ಪ್ರದೇಶ ಯುವ ಕಾಂಗ್ರೆಸ್‌ಗೆ ಆಯ್ಕೆ

7

ಪ್ರದೇಶ ಯುವ ಕಾಂಗ್ರೆಸ್‌ಗೆ ಆಯ್ಕೆ

Published:
Updated:

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ರಾಜು ಕುನ್ನೂರು ಅವರನ್ನು ಅನರ್ಹಗೊಳಿಸಲಾಗಿದೆ.ಚುನಾವಣೆಗೆ ಸ್ಪರ್ಧಿಸಿದ್ದ ರಾಜು ಅವರು 1,425 ಮತ ಪಡೆದು 4ನೇ ಸ್ಥಾನ ಗಳಿಸಿದ್ದರು.

ಇವರನ್ನು ಕೈಬಿಟ್ಟ ನಂತರ ಪದಾಧಿಕಾರಿಗಳ ಪಟ್ಟಿಯನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಕಟಿಸಿದೆ.ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಜ್ವಾನ್ ಅರ್ಷದ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಖರ್ಗೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ವಿ.ಶ್ರೀನಿವಾಸ್, ಗೋಪಾಲಕೃಷ್ಣ ನಾಯಕ್, ಎ.ಪಿ.ಬಸವರಾಜು, ಲೋಕೇಶ್ ನಾಯಕ್ (ಎಸ್ಟಿ), ಜಿ.ಎಸ್.ಕಾರ್ತಿಕ್ (ಒಬಿಸಿ), ಮೊಹಮದ್ ಅಕ್ರಂ (ಅಲ್ಪಸಂಖ್ಯಾತ) ಮತ್ತು ಕೆ.ಗೀತಾ (ಮಹಿಳೆ) ಅವರು ಚುನಾಯಿತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry