ಭಾನುವಾರ, ಸೆಪ್ಟೆಂಬರ್ 22, 2019
22 °C

ಪ್ಯಾಕೇಜಿಂಗ್ ತಂತ್ರಜ್ಞಾನ ಸಮ್ಮೇಳನ

Published:
Updated:

ಬೆಂಗಳೂರು: ಪ್ಯಾಕೇಜಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ವಾಯತ್ತ ಸಂಸ್ಥೆ ಭಾರತೀಯ ಪ್ಯಾಕೇಜಿಂಗ್ ಸಂಸ್ಥೆಯು (ಐಐಪಿ), ಹೈದರಾಬಾದ್‌ನಲ್ಲಿ 14ನೇಯ `ಇಂಡ್‌ಪ್ಯಾಕ್-2011~ ಸಮ್ಮೇಳನ  ಆಯೋಜಿಸಿದೆ.ಮೂರು ದಿನಗಳ ಈ ರಾಷ್ಟ್ರೀಯ ಸಮ್ಮೇಳನವು ಈ ವರ್ಷದ ನವೆಂಬರ್ 24ರಿಂದ 26ರವರೆಗೆ ಹೈದರಾಬಾದ್‌ನ ಅಂತರರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ  ನಡೆಯಲಿದೆ. `ಭವಿಷ್ಯದ ಪ್ಯಾಕೇಜಿಂಗ್~ ಈ ಸಮಾವೇಶದ ಮುಖ್ಯ ಧ್ಯೇಯವಾಗಿರಲಿದೆ.ಪ್ರದರ್ಶನದ ಪೂರ್ವಭಾವಿ ಸಮಾರಂಭವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. `ಐಐಪಿ~ ನಿರ್ದೇಶಕ ಪ್ರೊ. ಎನ್. ಸಿ. ಸಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  `ಐಐಪಿ~ ಉಪಾಧ್ಯಕ್ಷ ದಿವಾಕರ ಶೆಟ್ಟಿ, ಹೈದರಾಬಾದ್ `ಐಐಪಿ~ ಅಧ್ಯಕ್ಷ ಎ. ವಿ. ಪಿ. ಎಸ್. ಚಕ್ರವರ್ತಿ, ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ ಪಿ. ದಾಸಗುಪ್ತಾ ಮತ್ತಿತರರು ಭಾಗವಹಿಸಿದ್ದರು.

Post Comments (+)