ಮಂಗಳವಾರ, ಜನವರಿ 28, 2020
25 °C

ಫರ್‍ಹಾನ್ ನಿಲ್ಲದ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ದೇಶಕನಾಗಿಯೂ ನಟನಾಗಿಯೂ ಯಶಸ್ವಿಯಾಗಿರುವ ಫರ್‍ಹಾನ್ ಅಖ್ತರ್ ಓಟ ಈ ವರ್ಷ ಇನ್ನೂ ವೇಗ ಪಡೆಯಲಿದೆ. ಕಾರಣ ಅವರೀಗ `ಭಾಗ್ ಮಿಲ್ಖಾ ಭಾಗ್~ ಚಿತ್ರದಲ್ಲಿ ಮಿಲ್ಖಾಸಿಂಗ್‌ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ಸ್ವತಂತ್ರಪೂರ್ವ ಭಾರತ ಅಥವಾ ಇಂದಿನ ಪಾಕಿಸ್ತಾನದಲ್ಲಿ ಕಳೆದ ಮಿಲ್ಖಾಸಿಂಗ್ ಬಾಲ್ಯ, ನಂತರ ಓಟದಲ್ಲಿ ಭಾರತವನ್ನು ಪ್ರತಿನಿಧಿಸಿ, ವಿಜೇತರಾಗಿದ್ದು, `ಫ್ಲೈಯಿಂಗ್ ಸಿಖ್~ ಎಂಬ ಖ್ಯಾತಿ ಪಡೆದಿದ್ದು ಇದೆಲ್ಲವನ್ನೂ ಆಧಾರವಾಗಿಟ್ಟುಕೊಂಡು `ಭಾಗ್ ಮಿಲ್ಖಾ~ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಈ ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸುತ್ತಿದ್ದಾರೆ.ಯಶಸ್ಸಿನ ರೇಸಿನಲ್ಲಿ ಫರ್‍ಹಾನ್ ಈಗ ಮಿಲ್ಖಾ ಪಾತ್ರ ನಿರ್ವಹಿಸಲು ಪ್ರತಿದಿನವೂ ನಿಗದಿತ ಅವಧಿಯಲ್ಲಿ ಓಟದ ಅಭ್ಯಾಸ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ತಮ್ಮ ಪಾಲಿನ ಭಾಗ್ಯ ಎಂದು ಬಣ್ಣಿಸಿರುವುದಷ್ಟೇ ಅಲ್ಲ, ಮಿಲ್ಖಾಸಿಂಗ್ ಅವರನ್ನು ಭೇಟಿ ಮಾಡಲು ಕಾತರದಿಂದ ಕಾಯುತ್ತಿರುವುದಾಗಿಯೂ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)