ಭಾನುವಾರ, ಜನವರಿ 19, 2020
25 °C

ಪ್ರಕೃತಿ ಸೊಬಗಿಗೆ ಮಾರುಹೋಗಿದ್ದ ಜಿಎಸ್ಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ತಪ್ಪಲಿನಲ್ಲಿರುವ ಗಿರಿಶ್ರೇಣಿಗಳ ಪ್ರಕೃತಿ ಸೊಬಗಿಗೆ ಮಾರುಹೋಗಿದ್ದವರು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ.ಚಿಕ್ಕಮಗಳೂರು ಜಿಲ್ಲೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಪ್ರಕೃತಿ ಸೌಂದರ್ಯದ ನಡುವೆ ಗಂಟೆ ಗಟ್ಟಲೆ ಮೌನವಾಗಿ ಕುಳಿತು ಹಚ್ಚ ಹಸುರಿನ ಪರಿಸರವನ್ನು ಆಸ್ವಾದಿಸಿದ್ದರು.ಕಳೆದ 2005ರಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಆಟದ ಮೈದಾನದಲ್ಲಿ ಆಯೋ ಜಿಸಿದ್ದ 5ನೆಯ ರಾಜ್ಯ ಸಮೇಳನ  ನಿತ್ಯೋತ್ಸವ –5 ಕಾರ್ಯಕ್ರಮವನ್ನು ಉದ್ಘಾಟಿಸಿ ನಗರದಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡಿದ್ದರು.ನಿತ್ಯೋತ್ಸವ ಕಾರ್ಯಕ್ರಮದ ಎಲ್ಲಾ ಗೋಷ್ಠಿಗಳಲ್ಲೂ ಭಾಗವಹಿಸಿದ್ದರು. ಗಾಯನ ಸಿ.ಅಶ್ವತ್ಥ್, ಡಾ.ಸಿದ್ದಲಿಂಗಯ್ಯ, ಎಚ್‌.ಎಸ್‌.ವೆಂಕಟೇಶಮೂರ್ತಿ, ಬಿ. ಆರ್. ಲಕ್ಷ್ಮಣರಾವ್,  ನರಹಳ್ಳಿ ಬಾಲಸುಬ್ರಹ್ಮಣ್ಯ ಅವರೊಂದಿಗಿದ್ದರು.ಕಳೆದ 2007ರಲ್ಲಿ ಸುಗಮ ಸಂಗೀತ ಸಂಸ್ಥೆ  ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್. ಶಿವರು ದ್ರಪ್ಪನವರ ಕಾವ್ಯಗಾಯನ, ಕವಿನಮನ ಕಾರ್ಯಕ್ರಮದಲ್ಲಿ  ಭಾಗವಹಿಸಿ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಮರುದಿನ ಕಾರ್ಯಕ್ರಮ ಸಂಘಟಕ ರೊಂದಿಗೆ ರಾಜ್ಯದ ಅತಿ ಎತ್ತರವಾದ ಬೆಟ್ಟ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ಸುತ್ತಮುತ್ತಲ ಪ್ರಕೃತಿ ಸೌಂದ ರ್ಯವನ್ನು ಕಣ್ತುಂಬಿ ಕೊಂಡಿದ್ದರು.ಹೊನ್ನಮ್ಮಳ ಹಳ್ಳಕ್ಕೆ ಬಂದು ಬಾಗುತ, ಬಳುಕತ ಧುಮ್ಮಕ್ಕಿ ಬೀಳುತ್ತಿದ್ದ ನೀರನ್ನು ವೀಕ್ಷಿಸಿ  ಅಲ್ಲೆ ಹತ್ತಿರದ ಸ್ಥಳಕ್ಕೆ ತೆರಳಿ ಪ್ರಕೃತಿ ಸೊಬಗಿನ ನಡುವೆ ಗಂಟೆಗಟ್ಟಲೆ ಒಬ್ಬರೆ ಕುಳಿತುಕೊಂಡು ಪ್ರಕೃತಿ ಸೌಂದರ್ಯ ಆಸ್ವಾದಿಸಿದ್ದರು.ಜಿಎಸ್ಎಸ್ ನಿಧನಕ್ಕೆ ವಿವಿಧೆಡೆ ಸಂತಾಪ

ಚಿಕ್ಕಮಗಳೂರು:
  ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಸುಗಮ ಸಂಗೀತ ಸಂಸ್ಥೆ ಸಂತಾಪ ಸೂಚಿಸಿದೆ.

ಇವರ ಅಗಲಿಕೆಗೆ ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ,  ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್, ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಆಳ್ವಸ್ ವಿಶ್ವನು ಡಿಸಿರಿ ವಿರಾಸತ್ ಜಿಲ್ಲಾಧ್ಯಕ್ಷ ಸ.ಗಿರಿಜಾ ಶಂಕರ, ಕಲ್ಕಟ್ಟೆ ಪುಸ್ತಕದ ಮನೆ ರೇಖಾ ನಾಗರಾಜರಾವ್ ಸಂತಾಪ ಸೂಚಿಸಿದ್ದಾರೆ.ಮೂಡಿಗೆರೆ: ರಾಷ್ಟ್ರಕವಿ ಜೆ.ಎಸ್.ಶಿವರು ದ್ರಪ್ಪ ಅವರ ನಿಧನಕ್ಕೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.

ನಿಧನದ ಸುದ್ದಿ ಹರಡುತ್ತಿದ್ದದಂತೆ ಪಟ್ಟಣದ ಜೇಸಿಐ ಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಸಂತಾಪ ಸಭೆ ನಡೆಸಿ, ಜೆಎಸ್ಎಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಜೆಎಸ್ಎಸ್ ನಿಧನದಿಂದ  ಸಾಹಿತ್ಯ ಲೋಕಕ್ಕೆ ಇಂದು ತುಂಬಲಾರದ ನಷ್ಟವಾಗಿದೆ. ಇವರು ದಿನನಿತ್ಯದ ಬದುಕಿನಲ್ಲಿ ನಡೆಯುತ್ತಿದ್ದ ಘಟನೆಗಳ ಮೂಲಕವೇ ಜೀವನದ ಸವಿಯನ್ನು ಅನುಭವಿಸಬಹುದಾದ ಮಾರ್ಗವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಕವಿಯಾಗಿದ್ದು, ಇವರ ನಿಧನ ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲದೇ, ರಾಷ್ಟ್ರದ ಸಾಹಿತ್ಯ ಲೋಕವೇ ಒಬ್ಬ ಶ್ರೇಷ್ಟ ಸಾಹಿತಿಯನ್ನು ಕಳೆದುಕೊಂಡಿದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೇಸಿಐ ಅಧ್ಯಕ್ಷ ಪ್ರಸನ್ನಗೌಡಳ್ಳಿ ಮಾತನಾಡಿ, ಜೆಎಸ್ಎಸ್ ಅವರು ನವೋದಯ ಕಾಲಘಟ್ಟದಲ್ಲಿ ರಾಷ್ಟ್ರ ಕಂಡ ಮಹಾನ್ ಸಾಹಿಯಾಗಿದ್ದರು. ಇಡೀ ದೇಶದಲ್ಲಿಯೇ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟತೆ ಲಭಿಸಲು ಜೆಎಸ್ಎಸ್ ಕೂಡ ಒಬ್ಬರಾಗಿದ್ದರು. ಇಂತಹ ಮಹಾನ್ ಚೇತನವನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಬಡವಾಗಿದೆ ಎಂದರು.ಸಂತಾಪ ಸಭೆಯಲ್ಲಿ ಜೆಎಸ್ಎಸ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಿಸಿದರು.ಸಭೆಯಲ್ಲಿ ಮಗ್ಗಲಮಕ್ಕಿ ಗಣೇಶ್, ಕಸಾ ಪದ ಹಾ.ಬಾ. ನಾಗೇಶ್, ಮಣಿಕಂಠ, ವಾಸುದೇವ್, ಪ್ರಕಾಶ್, ಅಣ್ಣಾ ನಾಯಕ್, ಮಣಿಕಂಠ, ಸರೋಜ ಸುರೇಂದ್ರ, ಉದಯಶಂಕರ್ ಇದ್ದರು.ಬಾಳೆಹೊನ್ನೂರು: ಮಂಜೇಶ್ವರ ಗೋವಿಂದ ಪೈ ಮತ್ತು  ಕುವೆಂಪುರವರ ನಂತರ ಮೂರನೇ ಕನ್ನಡದ ರಾಷ್ಟ್ರಕವಿ ಎಂಬ ಹೆಗ್ಗಳಿಕೆ ಹಾಗು ಕೀರ್ತಿಗೆ ಪಾತ್ರ ರಾಗಿದ್ದ ಜಿ.ಎಸ್.ಶಿವರು ದ್ರಪ್ಪನವರ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನರಸಿಂಹರಾಜಪುರ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ  ಚೈತನ್ಯ ವೆಂಕಿ ಹೇಳಿದರು.ಜಿ.ಎಸ್.ಎಸ್. ನಿಧನದಿಂದ ನವೋ ದಯ ಸಾಹಿತ್ಯ ಪರಂಪರೆಯ ಕೊಂಡಿ ಯೊಂದು ಕಳಚಿದಂತಾಗಿದ್ದು, ಅವರಿ ಲ್ಲದೆ ಸಾಹಿತ್ಯ ಲೋಕ ಬಡವಾಗಿದೆ ಮತ್ತು ಬರಿದಾಗಿದೆ.ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯದ್ಬು ತವಾದ ಕೊಡುಗೆಗಳನ್ನು ನೀಡಿ ಹಲವು ಪ್ರಥಮಗಳಿಗೆ ಕಾರಣರಾಗಿದ್ದ, ಜಿ.ಎಸ್. ಎಸ್. ಕನ್ನಡಿಗರಿಗೆ ಪ್ರೇರಕ ಶಕ್ತಿ ಯಾಗಿ,ಅದಮ್ಯ ಚೇತನವಾಗಿದ್ದರು.ಕೊಪ್ಪ: ‘ರಾಷ್ಟ್ರಕವಿ’ ಜಿ.ಎಸ್. ಶಿವ ರುದ್ರಪ್ಪ ಅವರ ನಿಧನಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಸ್. ನಟರಾಜ್ ಗುಡ್ಡೇತೊಟ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ ಶಿವರುದ್ರಪ್ಪ ನಿಧನದಿಂದ ಸಾಹಿ ತ್ಯ ಕ್ಷೇತ್ರ ಬಡವಾಗಿದೆ ಎಂದಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹು.ವಾ. ಶ್ರೀವತ್ಸ ಹುಲ್ಸೆ, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಎಸ್. ಕಳಸಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನೆ.ಲ. ಸುಬ್ರಹ್ಮಣ್ಯ, ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕುಂಚೂರು ರತ್ನಾಕರ್, ಕಸಬಾ ಹೋಬಳಿ ಅಧ್ಯಕ್ಷ ಎ.ಈ. ಅಶೋಕ್, ಹರಿಹರಪುರ ಹೋ ಬಳಿ ಅಧ್ಯಕ್ಷ ಎ.ಒ.ವೆಂಕಟೇಶ್, ಎಚ್.ವಿ. ಶಿವಾನಂದರಾವ್, ಶಂ.ನ. ಶೇಷಗಿರಿ ಸಂತಾಪ ಸೂಚಿಸಿದರು.

ಪ್ರತಿಕ್ರಿಯಿಸಿ (+)