ಭಾನುವಾರ, ಮೇ 9, 2021
17 °C

ಪ್ರೀತಿಗಿಂತ ಬದುಕು ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಗಿಂತ ಬದುಕು ದೊಡ್ಡದು

ದುಕನ್ನು ಗೌರವಿಸುವುದನ್ನು ಕಲಿಯಬೇಕು. ಅದಕ್ಕಿಂತ ದೊಡ್ಡದು ಬೇರೊಂದಿಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

`ಪ್ರತಿಯೊಬ್ಬರೂ ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಾರೆ.

ಹಾಗೆಂದ ಮಾತ್ರಕ್ಕೆ ಅದೇ ದೊಡ್ಡದಲ್ಲ. ನಮ್ಮೆಲ್ಲರಿಗೂ ಬದುಕು ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಪ್ರೀತಿಗೆ ಹೆಚ್ಚಿನ ಮಹತ್ವ ನೀಡಿ, ಅದು ವಿಫಲವಾದಾಗ ಬದುಕು ಕಳೆದುಕೊಳ್ಳುವುದು ದುರದೃಷ್ಟಕರ' ಎನ್ನುವುದು ಎಸ್‌ಆರ್‌ಕೆ ಅನಿಸಿಕೆ.



`ಪ್ರೀತಿ ಎಂಬುದಕ್ಕೆ ಮಿತಿಯೂ ಇಲ್ಲ. ಅದರ ವ್ಯಾಪ್ತಿ ಯಾರಿಗೂ ತಿಳಿದಿಲ್ಲ. ಆದರೆ ಅದು ಬದುಕಿನ ಭಾಗವೇ ಹೊರತು, ಬದುಕಿಗಿಂತ ದೊಡ್ಡದಲ್ಲ ಎನ್ನುವುದನ್ನು ಮನಗಾಣಬೇಕಿದೆ' ಎಂದು ಶಾರುಖ್ ಕಿವಿ ಮಾತು ಹೇಳಿದ್ದಾರೆ.



`ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದ ಪ್ರಚಾರದ ವೇಳೆ ಜಿಯಾ ಖಾನ್ ಆತ್ಮಹತ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಶಾರುಖ್ ಬದುಕು ಹಾಗೂ ಪ್ರೀತಿಯ ಮಹತ್ವವನ್ನು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.