ಪುಣೆ (ಪಿಟಿಐ): ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.

ಪಿವೈಸಿ ಹಿಂದು ಜಿಮ್ಖಾನಾ ಭವನದಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಷಿಪ್ನ ಲೀಗ್ ಹಂತದಲ್ಲಿ ತಾವಾಡಿದ ಗುಂಪಿನಲ್ಲಿ ಪಂಕಜ್ ಅವರು ನಾಲ್ಕೂ ಪಂದ್ಯಗಳನ್ನು ಜಯಿಸಿದ್ದಾರೆ. `ಎ~ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಅವರು 102-36, 100-54, 100 (64)-56ರಲ್ಲಿ ತಮಿಳುನಾಡಿನ ಡಿ.ಭುವನೇಶ್ವರನ್ ವಿರುದ್ಧ ಗೆಲುವು ಪಡೆದರು. ಇದಕ್ಕೂ ಮುನ್ನ ಸಂದೀಪ್ ಗುಲಾಟಿ ಅವರನ್ನು ಕೇವಲ ಇಪ್ಪತ್ತೆಂಟು ನಿಮಿಷಗಳಲ್ಲಿ ಸೋಲಿಸಿ, ಗಮನ ಸೆಳೆದಿದ್ದರು.

ಬ್ರಿಜೇಶ್ ದಮಾನಿ ಹಾಗೂ ಸೌರವ್ ಕೋಠಾರಿ ಅವರೂ ತಾವಾಡಿದ `ಸಿ~ ಹಾಗೂ `ಇ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಮುಂದಿನ ಹಂತಕ್ಕೆ ಕಾಲಿಟ್ಟರು. ಕೊನೆಯ ಲೀಗ್ ಪಂದ್ಯದಲ್ಲಿ ಬ್ರಿಜೇಶ್ 100 (76)-66, 101-11, 37-100, 101-14ರಲ್ಲಿ ಮಹಾರಾಷ್ಟ್ರದ ಶೇಖರ್ ಸುರ್ವೆ ಅವರನ್ನು ಪರಾಭವಗೊಳಿಸಿದರು. `ಸಿ~ ಗುಂಪಿನಲ್ಲಿ ಗೀತ್ ಸೇಥಿ ಅವರಿಗೆ ಆಘಾತ ನೀಡಿ ಉತ್ತಮ ಆರಂಭ ಪಡೆದಿದ್ದ ಬ್ರಿಜೇಶ್ ಲೀಗ್ನಲ್ಲಿ ಅಜೇಯರಾಗಿ ಉಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.