ಸೋಮವಾರ, ಜನವರಿ 27, 2020
15 °C

ಫುಟ್‌ಬಾಲ್‌: ಎಎಸ್‌ಸಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನೀರಜ್‌ ಸಿಂಗ್‌ ಅವರ ಚುರುಕಿನ ಆಟದ ನೆರವಿನಿಂದ ಬೆಂಗಳೂರು ಎಎಸ್‌ಸಿ ಸೆಂಟರ್‌ 17 ವಯೋಮಿತಿ ಒಳಗಿನ ಖ್ವಾಜಾ ಬಂದೇನವಾಜ್‌ ಗೋಲ್ಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.ಇಲ್ಲಿನ ಕೆಬಿಎನ್‌ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಎಎಸ್‌ಸಿ 5–0 ಗೋಲುಗಳಿಂದ ಬೆಂಗಳೂರು ಸರ್ಕಾರಿ ಕ್ರೀಡಾ ಶಾಲಾ ತಂಡವನ್ನು ಮಣಿಸಿತು.ಸರ್ಕಾರಿ ಕ್ರೀಡಾ ಶಾಲೆಯ ಪ್ರವೀಣ್‌ ನಿಯಂತ್ರಣ ತಪ್ಪಿ ಸ್ವಯಂ ಪೋಸ್ಟ್‌ ವಿರುದ್ಧ ಗೋಲು ಹೊಡೆದರು. ಈ ಉಡುಗೊರೆ ಗೋಲಿನಿಂದ ಎಎಸ್‌ಜಿ  1–0 ಮುನ್ನಡೆ ಸಾಧಿಸಿತು. ಆ ಬಳಿಕ ಎಎಸ್‌ಜಿ ಪರ ಅಬ್ದುಲ್‌ ರಜಾಕ್‌ ಎರಡನೇ ಗೋಲು ಗಳಿಸಿದರು.ದ್ವಿತೀಯಾರ್ಧದಲ್ಲಿ ದೀಪಕ್‌ ಸಿಂಗ್‌ ಸತತ ಎರಡು ಗೋಲು ಗಳಿಸಿದರು. ಟೂರ್ನಿಯ ಕೊನೆಯ ಗೋಲ್‌ ಅನ್ನು ನೀರಜ್‌ ಸಿಂಗ್‌ ಹೊಡೆದರು.  ಎರಡು ಹ್ಯಾಟ್ರಿಕ್‌ ಗೋಲುಗಳ ಸಹಿತ 5 ಪಂದ್ಯಗಳಿಂದ 16 ಗೋಲು ಗಳಿಸಿದ ಬೆಂಗಳೂರಿನ ಎಎಸ್‌ಜಿ ತಂಡದ ನೀರಜ್‌ ಸಿಂಗ್‌ ಸರಣಿ ಶ್ರೇಷ್ಠ ಪ್ರಶಸ್ತಿಯ ವೆಸ್ಪಾ ಸ್ಕೂಟರ್‌ ಪಡೆದರು.

ಪ್ರತಿಕ್ರಿಯಿಸಿ (+)