ಗುರುವಾರ , ಜೂನ್ 17, 2021
21 °C

ಫುಟ್‌ಬಾಲ್‌: ಸೆಮಿಗೆ ಇಂದಿರಾನಗರ ಕ್ಲಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂದಿರಾನಗರ ಕ್ಲಬ್‌ ಮತ್ತು ಪರಿಕ್ರಮ ತಂಡಗಳು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿವೆ.



ಬಸವನಗುಡಿ  ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪರಿಕ್ರಮ ತಂಡ 2–1 ಗೋಲುಗಳಿಂದ ಇಂಡಿಯನ್‌ ನೈಟ್ಸ್‌್ ಎದುರು ಗೆಲುವು ಸಾಧಿಸಿತು. ಸಂತೋಷ್‌ (22ನೇ ನಿಮಿಷ) ಮತ್ತು ಬೆನ್ನಿ (43ನೇ ನಿ.) ಗೆಲುವಿನ ರೂವಾರಿ ಎನಿಸಿದರು.



ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಇಂದಿರಾನಗರ ಕ್ಲಬ್‌ 5–4 ಗೋಲುಗಳಿಂದ ಸಿಟಿ ಕ್ಲಬ್‌ ಎದುರು ಜಯಭೇರಿ ಮೊಳಗಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.