ಶುಕ್ರವಾರ, ಫೆಬ್ರವರಿ 26, 2021
22 °C

ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ಗೆ ಜಯ

ಬೆಂಗಳೂರು: ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್‌) ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿ ರುವ ಸೂಪರ್‌ ಡಿವಿಷನ್‌ ಫುಟ್‌ ಬಾಲ್‌ ಲೀಗ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ 5–1 ಗೋಲುಗಳಿಂದ ಜವಾಹರ ಯೂನಿಯನ್‌ ಎದುರು ಗೆಲುವು ಪಡೆಯಿತು.ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯೀ ತಂಡದ ಅಜರ್‌ ಜಮಾಲ್‌ 36ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಉಳಿದ ಗೋಲುಗಳನ್ನು ಪ್ರಕಾಶ್‌ (38ನೇ ನಿ.), ಮಣಿ (50ನೇ ನಿ.), ಸತೀಶ್‌ (79ನೇ ನಿ.) ಮತ್ತು ರಾಜೇಶ್‌ (88ನೇ ನಿ.) ಕಲೆ ಹಾಕಿದರು.ಅಗ್ರಸ್ಥಾನ:  ಹತ್ತು ಪಾಯಿಂಟ್‌ ಗಳಿಸಿರುವ ಸಿಐಎಲ್‌ ತಂಡ ಸೂಪರ್‌ ಡಿವಿಷನ್‌ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ.ಜಯ: ‘ಎ’ ಡಿವಿಷನ್‌ ವಿಭಾಗದ ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ತಂಡ 7–1 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್‌ ವಿರುದ್ಧ ಜಯ ಸಾಧಿಸಿತು. ಮೊಹಮ್ಮದ್‌ ರಜಾಕ್‌ (38ನೇ ನಿಮಿಷ), ದೀಪಕ್ (55ನೇ ನಿ.), ಸುಂದರೇಶನ್‌ (64, 69, 71 ಹಾಗೂ 79ನೇ ನಿ.), ಆರ್‌. ಬಿನಯ್ (65ನೇ ನಿ.) ಗೋಲು ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.