ಭಾರತೀಯ ಪ್ರವಾಸಿಗರು ಈಗ ತಮ್ಮ ಪ್ರವಾಸ ಕಾಲದಲ್ಲಿ ದೇಹಾರೋಗ್ಯ ಮತ್ತು ಶುಚಿ ಆಹಾರಕ್ಕೆ ಮಹತ್ವ ಕೊಡುತ್ತಿದ್ದಾರೆ.

ವಿಶ್ವದ ಪ್ರಮುಖ ಪ್ರವಾಸಿ ಮಾಹಿತಿ ಮತ್ತು ಸೇವೆಗಳ ಇಂಟರ್ನೆಟ್ ತಾಣ `ಟ್ರಿಪ್ ಅಡ್ವೈಸರ್~ ನಡೆಸಿದ ಸಮೀಕ್ಷೆ ಈ ಅಂಶವನ್ನು ದೃಢಪಡಿಸಿದೆ.

ಪರ್ವತ ಪ್ರದೇಶದ ಪ್ರವಾಸವನ್ನು ಶೇ 47ರಷ್ಟು ಜನ ಮತ್ತು ಸಮುದ್ರ ತೀರಗಳನ್ನು ಶೇ 36 ರಷ್ಟು ಜನ ಹೆಚ್ಚು ಇಷ್ಟಪಡುತ್ತಾರೆ. ರಜಾ ಪ್ರವಾಸದಲ್ಲಿ ಇದ್ದಾಗಲೂ ವ್ಯಾಯಾಮ, ಯೋಗ, ಧ್ಯಾನ, ನಡಿಗೆ, ಈಜು ಮತ್ತಿತರ ದೇಹಸ್ವಾಸ್ತ್ಯದ ಚಟುವಟಿಕೆ ನಡೆಸುವವರ ಸಂಖ್ಯೆ ಶೇ 74. ಶೇ 24 ಜನ ಸ್ಪಾ ಸೇವೆ ಇಷ್ಟಪಟ್ಟರೆ ಶೇ 12 ರಷ್ಟು ಜನ ಯೋಗದ ಮೊರೆ ಹೋಗುತ್ತಾರೆ.

ಆಹಾರ ಮತ್ತು ನೀರಿನ ಬಗ್ಗೆ ಪ್ರವಾಸಿಗಳ ಕಾಳಜಿ ಹಿಂದಿಗಿಂತ ಬಹಳಷ್ಟು ಹೆಚ್ಚಿದೆ. ಶೇ 60ರಷ್ಟು ಜನ ಬ್ರಾಂಡೆಡ್ ಅಥವಾ ಹೋಟೆಲ್ನಲ್ಲಿ ಸಿಗುವ ನೀರನ್ನೇ ಬಳಸುತ್ತಾರೆ. ಶೇ 42ರಷ್ಟು ಜನಕ್ಕೆ ಐಸ್ ಇಷ್ಟವಾಗುವುದಿಲ್ಲ. ಶೇ 54ರಷ್ಟು ಜನ ಬೀದಿ ಬದಿ ಅಂಗಡಿಗಳ ತಿಂಡಿ ತಿನಿಸಿನಿಂದ ದೂರ ಇದ್ದರೆ, ಶೇ 40ರಷ್ಟು ಜನ ಮಾಂಸಾಹಾರವನ್ನು ಪೂರ್ಣ ತ್ಯಜಿಸುತ್ತಾರೆ.

ಆದರೆ ಮದ್ಯ ಸೇವನೆ (ಶೇ 46) ಮತ್ತು ಧೂಮಪಾನ (ಶೇ 30) ಹವ್ಯಾಸದಿಂದ ದೂರ ಇರುವುದು ಕಷ್ಟ ಎಂಬುದು ಪ್ರವಾಸಿಗಳ ಅಭಿಪ್ರಾಯ.

ಪುರುಷರಿಗೆ ಹೋಲಿಸಿದರೆ ಮಹಿಳಾ ಪ್ರವಾಸಿಗಳು ಆರೋಗ್ಯ, ಆಹಾರ, ಮದ್ಯ ಬಳಕೆಯಲ್ಲಿ ಹೆಚ್ಚು ಜಾಗೃತೆ ವಹಿಸುತ್ತಾರೆ ಎಂಬುದನ್ನು ಸಮೀಕ್ಷೆ ಬೆಳಕಿಗೆ ತಂದಿದೆ.
18-24 ವಯೋಮಾನದವರ ಪೈಕಿ ಶೇ 80ರಷ್ಟು ಜನ ಪ್ರವಾಸ ಕಾಲದಲ್ಲಿ ಸಿಗರೇಟ್ ದಂ ಎಳೆಯುತ್ತಾರೆ. ಅರ್ಧದಷ್ಟು ಹುಡುಗರು ಒಂದೆರಡು ಪೆಗ್ ರುಚಿ ನೋಡುತ್ತಾರೆ.

ಆದರೆ ಭಾರತೀಯ ಪ್ರವಾಸಿಗಳಲ್ಲಿ ದೇಶದೊಳಗೆ ತಿರುಗುವಾಗ ಪ್ರವಾಸಿ ವಿಮೆ ಮಾಡಿಸಿಕೊಳ್ಳುವ ಆಸಕ್ತಿ ತೀರಾ ಕಮ್ಮಿ ಎಂದು ಹೇಳುತ್ತಾರೆ ಟ್ರಿಪ್ಅಡ್ವೈಸರ್ನ ಕಂಟ್ರಿ ಮ್ಯಾನೇಜರ್ ನಿಖಿಲ್ ಗುಂಜು.

ಸಮೀಕ್ಷೆ ವಿವರಗಳು ಮತ್ತು ಎಲ್ಲ ಬಗೆಯ ಪ್ರವಾಸಿ ಮಾಹಿತಿಗಳು ಡಿಡಿಡಿ.ಠ್ಟಿಜಿಜಿಟ್ಟ.ಜ್ಞಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.