ಮಂಗಳವಾರ, ಮೇ 24, 2022
30 °C

ಪ್ಯಾರಸಿಟಮಾಲ್ ಗುಳುಂ... ಜೋಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ನೋವು ನಿವಾರಣೆಗೆ ಪ್ಯಾರಸಿಟಮಾಲ್ ಬಳಸುವವವರಲ್ಲಿ ಶೇ 25ರಷ್ಟು ಮಂದಿ ಅಪಾಯಮಟ್ಟಕ್ಕಿಂತ ಅಧಿಕವಾಗಿ ಅದನ್ನು ಸೇವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ದೃಢಪಡಿಸಿದೆ.ದಿನವೊಂದಕ್ಕೆ ಒಬ್ಬ ವ್ಯಕ್ತಿ ಗರಿಷ್ಠ 4 ಗ್ರಾಂ ಪ್ಯಾರಸಿಟಮಾಲ್ ಬಳಸಬಹುದಾಗಿದೆ. ಒಮ್ಮೆಗೆ 500 ಮಿ.ಗ್ರಾಂ.ನ ತಲಾ ಎರಡು ಮಾತ್ರೆಗಳಂತೆ, ತಲಾ ನಾಲ್ಕು ತಾಸುಗಳ ಅಂತರದಲ್ಲಿ ಗರಿಷ್ಠ ಎಂಟು ಮಾತ್ರೆಗಳನ್ನು ಮಾತ್ರ ನುಂಗಬಹುದು. ಆದರೆ ಎಷ್ಟೋ ಮಂದಿ ಇದನ್ನು ಲೆಕ್ಕಿಸದೆ ಪ್ಯಾರಸಿಟಮಾಲ್‌ನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಷಿಕಾಗೊದ ನಾರ್ಥ್‌ವೆಸ್ಟರ್ನ್ ವಿ.ವಿ ಯ ಸಂಶೋಧಕರು ವಿವರಿಸಿದ್ದಾರೆ.ಅಸಿಟಮಿನೊಫಿನ್ ಅಂಶವಿರುವ ಪ್ಯಾರಸಿಟಮಾಲ್‌ನ್ನು ನಿಗದಿಗಿಂತ ಹೆಚ್ಚು ಬಳಸಿದರೆ ಯಕೃತ್ತಿಗೆ ಹಾನಿಯಾಗುವ ಹಾಗೂ ಮಿದುಳಿನಲ್ಲಿ ದ್ರವ ತುಂಬಿಕೊಳ್ಳುವ ಅಪಾಯಗಳಿರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.ಅಮೆರಿಕದಲ್ಲಿ, 2009ರಿಂದ 2011ರ ಅವಧಿಯಲ್ಲಿ, ಆಸ್ಪತ್ರೆಗಳ ಸಾಮಾನ್ಯ ಚಿಕಿತ್ಸಾ ವಿಭಾಗದ 500 ಹೊರರೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ಸಂಗತಿ ಬಹಿರಂಗಗೊಂಡಿದೆ ಎಂದು ತಜ್ಞರು ವಿವರಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.