ಇದು ನಾನು ಎರಡನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ನನ್ನ ಕ್ಲಾಸಿನಲ್ಲಿ ನನ್ನ ಸ್ನೇಹಿತರ ಬಳಿ ಬಣ್ಣಬಣ್ಣದ ಪ್ಲೈವುಡ್ಗಳಿದ್ದವು. ಅವುಗಳ ಮೇಲೆ ಕಾರ್ಟೂನ್ ಚಿತ್ರಗಳಿದ್ದವು. ನನ್ನ ಬಳಿ ಪ್ಲೈವುಡ್ ಇರಲಿಲ್ಲ. ಮುಂದಿನ ಟೆಸ್ಟ್ ಅಷ್ಟೊತ್ತಿಗೆ ಅದೇ ತರಹದ ಪ್ಲೈವುಡ್ ತೆಗೆದುಕೊಂಡು ಹೋಗಬೇಕು ಅಂತ ಆಸೆಯಾಯಿತು.

ಶಾಲೆಯಿಂದ ಮನೆಗೆ ಬಂದು ಅಪ್ಪನಿಗೆ ಫೋನ್ ಮಾಡಿ, `ಕಲರ್ ಪ್ಲೈವುಡ್ ತನ್ನಿ' ಎಂದು ಕೇಳಿಕೊಂಡೆ.ರಾತ್ರಿ ಆಯ್ತು. ಮಳೆ ಬರುತ್ತಿತ್ತು. ಗುಡುಗು, ಥಂಡಿ ಗಾಳಿ. ಅಪ್ಪ ಬಂದರು. ನಾನು ಓಡಿಹೋಗಿ ಬಾಗಿಲು ತೆಗೆದು ಅಪ್ಪನ ಕೈಯಿಂದ ಬ್ಯಾಗ್ ಕಿತ್ತುಕೊಂಡೆ. ಅದರಲ್ಲಿ ನನಗೆ ಕಂಡಿದ್ದು ಬಣ್ಣ ಬಣ್ಣದ ಪ್ಲೈವುಡ್ ಅಲ್ಲ, ಬರೀ ವುಡನ್ ಪ್ಲೈವುಡ್! ಬೇಜಾರಾಯಿತು. `ಕಲರ್ ಪ್ಲೈವುಡ್ ಸಿಗಲಿಲ್ಲ ಪುಟ್ಟ' ಎಂದರು ಅಪ್ಪ.
ಆಗ ಇದ್ದಕ್ಕಿದ್ದಂತೆ ಏನೋ ಶಬ್ದವಾಯಿತು. ಯಾರೋ ಕಿಟಕಿಗೆ ಕಲ್ಲು ಹೊಡೆಯುತ್ತಿದ್ದಂತೆ ಶಬ್ದವಾಯಿತು. ಹೊರಗೆ ಹೋಗಿ ನೋಡಿದರೆ ಆಲಿಕಲ್ಲು ಬೀಳುತ್ತಿತ್ತು! ವ್ಹಾ!

ನಾನು ಪುಸ್ತಕದಲ್ಲಿ ಮಾತ್ರ ಆಲಿಕಲ್ಲು ನೋಡಿದ್ದೆ. ಈಗ ನಿಜವಾಗಿಯೂ ಆಲಿಕಲ್ಲು ಎಂದು ಖುಷಿಯಿಂದ ಟಬ್ ತೆಗೆದುಕೊಂಡು ಹೋಗಿ ಹೊರಗಡೆ ಇಟ್ಟೆ. ಟಪ್ ಟಪ್ ಎಂದು ಆಲಿಕಲ್ಲು ಬೀಳತೊಡಗಿದವು. ಅವುಗಳನ್ನು ಮುಟ್ಟಿದೆ. ಮೈ ಜುಂ ಅನ್ನಿಸಿತು. ಸ್ವಲ್ಪ ಹೊತ್ತಿಗೆ ಮಳೆ ನಿಂತುಹೋಯಿತು. ಆಮೇಲೆ ಪ್ಲೈವುಡ್ ವಿಚಾರ ಮತ್ತೆ ನೆನಪಾಯ್ತು.

ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಹೇಗೆಂದರೆ, `ಟೆಸ್ಟ್ ಬರೆಯುವಾಗ ನನ್ನ ಗಮನವೆಲ್ಲಾ ಪ್ಲೈವುಡ್ನ ಚಿತ್ರಗಳ ಕಡೆ ಇದ್ದು, ಉತ್ತರ ಬರೆಯುವುದರ ಕಡೆ ಸರಿಯಾಗಿ ಗಮನ ಕೊಡಲು ಆಗುತ್ತಿರಲಿಲ್ಲವೇನೋ...'- ಹೀಗೆ ನನ್ನನ್ನು ನಾನು ಸಮಾಧಾನಿಸಿಕೊಂಡೆ. ಆಮೇಲೆ ನನಗೆ ತುಂಬಾ ಇಷ್ಟವಾದ `ಹ್ಯಾರಿ ಪಾಟರ್'ನ ಹೆಸರನ್ನು ಸ್ಟೈಲ್ ಆಗಿ ಪ್ಲೈವುಡ್ ಮೇಲೆ ಬರೆದುಕೊಂಡೆ.

ಈಗ ನನಗನ್ನಿಸುತ್ತದೆ ಆ ಆಲಿಕಲ್ಲು ಮಳೆ ಬೀಳದಿದ್ದರೆ ನನ್ನ ಬೇಸರ ಕಡಿಮೆ ಆಗುತ್ತಿರಲಿಲ್ಲವೇನೊ? ಆಗ ಅಪ್ಪ ತಂದು ಕೊಟ್ಟ ವುಡನ್ ಪ್ಲೈವುಡ್ನ ಮಹತ್ವ ತಿಳಿಯುತ್ತಿರಲಿಲ್ಲ.

ಅದು ನಾನು ಕಂಡ ಮೊದಲ ಆಲಿಕಲ್ಲು ಮಳೆ.ಆ ಪ್ಲೈವುಡ್ ಇನ್ನೂ ನನ್ನ ಬಳಿ ಇದೆ. ಅದನ್ನು ಬಳಸುವಾಗ ಈಗಲೂ ಒಮ್ಮಮ್ಮೆ ಮಳೆ, ಆಲಿಕಲ್ಲು ನೆನಪಾಗುತ್ತದೆ.ಈಗ ಮಳೆಗಾಲ. ಆಲಿಕಲ್ಲು ಬೀಳುತ್ತದೇನೊ? ನೋಡಬೇಕು.
-ಅಕ್ಷರ ವಿನಾಯಕ ಬಾಗಿಲುಮನೆ
7ನೇ ತರಗತಿ, ತಿಪಟೂರು .

`ನೀವೂ ಬರೆಯಿರಿ' ಎಂದು ನಾವು ಕೊಟ್ಟ ಆಹ್ವಾನಕ್ಕೆ ಮಕ್ಕಳ ಸ್ಪಂದನ ಖುಷಿ ಕೊಡುವಂತಿದೆ. ಮಕ್ಕಳ ಜೊತೆಗೆ ಶಿಕ್ಷಕರೂ ಉತ್ಸಾಹದಿಂದ ಬರೆದಿದ್ದಾರೆ. ಹೀಗೆ ನಮ್ಮ ಕೈಸೇರಿದವುಗಳಲ್ಲಿ ಆಯ್ದ ಕೆಲವು ರಚನೆಗಳು ಇಲ್ಲಿವೆ. ನೀವೇ ರೂಪಿಸಿದ ಈ ವಿಶೇಷ ಪುಟ ಹೇಗಿದೆ ಎನ್ನುವುದಕ್ಕೆ ಒಂದು ಸಾಲು ಪತ್ರ ಬರೆಯಿರಿ. ಹಾಗೆಯೇ, ನಿಮ್ಮಳಗೊಂದು ಕಥೆಯೋ, ಪದ್ಯವೋ, ಪ್ರಸಂಗವೋ ಸುಳಿದಾಡುತ್ತಿದ್ದರೆ ಬರೆದು ಕಳಿಸಿಕೊಡಿ.

- ಸಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.