ಪ್ರತಿಕ್ರಿಯೆ

ಸೋಮವಾರ, ಜೂಲೈ 22, 2019
26 °C

ಪ್ರತಿಕ್ರಿಯೆ

Published:
Updated:

ಚಟದಲ್ಲೂ ಸಮಾನತೆ?

`ಒಳಗೆ ಸೇರಿದರೆ ಗುಂಡು'- ಅಗ್ರ ಲೇಖನ (29.06.2013- ಪವಿ ನಾಗ) ರಾಜ್ಯದಲ್ಲಿ ದಿನೇ ದಿನೇ ಮಹಿಳಾ ಮದ್ಯಪಾನಿಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.ಮಹಿಳೆ ಪುರುಷನಿಗೆ ಸಮಾನವಾಗಿ ಎಲ್ಲ ರಂಗದಲ್ಲೂ ಹೆಜ್ಜೆ ಹಾಕುವುದು  ಸ್ವಾಗತಾರ್ಹ. ಆದರೆ ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿಗೂ ಸಮಾನವಾಗಬೇಕೇ?

-ಶಂಕರ ಶೆಟ್ಟಿ ಕೊತ್ತಾಡಿ, ವಡ್ಡರ್ಸೆ .

ಮುಖ್ಯಮಂತ್ರಿ ನಿರುದ್ಯೋಗಿ ಯುವಕರಿಗೆ ಬಾರ್ ತೆಗೆಯುವ ಅವಕಾಶ ಕಲ್ಪಿಸಲು ಮುಂದಾಗಿರುವಾಗ, ರಾಜ್ಯದಲ್ಲಿ ಜನಸಾಮಾನ್ಯರ ಆರೋಗ್ಯಕ್ಕಿಂತ ಬೊಕ್ಕಸಕ್ಕೆ ಬರುವ ಆದಾಯವೇ ಮಹತ್ವದ್ದು ಎಂಬ ಸ್ವಾರ್ಥ ಚಿಂತನೆ ಎದ್ದು ಕಾಣುತ್ತದೆ.

ಆದರೆ ಸ್ವಯಂ ನಿರ್ಧಾರದಿಂದ ಮದ್ಯಪಾನ ಬಿಡುವುದರಿಂದ ಉತ್ತಮ ಆರೋಗ್ಯ, ಮಾನವೀಯ ಬದುಕು ಸಾಧ್ಯ ಎಂಬ ಸಾರ್ವಕಾಲಿಕ ಸತ್ಯವನ್ನು ಲೇಖನ ತೆರೆದಿಟ್ಟಿದೆ.

-ಕುಬೇರಪ್ಪ, ಹರಿಹರ .

ಸಾಮಾಜಿಕ ಕಳಕಳಿಯಿಂದ ಕೆಲವು ವೈದ್ಯರು ರೋಗಿಗಳಿಗೆ ತಮ್ಮ ಮೊಬೈಲ್ ನಂಬರ್ ಕೊಡುತ್ತಾರೆ. ಆದರೆ ಎಲ್ಲದಕ್ಕೂ ಅವರಿಗೆ ಫೋನ್ ಮಾಡುತ್ತಿದ್ದರೆ ಇಬ್ಬರಿಗೂ ತೊಂದರೆ ತಪ್ಪಿದ್ದಲ್ಲ. 

-ಸುಮಿತ್ರ ಎಸ್.ಶೆಟ್ಟಿ,  ಕುಂದಾಪುರ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry