ನ್ಯೂಯಾರ್ಕ್ (ರಾಯಿಟರ್ಸ್): ಅಮೋಘ ಪ್ರದರ್ಶನ ಮುಂದುವರಿ ಸಿರುವ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಇಲ್ಲಿ ನಡೆಯುತ್ತಿರುವ ಬಿಎನ್ಪಿ ಪಾರಿಬಾಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸಾನಿಯಾ ಹಾಗೂ ಕಾರಾ ಸೆಮಿಫೈನಲ್ ಪಂದ್ಯದಲ್ಲಿ 6–4, 3–6, 10–7ರಲ್ಲಿ ಜೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಹಾಗೂ ಚೀನಾದ ಜೀ ಜೆಂಗ್ ಅವರನ್ನು ಮಣಿಸಿದರು.

ಎಂಟನೇ ಶ್ರೇಯಾಂಕ ಪಡೆದಿರುವ ಭಾರತ–ಜಿಂಬಾಬ್ವೆ ಜೋಡಿ ಈ ಗೆಲುವಿಗಾಗಿ ಒಂದು ಗಂಟೆ 37 ನಿಮಿಷ ತೆಗೆದುಕೊಂಡಿತು. ಸಾನಿಯಾ–ಕಾರಾ ಪಾಲಿಗೆ ಈ ಋತುವಿನಲ್ಲಿ ಇದು ಮೊದಲ ಫೈನಲ್. ಮೊದಲ ಸೆಟ್ನಲ್ಲಿ ಗೆಲುವು ಸಾಧಿಸಿದ ಈ ಜೋಡಿ ನಂತರ ಆಘಾತ ಎದುರಿಸಿತು. ಆದರೆ ಸೂಪರ್ ಟೈಬ್ರೇಕರ್ನಲ್ಲಿ ತಪ್ಪು ಎಸಗಲಿಲ್ಲ. ಎದುರಾಳಿ ಆಟಗಾರ್ತಿಯರ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿತು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಸೆಮಿಫೈನಲ್ ತಲುಪಿದ್ದಾರೆ. ಫೆಡರರ್ ಕ್ವಾರ್ಟರ್ ಫೈನಲ್ನಲ್ಲಿ 7–5, 6–1ರಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಎದುರು ಗೆದ್ದರು. ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಉಕ್ರೇನ್ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಎದುರು ಪೈಪೋಟಿ ನಡೆಸಲಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಡೊಲ್ಗೊಪೊಲೊವ್ 6–3,6–4ರಲ್ಲಿ ಕೆನಡಾದ ಮಿಲೋಸ್ ರಾವೊನಿಕ್ ಎದುರು ಜಯ ಗಳಿಸಿದರು.

ಮಹಿಳೆಯರ ಸಿಂಗಲ್ಸ್ನಲ್ಲಿ ಚೀನಾದ ಲೀ ನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಲೀ ನಾ 6–3, 4–6, 6–3ರಲ್ಲಿ ಸ್ಲೊವಾಕಿಯಾದ ಡೊಮಿನಿಕಾ ಸಿಬುಲ್ಕೊವಾ ಎದುರು ಜಯ ಗಳಿಸಿದರು. ಲೀ ನಾ ನಾಲ್ಕರ ಘಟ್ಟದ ಪಂದ್ಯದಲ್ಲಿ ಫ್ಲೆವಿಯಾ ಪೆನೆಟಾ ಎದುರು ಪೈಪೋಟಿ ನಡೆಸಲಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಪೆನೆಟಾ 6–4, 5–7, 6–4ರಲ್ಲಿ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.