ಶುಕ್ರವಾರ, ಜೂನ್ 18, 2021
23 °C
ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್‌ ಶುಭಾರಂಭ

ಪ್ರೀ ಕ್ವಾರ್ಟರ್ ಫೈನಲ್‌ಗೆ ಕಶ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಸೆಲ್‌ (ಪಿಟಿಐ): ಭಾರತದ ಪಿ.ಕಶ್ಯಪ್‌ ಹಾಗೂ ಆನಂದ್‌ ಪವಾರ್‌ ಅವರು ಇಲ್ಲಿ ನಡೆಯುತ್ತಿರುವ ₨ 77.5 ಲಕ್ಷ ಬಹುಮಾನ ಮೊತ್ತದ ಸ್ವಿಟ್ಜರ್‌ಲೆಂಡ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯ ಪುರುಷರ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಶುಭಾರಂಭ ಮಾಡಿದ್ದಾರೆ.ಮೂರನೇ ಶ್ರೇಯಾಂಕದ ಆಟಗಾರ ಕಶ್ಯಪ್‌ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ 21–15, 21–14ರಲ್ಲಿ ಜರ್ಮನಿಯ ಲೂಕಾಸ್‌ ಶ್ಮಿಟ್‌ ಎದುರು ಗೆಲುವು ಸಾಧಿಸಿದರು. ಭಾರತದ ಆಟಗಾರ ಎರಡೂ ಗೇಮ್‌ಗಳಲ್ಲಿ ಪಾರಮ್ಯ ಮೆರೆದರು.ಈ ಗೆಲುವಿಗಾಗಿ ಕಶ್ಯಪ್‌ ಕೇವಲ 33 ನಿಮಿಷ ತೆಗೆದುಕೊಂಡರು. 19ನೇ ರ್‍ಯಾಂಕ್‌ನ ಕಶ್ಯಪ್‌ ಅವರು ಹದಿನಾರರ ಘಟ್ಟದ ಪಂದ್ಯದಲ್ಲಿ ಮಲೇಷ್ಯಾದ ಬರಿನೊ ಜಿಯಾನ್‌ ಜೆ ವಾಂಗ್‌ ಎದುರು ಪೈಪೋಟಿ ನಡೆಸಲಿದ್ದಾರೆ. 123ನೇ ರ್‍ಯಾಂಕ್‌ನ ಬರಿನೊ ಎದುರು ಈ ಹಿಂದಿನ ಹೋರಾಟದಲ್ಲಿಕಶ್ಯಪ್‌ ಗೆಲುವು ಸಾಧಿಸಿದ್ದರು.ಮೊದಲ ಗೇಮ್‌ನಲ್ಲಿ ಅಲ್ಪ ಪ್ರತಿರೋಧ ಎದುರಿಸಿದ ಭಾರತದ ಆಟಗಾರ ಎರಡನೇ ಗೇಮ್‌ನಲ್ಲಿ ಮೇಲುಗೈ ಸಾಧಿಸಿದರು.

ಪವಾರ್‌ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ 21–11, 21–4ರಲ್ಲಿ ಜರ್ಮನಿಯ ಟೊಬಿಯಾಸ್‌ ವಾಡೆಂಕಾ ಎದುರು ಜಯ ಗಳಿಸಿದರು. ಈ ಪೈಪೋಟಿ 24 ನಿಮಿಷ ನಡೆಯಿತು. ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ ತುಂಬಾ ಸುಲಭವಾಗಿ ಗೆದ್ದರು.ಆದರೆ ತಮ್ಮ ಮುಂದಿನ ಪಂದ್ಯದಲ್ಲಿ ಅವರಿಗೆ ಕಠಿಣ ಸವಾಲು ಇದೆ. ಚೀನಾ ತೈಪಿಯ ಟಿಯಾನ್‌ ಚೆನ್‌ ಚೋ ಅವರನ್ನು ಎದುರಿಸಬೇಕಾಗಿದೆ. ಅವರ ಎದುರು ಈ ಹಿಂದಿನ ಎರಡೂ ಹೋರಾಟಗಳಲ್ಲಿ ಪವಾರ್‌ ಸೋಲು ಕಂಡಿದ್ದಾರೆ.ವಿಶ್ವದ ಏಳನೇ ರ್‍ಯಾಂಕ್‌ನ ಆಟಗಾರ್ತಿ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ 21–12, 21–12ರಲ್ಲಿ ಜಪಾನ್‌ನ ಶಿಸಾಟೊ ಹೋಶಿ ಎದುರು ಗೆಲುವು ಸಾಧಿಸಿದರು. ಅದಕ್ಕಾಗಿ ಸೈನಾ 34 ನಿಮಿಷ ತೆಗೆದುಕೊಂಡರು. ತಮ್ಮ ಮುಂದಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಸಶಿನಾ ವಿಗ್ನೆಸ್‌ ಎದುರು ಪೈಪೋಟಿ ನಡೆಸಲಿದ್ದಾರೆ. ಈ ಆಟಗಾರ್ತಿ ಎದುರು ಸೈನಾ ಹಿಂದಿನ ಎರಡೂ ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.