ಪ್ರವಾಸಿ ಎಚ್ಚರಿಕೆ ಹಿಂಪಡೆಯಲು ಭಾರತದ ಆಗ್ರಹ

7

ಪ್ರವಾಸಿ ಎಚ್ಚರಿಕೆ ಹಿಂಪಡೆಯಲು ಭಾರತದ ಆಗ್ರಹ

Published:
Updated:
ಪ್ರವಾಸಿ ಎಚ್ಚರಿಕೆ ಹಿಂಪಡೆಯಲು ಭಾರತದ ಆಗ್ರಹ

 

ಪೆರ್ಥ್ (ಪಿಟಿಐ) (ಆಸ್ಟ್ರೇಲಿಯ): ಪ್ರಸಕ್ತ ಪ್ರವಾಸಿ ಸಂದರ್ಭಕ್ಕೆ ವ್ಯತಿರಿಕ್ತವಾಗಿ ಆಸ್ಟ್ರೇಲಿಯವು, ಭಾರತಕ್ಕೆ ಪ್ರವಾಸ ಹೊರಡುವ ತನ್ನ ಪ್ರಜೆಗಳಿಗೆ ನೀಡಿದ ಪ್ರವಾಸಿ ಸಲಹೆಯ ಬಗ್ಗೆ ಮತ್ತು ಅದರಲ್ಲಿ ಬಳಸಿದ ಉತ್ಪ್ರೇಕ್ಷಿತ ಭಾಷೆಯ ಕುರಿತು ಭಾರತ ಗಂಭೀರ ನಿಲುವು ತಳೆದು, ಆ ಸಲಹೆಯನ್ನು ಹಿಂಪಡೆಯಲು ಬುಧವಾರ ಆಗ್ರಹಿಸಿದೆ.

ಸಿಎಚ್ಒಜಿಎಂ ವಿದೇಶಿ  ಸಚಿವರ ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್.ಎಂ.ಕೃಷ್ಣ ಅವರು, ಇಲ್ಲಿರುವ ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಚಿವ ಕೇವಿನ್ ರಡ್ ಅವರೊಂದಿಗೆ ಈ ವಿಷಯದ ಕುರಿತು ಪರಸ್ಪರ ಮಾತುಕತೆ ನಡೆಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತಕ್ಕೆ ಪ್ರವಾಸ ಹೊರಡುವ ತನ್ನ ಪ್ರಜೆಗಳಿಗೆ ಭಾರತ ಕುರಿತು ನೀಡಿದ ಸಲಹೆಯನ್ನು ಹಿಂಪಡೆಯುವಂತೆ ಕೃಷ್ಣ ಅವರು ರಡ್ ಅವರನ್ನು ಕೋರಿಕೊಂಡಿದ್ದಾರೆ.

~ಅದು ವಾಡಿಕೆಯಂತೆ ನೀಡಿದ ಸಲಹೆ, ಭಾರತದಲ್ಲಿ  ವಿದೇಶದ ಪ್ರವಾಸಿಗಳಿಗೆ ಬೆದರಿಕೆ ಇದೆ ಎಂಬ ಯಾವ ಮಾಹಿತಿಯೂ ತಮ್ಮಲಿಲ್ಲ ಎಂದು ರಡ್ ಅವರು ಕೃಷ್ಣ ಅವರಿಗೆ ತಿಳಿಸಿದ್ದಾರೆ.

ತಮ್ಮ ಪ್ರಜೆಗಳಿಗೂ ಈ ಬಗೆಯ ಸಲಹೆ ನೀಡಿರುವ ಕೆನಡಾ ಹಾಗೂ ನ್ಯೂಜಿಲೆಂಡ್ ನ ವಿದೇಶಾಂಗ ಖಾತೆ ಸಚಿವರೊಂದಿಗೆ ಕೃಷ್ಣ ಅವರು ಈ ಸಂಬಂಧ ಮಾತುಕತೆ ನಡೆಸಲಿದ್ದಾರೆ.

ಆಧಾರ ರಹಿತ ಎಚ್ಚರಿಕೆಯ ಸಲಹೆಗಳು ಭಾರತದ ಪ್ರವಾಸೋದ್ಯಮಕ್ಕೆ ಮಾರಕವಾಗಬಹುದು. ಅಮೆರಿಕ, ಆಸ್ಟ್ರೇಲಿಯ ದೇಶಗಳೂ ಸೇರಿದಂತೆ ಹಲವಾರು ದೇಶಗಳು ಭಾರತಕ್ಕೆ ಪ್ರವಾಸ ಹೊರಡುವ ತಮ್ಮ ದೇಶದ ಪ್ರಜೆಗಳಿಗೆ ಈ ಬಗೆಯ ಸಲಹೆ ನೀಡಿರುವುದನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry