ಫೇಸ್‌ಬುಕ್‌ನಲ್ಲಿ ಬರೆವ ಮುನ್ನ ಯೋಚಿಸಿ

ಬುಧವಾರ, ಮೇ 22, 2019
29 °C

ಫೇಸ್‌ಬುಕ್‌ನಲ್ಲಿ ಬರೆವ ಮುನ್ನ ಯೋಚಿಸಿ

Published:
Updated:

ಪಟ್ನಾ:  ನೀವು ಸರ್ಕಾರಿ ನೌಕರರೇ? ಹಾಗಿದ್ದರೆ ಫೇಸ್‌ಬುಕ್‌ನ್ಲ್ಲಲಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬರೆಯುವ ಮುನ್ನ ಸಾಕಷ್ಟು ಬಾರಿ ಯೋಚಿಸಿ. ಇಲ್ಲದಿದ್ದಲ್ಲಿ ಬಿಹಾರದ ಅರುಣ್ ನಾರಾಯಣ್ ಮತ್ತು ಮುಸಾಫಿರ್ ಬೈತಾ ಅವರಿಗೆ ಬಂದ ಗತಿಯೇ ನಿಮಗೂ ಬರಬಹುದು.ಬಿಹಾರ ವಿಧಾನ ಪರಿಷತ್‌ಗೆ ಸೇರಿದ ಹಿಂದಿ ಪ್ರಕಟಣೆ ಇಲಾಖೆಯ ಅಧಿಕಾರಿಗಳಾದ ಇವರು ಫೇಸ್‌ಬುಕ್‌ನಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಅಸಾಂವಿಧಾನಿಕ ಪದಗಳನ್ನು ಬಳಸಿದ್ದರು ಎಂಬ ಆರೋಪದ ಮೇಲೆ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಜೆಡಿ (ಯು) ಶಾಸಕ ಪ್ರೇಮ್ ಕುಮಾರ್ ಮಣಿ ಅವರನ್ನು ಪರಿಷತ್ ಸದಸ್ಯತ್ವದಿಂದ ಉಚ್ಚಾಟಿಸಿದ  ಪರಿಷತ್ ಅಧ್ಯಕ್ಷ ತಾರಾಕಾಂತ್ ಝಾ ಅವರ ಕ್ರಮವನ್ನು ಅರುಣ್ ಪ್ರಶ್ನಿಸಿದ್ದರು. ಜತೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಯಾರಾದರೂ ನಡೆದುಕೊಂಡರೆ ಖಂಡಿತವಾಗಿಯೂ ಅವರು ತೊಂದರೆಗೆ ಸಿಲುಕುತ್ತಾರೆ ಎಂದು ಬರೆದಿದ್ದರು.ಇದೇ ವೇಳೆ ಬೈತಾ ಅವರು ರಾಜ್ಯ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.ಪ್ರಶಸ್ತಿ ವಿಜೇತ ಬರಹಗಾರರಾದ ಇವರಿಬ್ಬರನ್ನೂ ಅಮಾನತು ಮಾಡುವ ಮುನ್ನ ಶೋಕಾಸ್ ನೋಟಿಸ್‌ನ್ನೂ ಜಾರಿ ಮಾಡಿಲ್ಲ.`ಪ್ರತಿ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಅದನ್ನು ವ್ಯಕ್ತಪಡಿಸಿದ ಕಾರಣಕ್ಕೆ ಈ ರೀತಿಯ ಬೆಲೆ ತೆರಬೇಕಾಗಿ ಬರಬಹುದೆಂದು ನಾನು ಎಣಿಸಿರಲಿಲ್ಲ~ ಎಂದು ಅರುಣ್ ಪ್ರತಿಕ್ರಿಯಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry