ಬುಧವಾರ, ಮೇ 12, 2021
25 °C

ಫಿಲಿಪ್ಸ್‌ನಿಂದ ಬಯೋಗ್ಯಾಸ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಿಲಿಪ್ಸ್‌ನಿಂದ ಬಯೋಗ್ಯಾಸ್ ಕೊಡುಗೆ

ಅಕ್ಷಯಪಾತ್ರೆ ಫೌಂಡೇಷನ್‌ನ ಬಿಸಿಯೂಟದ ಯೋಜನೆಗೆ `ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪ್' ಕೈಜೋಡಿಸಿದೆ. ವಸಂತಪುರದ ಅಕ್ಷಯಪಾತ್ರೆಯ ಅಡುಗೆಮನೆಗೆ ಸುಮಾರು ರೂ 15 ಲಕ್ಷ ವೆಚ್ಚದಲ್ಲಿ ಫಿಲಿಪ್ಸ್ ಕಂಪನಿ ಬಯೋಗ್ಯಾಸ್ ಯೂನಿಟ್‌ನ್ನು ನಿರ್ಮಿಸಿಕೊಟ್ಟಿದೆ. ಪರಿಸರ ದಿನದ ಸಂದರ್ಭದಲ್ಲಿ ಬಯೋಗ್ಯಾಸ್ ಯೂನಿಟ್‌ಗೆ ಫಿಲಿಪ್ಸ್ ಲೈಟಿಂಗ್ ನಿರ್ದೇಶಕ ನಟರಾಜ್ ಕುಮಾರ್ ಎಸ್. ಚಾಲನೆ ನೀಡಿದ್ದಾರೆ.



`ಈ ಯೂನಿಟ್ ದಿನಕ್ಕೆ 50 ಕೇಜಿಯಷ್ಟು ಇಂಧನವನ್ನು ಉಳಿಸಲಿದೆ. ತಿಂಗಳಿಗೆ 70 ಎಲ್‌ಪಿಜಿ ಸಿಲಿಂಡರ್‌ನ ಅಗತ್ಯವನ್ನು ಬಯೋಗ್ಯಾಸ್ ನೀಗಿಸಲಿದೆ. ಇದರಿಂದ ಅಕ್ಷಯಪಾತ್ರೆ ಯೋಜನೆಗೆ ವಾರ್ಷಿಕ  ರೂ15 ಲಕ್ಷ ಹಣ ಉಳಿತಾಯವಾಗಲಿದೆ.



ಪ್ರತಿದಿನ 1.2 ಲಕ್ಷ ಮಕ್ಕಳು ಅಕ್ಷಯಪಾತ್ರೆಯ ಮೂಲಕ ಹಸಿವು ನೀಗಿಸಿಕೊಳ್ಳುತ್ತಿದ್ದು ಈ ಯೋಜನೆಗೆ ಸಹಾಯ ಮಾಡುತ್ತಿರುವುದು ಸಂತೋಷ ತಂದಿದೆ. ಇದಲ್ಲದೆ ಫಿಲಿಪ್ಸ್ ಕಂಪನಿ  ಶಿಕ್ಷಣ, ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ'.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.