ಮಂಗಳವಾರ, ಮೇ 18, 2021
22 °C

ಪ್ರಜಾ ನ್ಯಾಯಾಲಯದ ತೀರ್ಮಾನ ಎದುರು ನೋಡುತ್ತಿರುವ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಮಾವೊವಾದಿಗಳು ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿದ ಘಟನೆಗೆ ಸೋಮವಾರಕ್ಕೆ ಒಂದು ತಿಂಗಳ ಸಂದಿದೆ. ಅವರ ಬಿಡುಗಡೆಗೆ ಈ 25ರಂದು ಪ್ರಜಾ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದ್ದು, ಸರ್ಕಾರ ಇದನ್ನು ತೀವ್ರ ಕುತೂಹಲದಿಂದ ಎದುರು ನೋಡುತ್ತಿದೆ.ಪ್ರಜಾ ನ್ಯಾಯಾಲಯದಲ್ಲಿ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ ಎಂದು ಸಿಪಿಐ (ಮಾವೊವಾದಿ)ನ ಆಂಧ್ರಪ್ರದೇಶ-ಒಡಿಶಾ ಗಡಿ ವಿಶೇಷ ವಲಯ ಸಮಿತಿ (ಎಒಬಿಎಸ್‌ಝೆಡ್‌ಸಿ)  ಈಗಾಗಲೇ ಪ್ರಕಟಿಸಿದೆ. ಆದರೆ ಈ ಬಗ್ಗೆ ನಿರ್ದಿಷ್ಟ ಸ್ಥಳ ಮತ್ತು ಸಮಯ ಬಹಿರಂಗಪಡಿಸಿಲ್ಲ.ನಕ್ಸಲರ ಪ್ರಾಬಲ್ಯವಿರುವ ಕೊರಾಪತ್ ಜಿಲ್ಲೆಯ ನಾರಾಯಣಪಟ್ನಾದ ಪ್ರದೇಶವೊಂದರಲ್ಲಿ ಇಬ್ಬರು ಒತ್ತೆಯಾಳುಗಳ ಬಗ್ಗೆ ಈ ಪ್ರಜಾ ನ್ಯಾಯಾಲಯ ತೀರ್ಮಾನಿಸಲಿದೆ ಮತ್ತು ಹಿಕಾಕ ಅಪಹರಣದ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಮಾವೊವಾದಿಗಳ ಮೂಲಗಳು ತಿಳಿಸಿವೆ.ನಕ್ಸಲರು ಮೊದಲ ಬಾರಿಗೆ ಶಾಸಕರೊಬ್ಬರನ್ನು ಅಪಹರಿಸಿದ್ದು, ಅವರ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ನಕ್ಸಲರ ಬಿಡುಗಡೆಗೆ ಪಟ್ಟು ಹಿಡಿದಿದ್ದು, ಸರ್ಕಾರ ಸಹ 8 ಜನ ಮಾವೊವಾದಿಗಳು ಮತ್ತು 17 ಜನ ಚಾಸಿ ಮುಲಿಯಾ ಆದಿವಾಸಿ ಸಂಘದ ಸದಸ್ಯರ ಬಿಡುಗಡೆಗೆ ಸಮ್ಮತಿಸಿದೆ.ಜೈಲಿನಲ್ಲಿರುವ ಕೆಲ ಮಾವೊವಾದಿಗಳ ಬಿಡುಗಡೆಗೆ ಜಾಮೀನು ಮಂಜೂರು ಮಾಡಲಾಗಿದ್ದು, ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಉಳಿದವರ ಬಿಡುಗಡೆಗೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.