ಶುಕ್ರವಾರ, ಜೂನ್ 25, 2021
30 °C

ಪ್ರತ್ಯೇಕ ಘಟನೆ: ಗೃಹಿಣಿ ಸೇರಿ ಇಬ್ಬರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರದಲ್ಲಿ ಪೆರು­ಮಾಳ್‌ (35) ಎಂಬುವರು ಭಾನು­ವಾರ ಆತ್ಮಹತ್ಯೆ ಮಾಡಿ­ಕೊಂಡಿದ್ದು, ಕಾಮಾಕ್ಷಿ­ಪಾಳ್ಯ ಸಮೀಪದ ಕಾವೇರಿ­ಪುರದಲ್ಲಿ ಶನಿವಾರ ರಾತ್ರಿ ರಾಧಾ (22) ಎಂಬುವರು ನೇಣು ಹಾಕಿ­ಕೊಂಡಿದ್ದಾರೆ. ಹೂ ವ್ಯಾಪಾರ ಮಾಡು­ತ್ತಿದ್ದ ಪೆರು­ಮಾಳ್‌, ಪತ್ನಿ ಜಯಶ್ರೀ ಮತ್ತು ಮಗಳ ಜತೆ ಮಲ್ಲೇಶ್ವರ 13ನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಪತ್ನಿ ಮತ್ತು ಮಗಳು ಬೆಳಿಗ್ಗೆ ಹೊರಗೆ ಹೋಗಿದ್ದಾಗ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ರಾಧಾ ಅವರ ಮದುವೆಯಾಗಿ ಆರು ವರ್ಷವಾಗಿತ್ತು. ಪತಿ ಉಲ್ಲಾಸ್‌್ ಮೊಬೈಲ್‌ ಅಂಗಡಿ ಇಟ್ಟು­ಕೊಂಡಿದ್ದಾರೆ. ಕುಟುಂಬದವರು ನಿದ್ರೆ ಮಾಡುತ್ತಿದ್ದ ಸಂದರ್ಭ­ದಲ್ಲಿ ರಾಧಾ ಅವರು ಕೊಠಡಿ­ಯೊಂದರಲ್ಲಿ ನೇಣು ಹಾಕಿ­ಕೊಂಡಿದ್ದಾರೆ. ಈ ಸಂಬಂಧ ಕಾಮಾಕ್ಷಿ­ಪಾಳ್ಯ ಪೊಲೀಸರು ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.