ಶುಕ್ರವಾರ, ಜೂನ್ 18, 2021
28 °C

ಪ್ರಕರಣ ಮುಚ್ಚಿ ಹಾಕುವ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ಘಟನೆಗೆ ಸಂಬಂಧಿಸಿದ ಸದನದ ವಿಚಾರಣಾ ಸಮಿತಿ ಸದಸ್ಯ ನೆಹರು ಓಲೇಕಾರ್ ಅವರು, ನೀಡಿರುವ ಬಹಿರಂಗ ಹೇಳಿಕೆ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷಗಳು, ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿವೆ.`ವಿಚಾರಣೆ ಎದುರಿಸುತ್ತಿರುವ ಮೂವರು ಮಾಜಿ ಸಚಿವರಲ್ಲದೆ ಇನ್ನೂ ಹಲವು ಶಾಸಕರು ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿರುವ ಬಗ್ಗೆ ದಾಖಲೆಗಳಿವೆ~ ಎಂಬ ಓಲೇಕಾರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ತನಿಖೆ ಪ್ರಗತಿಯಲ್ಲಿರುವಾಗಲೇ ಸಮಿತಿಯ ಸದಸ್ಯರು ಈ ರೀತಿ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಜನತೆಯನ್ನು ದಿಕ್ಕುತಪ್ಪಿಸುವ ಉದ್ದೇಶದಿಂದಲೇ ಇಂತಹ ಹೇಳಿಕೆ ನೀಡಲಾಗಿದೆ~ ಎಂದು ದೂರಿದರು.`ಇಡೀ ಪ್ರಕರಣವನ್ನೇ ಮುಚ್ಚಿಹಾಕುವ ಅನುಮಾನ ಕಾಡುತ್ತಿದೆ. ಮಾಜಿ ಸಚಿವರ ರಕ್ಷಣೆಗೆ ಸರ್ಕಾರದ ಕಡೆಯಿಂದ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಕರಣದ ಗಂಭೀರತೆ ಕುಗ್ಗಿಸವಂತಹ ಹೇಳಿಕೆಗಳು ಬಹಿರಂಗವಾಗಿವೆ~ ಎಂದು ಅಸಮಾಧಾನಪಟ್ಟರು.ತಪ್ಪಿಸಿಕೊಳ್ಳುವ ಯತ್ನ: `ವಿರೋಧ ಪಕ್ಷಗಳ ಶಾಸಕರೂ ಬ್ಲೂ ಫಿಲಂ ವೀಕ್ಷಿಸಿದ್ದಾರೆ ಎಂಬ ಹೇಳಿಕೆ ಮೂಲಕ ಬಿಜೆಪಿ ಶಾಸಕರ ರಕ್ಷಣೆಗೆ ಓಲೇಕಾರ್ ಯತ್ನಿಸಿದ್ದಾರೆ. ನಮ್ಮ ಶಾಸಕರಷ್ಟೇ ಅಲ್ಲ, ನಿಮ್ಮ ಶಾಸಕರೂ ನೋಡಿದ್ದಾರೆ ಎಂದು ವಿರೋಧ ಪಕ್ಷಗಳನ್ನು ಪ್ರಶ್ನಿಸುವ ಧಾಟಿಯಲ್ಲಿ ಅವರು ಮಾತನಾಡಿದ್ದಾರೆ~ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.