ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ನಗರದ ವೈಟ್ಫೀಲ್ಡ್ನ ಕಾಳಪ್ಪ (45) ಬಂಧಿತ ಆರೋಪಿ. ಕಲಾವಿದನಾದ ಆತ ನಾಮಫಲಕ ಬರೆಯುವ ಕೆಲಸ ಮಾಡುತ್ತಿದ್ದ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಳಪ್ಪ, ಪ್ರಕರಣದ ಮತ್ತೊಬ್ಬ ಆರೋಪಿ ಮುನಾವರ್ ಬಾಷಾನ ಕಡೂರು ನಿವಾಸಕ್ಕೆ ಹೋಗಿ ಭೌತಶಾಸ್ತ್ರ ಮತ್ತು ಗಣಿತ ಪ್ರಶ್ನೆಪತ್ರಿಕೆ ವಿವರಗಳನ್ನು ಬರೆದುಕೊಂಡು ಬಂದಿದ್ದ. ಅಲ್ಲದೇ ಆತ, ಇನ್ನೊಬ್ಬ ಆರೋಪಿ ಟಿ.ಸೊಣ್ಣಪ್ಪನಿಗೆ ಸ್ನೇಹಿತನಾಗಿದ್ದಾನೆ.

. ಪ್ರಕರಣ ಸಂಬಂಧ ಈವರೆಗೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇತರೆ ಆರೋಪಿಗಳಾದ ಶಶಿಕಲಾ ಹಾಗೂ ನವೀನ್ಕುಮಾರ್ ಅವರ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸದ್ಯದಲ್ಲೇ ಅವರಿಬ್ಬರನ್ನೂ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.