪೌಷ್ಠಿಕತೆಯ ಮತ್ತು ಮಧುಮೇಹ ಆರೋಗ್ಯಕ್ಕೆ ಸಂಬಂಧಿಸಿದಂತೆ ಪೌಷ್ಠಿಕ ಉತ್ಪನ್ನಗಳ ಅಭಿವೃದ್ಧಿಗೆ ಗಮನವನ್ನು ಕೇಂದ್ರೀಕರಿಸುತ್ತದೆ.
ಉತ್ಪನ್ನ ವಿನ್ಯಾಸ, ಅಭಿವೃದ್ಧಿ ಹಾಗೂ ಪೂರೈಕೆಗೆ, ಅದರಲ್ಲೂ ವಿಶೇಷವಾಗಿ ಭಾರತೀಯ ಗ್ರಾಹಕ ಮಾರುಕಟ್ಟೆಗೆ ಒದಗಿಸಲು ಕೇಂದ್ರವು ಸ್ಥಳೀಯ ಪರಿಣತಿ ಮೇಲೆ ಗಮನವನ್ನು ಕೇಂದ್ರಿಕರಿಸುತ್ತದೆ.

ಮಧು ಮೇಹಿಗಳು ಹಾಗೂ ಮಧುಮೇಹ ಪೂರ್ವ ಸ್ಥಿತಿಗೆ ಆಹಾರ ಘಟಕಾಂಶಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸ್ಥಳೀಯ ರುಚಿ ಮತ್ತು ಸ್ವಾದಗಳ ಅಂಶದ ಮೇಲೆ ಗಮನ ಹರಿಸಲಾಗುವುದು.
ಅಬ್ಬಾಟ್ ಸಂಶೋಧಕರೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತದ ಅತಿ ದೊಡ್ಡ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ಬಯೋಕಾನ್ ಸಮೂಹದ ಉಪ ಸಂಸ್ಥೆಯಾದ ಸಿಂಜೀನ್ನೊಂದಿಗೆ ಸಹಯೋಗವನ್ನು ಏರ್ಪಡಿಸಿಕೊಂಡಿದೆ ಎಂದು ಬಯೋಗಾನ್ ಮುಖ್ಯಸ್ಥೆ ಕಿರಣ್ ಮಜುಮದಾರ್ ಶಾ ತಿಳಿಸಿದರು.

ಅಬ್ಬಾಟ್ನ ಜಾಗತಿಕ ಪೌಷ್ಠಿಕತೆ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಜಾನ್ ಲ್ಯಾಂಡ್ ಗ್ರಾಫ್ ಮಾತನಾಡಿ, `ವೈಜ್ಞಾನಿಕ ಪರಂಪರೆಯು ನಮ್ಮ ಕಂಪೆನಿಯ ಚಾಲನ ಶಕ್ತಿಯಾಗಿದೆ.ನಗರದಲ್ಲಿ ಸ್ಥಾಪಿತವಾಗಿರುವ ಈ ಹೊಸ ಪೌಷ್ಠಿಕತೆ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದಿಂದ ನಾವು ಭಾರತೀಯ ಮಾರುಕಟ್ಟೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದೇವೆ. ಅಲ್ಲದೇ, ಭಾರತೀಯ ಗ್ರಾಹಕರ ಪೌಷ್ಠಿಕತೆ ಸಂಬಂಧಿತ ಅವಶ್ಯಕತೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.