ಶನಿವಾರ, ಜನವರಿ 18, 2020
25 °C

ಫುಟ್‌ಬಾಲ್: ಆಚಾರ್ಯ ಕಾಲೇಜಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಚಾರ್ಯ ಕಾಲೇಜು ತಂಡ  ಇಲ್ಲಿ ಮುಕ್ತಾಯಗೊಂಡ ರೋಟರಿ ಬೆಂಗಳೂರು ಇಂದಿರಾನಗರ–ಕೆಎಸ್‌ಎಫ್‌ಎ  ಅಧ್ಯಕ್ಷರ ಕಪ್‌ನ ಅಂತರ ಕಾಲೇಜು ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಬುಧವಾರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಆಚಾರ್ಯ ಕಾಲೇಜು ತಂಡ 2–1 ರಿಂದ ಬಾಲ್ಡ್‌ವಿನ್ ಮೆಥಡಿಸ್ಟ್ ಕಾಲೇಜು ತಂಡವನ್ನು ಮಣಿಸಿತು.ಆಚಾರ್ಯ ತಂಡದ ಪರ ನೊಯೆಲ್ ಫ್ಯಾಬಿಯಾನೊ ಮೊರ್ಜಾನ್ (8ನೇ ನಿಮಿಷ) ಮತ್ತು ರೋನಿಲ್‌ಸನ್ (24ನೇ ನಿ) ಗೋಲು ಗಳಿಸಿದರೆ, ಬಾಲ್ಡ್‌ವಿನ್ ತಂಡದ ಪರ ಪ್ರತೀಕ್ಷ್ ಪಂದ್ಯದ 20ನೇ ನಿಮಿಷದಲ್ಲಿ ಗೋಲು ಬಾರಿಸಿ ಗೆಲುವಿನ ಅಂತರ ಕಡಿಮೆ ಮಾಡಿದರು.

ಪ್ರತಿಕ್ರಿಯಿಸಿ (+)