ತಮ್ಮ ಚಿತ್ರ ಜನವರಿ 15ರಂದು ತೆರೆ ಕಾಣಿಸುವ ಉತ್ಸಾಹದಲ್ಲಿದ್ದ ‘ಮಸ್ತ್ ಮೊಹಬ್ಬತ್’ ಚಿತ್ರತಂಡ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ. ಜನವರಿ 15ರಂದು ಮೂರು ಕನ್ನಡ ಚಿತ್ರಗಳು ತೆರೆಗೆ ಬರುತ್ತಿರುವ ಕಾರಣ ‘ಮಸ್ತ್ ಮೊಹಬ್ಬತ್’ ಮತ್ತೆ ಕಾಯುವಂತಾಗಿದೆ.

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ‘ಹೊಸ ವರ್ಷಕ್ಕೆ ನನ್ನ ಮೊದಲ ಸಿನಿಮಾ’ ಎಂದು ಮುಗುಳ್ನಕ್ಕಿದ್ದರು ನಟ ಪ್ರೇಮ್. ‘ಸಾಫ್ಟ್ವೇರ್ ಕಂಪೆನಿಯೊಂದರ ಸಿಇಒ ಪಾತ್ರ ನನ್ನದು. ಹೆಚ್ಚು ಜವಾಬ್ದಾರಿ ಇರುವ, ಪ್ರೇತಿ ಪ್ರೇಮಕ್ಕೂ ಸಮಯವಿಲ್ಲ ಎನ್ನುವಂಥ ತರುಣನ ಪಾತ್ರ.

ಇಂಥ ವ್ಯಕ್ತಿಯ ಬದುಕಿನಲ್ಲಿ ತಂಗಾಳಿಯ ರೀತಿ ಯುವತಿಯೊಬ್ಬಳ ಪ್ರವೇಶ ವಾಗುತ್ತದೆ. ಆ ಅನಿರೀಕ್ಷಿತ ತಂಗಾಳಿಯ ಪ್ರವೇಶದ ನಂತರದ ತಿರುವುಗಳೇನು? ಪ್ರೀತಿಯ ಜೊತೆಗೆ ಆ ಯುವಕ ತನ್ನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಾನೆ ಎನ್ನುವ ಕುತೂಹಲ ಚಿತ್ರದಲ್ಲಿ ಇರಲಿದೆ. ಅದನ್ನು ತೆರೆಯ ಮೇಲೆ ನೋಡಿ’ ಎಂದರು ಪ್ರೇಮ್.

‘ಪ್ರೇಮ್ ಕಥೆ ಮತ್ತು ಸಿನಿಮಾದ ಬಗ್ಗೆ ಹೆಚ್ಚು ಕೇಳಿದರು. ಸಂಭಾವನೆ ಬಗ್ಗೆ ಅಲ್ಲ’ ಎಂದು ಸಿನಿಮಾಕ್ಕೆ ಕಥೆ ಬರೆದಿರುವ ವೇಣುಗೋಪಾಲ್ ಹೇಳಿದರು. ‘ಕೆಲವು ಸಂಬಂಧಗಳು ನಮ್ಮನ್ನು ಕಮಿಟ್ ಮಾಡಿಸುತ್ತವೆ. ನನಗೆ ಬರುವ ಲಾಭವನ್ನು ಖಂಡಿತಾ ಇಟ್ಟುಕೊಳ್ಳುವುದಿಲ್ಲ. ಅದನ್ನು ತಂತ್ರಜ್ಞರಿಗೆ ಹಂಚುವೆ ಎನ್ನುವ ನಿರ್ಮಾಪಕರ ಮಾತುಗಳು ಇಷ್ಟವಾದವು. ಅವರು ಲಕ್ಷ್ಮೀಪುತ್ರರು’ ಎಂದು ಪ್ರೇಮ್ ಅವರು ವೇಣುಗೋಪಾಲ್ ಮಾತಿಗೆ ಪ್ರತಿಕ್ರಿಯಿಸಿದರು.

ನಿರ್ಮಾಪಕ ವಿ. ಶೇಖರ್ ಮತ್ತು ನಿರ್ದೇಶಕ ಮೋಹನ್ ಮಾಳಗಿ ಅವರ ಮೊದಲ ಪ್ರಯತ್ನ ‘ಮಸ್ತ್ ಮೊಹಬ್ಬತ್್’. ‘ಒನ್ ಲೈಫ್, ಒನ್ ಲವ್’ ಪರಿಕಲ್ಪನೆಯಲ್ಲಿ ಮೋಹನ್ ಚಿತ್ರ ಮಾಡಿದ್ದಾರಂತೆ. ಲವ್–ಆಕ್ಷನ್–ಕಾಮಿಡಿ–ಫ್ಯಾಮಿಲಿ ಪ್ಯಾಕೇಜ್ ಚಿತ್ರ ಎನ್ನುವುದು ನಿರ್ದೇಶಕರ ಬಣ್ಣನೆ. ಹೈದರಾಬಾದ್, ಮಡಿಕೇರಿ, ಮೈಸೂರು, ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ 120 ದಿನಗಳ ಕಾಲ ಚಿತ್ರೀಕರಿಸಲಾಗಿದೆಯಂತೆ.

ರಾಜು ತಾಳಿಕೋಟೆ, ಶಕೀಲಾ, ಚಿಕ್ಕಣ್ಣ, ನವೀನ್ ಕೃಷ್ಣ ಮತ್ತಿತರರು ತಾರಾಗಣದಲ್ಲಿ ಇದ್ದಾರೆ. ‘ಬಾಹರ್ ಫಿಲಂಸ್’ ವಿತರಣೆಯ ಹಕ್ಕುಗಳನ್ನು ಪಡೆದಿದೆ. ಚಿತ್ರದ ಆರಂಭದಿಂದ ಬಿಡುಗಡೆವರೆಗಿನ ಕೆಲಸಗಳನ್ನು ನೆನಪಿಸಿಕೊಂಡರು ಚಿತ್ರಕ್ಕೆ ಕಥೆ ಬರೆದಿರುವ ವೇಣುಗೋಪಾಲ್. ಎಂಟು ಹಾಡುಗಳಿದ್ದು ಮನೋಮೂರ್ತಿ ಸಂಗೀತವಿದೆ. ವಿಜಯಕುಮಾರ್ ಚಿತ್ರದ ಛಾಯಾಗ್ರಹಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.