ಮೂರರ ಹರೆಯದ ಅದಿತಿ ಡಿಸ್ನಿ ದೇವತೆಗಳ ವಸ್ತ್ರ ಧರಿಸಿ, ತಲೆ ಮೇಲೆ ಕಿರೀಟ ಏರಿಸಿ, ಕೈಯಲ್ಲಿ ಮ್ಯಾಜಿಕ್ ಕೋಲು ಹಿಡಿದು ಕ್ಯಾಮೆರಾಗೆ ಪೋಸ್ ನೀಡುವಂತೆ ನಿಂತಳು. ಪಕ್ಕದಲ್ಲಿ ನಿಂತಿದ್ದ ಮಗುವಿನ ತಂದೆ `ಓ ಮೈ ಏಂಜೆಲ್~ ಎನ್ನುತ್ತಾ ಬಿಗಿದಪ್ಪಿದರು.

ಬೃಹದಾಕಾರದ ಎರಡು ಮಿಕ್ಕಿ ಮೌಸ್ಗಳ ಮಧ್ಯೆ ನಿಂತು ಫೋಟೊ ಕ್ಲಿಕ್ಕಿಸಲು ಮಕ್ಕಳ ಮಧ್ಯೆಯೇ ಪೈಪೋಟಿ ನಡೆಯುತ್ತಿತ್ತು. ಅಲ್ಲೇ ಇಟ್ಟಿದ್ದ ಬಣ್ಣದ ಲೋಟಗಳನ್ನು ಒಂದರ ಮೇಲೊಂದು ಜೋಡಿಸಿ ಎತ್ತರದ ಮನೆಕಟ್ಟಿ ಭೇಷ್ ಎನಿಸಿಕೊಳ್ಳುವ ತವಕವೂ ಅಲ್ಲಿತ್ತು. ಅಷ್ಟೇ ಅಲ್ಲ, ಮಕ್ಕಳಿಗೆ ತಮ್ಮ ನೆಚ್ಚಿನ ಗ್ಯಾಜೆಟ್ ಕ್ಯಾಟ್ `ಡೋರೆಮನ್~ ಭೇಟಿಯಾಗುವ ಅವಕಾಶವೂ ಅಲ್ಲಿತ್ತು.

ಡಬ್ ಎಂಬ ಪಟಾಕಿ ಸದ್ದಿನೊಂದಿಗೆ ತೆರೆಯಿಂದ ಹೊರಬಂದ ಡೋರೆಮನ್ ಮಕ್ಕಳತ್ತ ಕೈಬೀಸಿದಾಗ ಸಂಭ್ರಮ ಎಲ್ಲೆ ಮೀರಿತ್ತು. ಅದೇ ಬಣ್ಣದ ಬಟ್ಟೆ ತೊಟ್ಟ ಪುಟ್ಟ ಪೋರನೊಬ್ಬ ಅದರೊಂದಿಗೆ ನಿಂತು ಕೈಕುಲುಕಿದ.

ಕಪ್ಪು ಬಣ್ಣದ ಮಿಕ್ಕಿ ಟೋಪಿ ಧರಿಸಿದ್ದ ಪುಟಾಣಿಗಳು ಸೊಂಟಕ್ಕೆ ಬೆಲ್ಟ್ ಧರಿಸಿ `ರಾಕ್ ಕ್ಲೈಂಬಿಂಗ್~ ಸಾಹಸಕ್ಕೆ ತಯಾರಾಗಿದ್ದರು. ಆದರೆ ಹತ್ತಲು ಅಲ್ಲಿ ಬೆಟ್ಟವೇನೂ ಇರಲಿಲ್ಲ; ಇದ್ದದ್ದು 24 ಅಡಿ ಎತ್ತರದ ಆ ಗೋಡೆಯಷ್ಟೆ. ಪೋಷಕರತ್ತ ಕೈ ಬೀಸುತ್ತಿದ್ದರೆ ಹತ್ತಾರು ಕ್ಯಾಮೆರಾಗಳು ಅವರನ್ನು ಸೆರೆಹಿಡಿಯುತ್ತಿದ್ದವು.

ಹೀಗೆ ತಂಪಾದ ಸಂಜೆಯೊಂದು ಮಕ್ಕಳ ಕಲರವಕ್ಕೆ ಸಾಕ್ಷಿಯಾಗಿದ್ದು ವೈಟ್ಫೀಲ್ಡ್ನ ಫೋರಂ ವಾಲ್ಯೂ ಮಾಲ್ನಲ್ಲಿ. ಮಾಲ್ಗೆ ಮೂರು ವರ್ಷ ತುಂಬಿದ ಸಂಭ್ರಮಕ್ಕಾಗಿ ಅಲ್ಲೊಂದು ಡಿಸ್ನಿ ಎಂಬ ಮಾಯಾಲೋಕವನ್ನೇ ಸೃಷ್ಟಿಸಿತ್ತು. ಮಕ್ಕಳ ಮನರಂಜನೆಗೆಂದೇ ಮಾಲ್ ಹತ್ತಾರು ವಿಧದ ಆಟಗಳನ್ನು ಆಯೋಜಿಸಿತ್ತು.

ಮಾಲ್ನಲ್ಲಿ 999 ರೂಪಾಯಿಗೂ ಅಧಿಕ ಶಾಪಿಂಗ್ ಮಾಡಿದ ಪೋಷಕರ ಮಕ್ಕಳು ಉಚಿತವಾಗಿ ಈ ಎಲ್ಲಾ ಆಟಗಳಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. ಈ ಸಂತೋಷಕೂಟಕ್ಕೆ ಮಾಲ್ ಇಟ್ಟ ಹೆಸರು `ತ್ರೈಸ್ ಆ್ಯಸ್ ನೈಸ್~. ಇವುಗಳು ಇದೇ 22ರವರೆಗೆ ಮಾಲ್ನ ಒಳಾಂಗಣದಲ್ಲಿ ಮಕ್ಕಳಿಗೆ ಮುದ ನೀಡಲಿವೆ.

ಹತ್ತಲೆಂದೇ ತಯಾರಾದ 24 ಅಡಿ ಎತ್ತರದ ಗೋಡೆಯನ್ನು ನಾಲ್ಕರಿಂದ 12ರ ವಯಸ್ಸಿನ ಮಕ್ಕಳೆಲ್ಲರೂ ಸರಾಗವಾಗಿ ಏರಿ ಇಳಿಯುತ್ತಿದ್ದರು. ಮೊದಲೆರಡು ಹೆಜ್ಜೆಗಳಲ್ಲಿ ಎಡವಿದರೂ ಸಹಾಯಕರ ನೆರವಿನಿಂದ, ಪೋಷಕರ ಪ್ರೋತ್ಸಾಹದಿಂದ ಹತ್ತುತ್ತಿದ್ದುದು ನೆರೆದವರ ಕಣ್ಣಲ್ಲಿ ಅಚ್ಚರಿ ಮೂಡಿಸಿತ್ತು.

`ಮಿನಿಟ್ ಟು ವಿನ್ ಇಟ್~ನ ಆಟಗಳು ಮಕ್ಕಳೊಂದಿಗೆ ಪೋಷಕರೂ ಪಾಲ್ಗೊಳ್ಳುವಂತೆ ಮಾಡಿದವು. ಮಿಕ್ಕಿಮೌಸ್ನ ಚಿತ್ರಗಳನ್ನು ಮಕ್ಕಳು ಬಿಡಿಸಿದ್ದಲ್ಲದೆ, ತಮ್ಮ ಕೈ ಮೇಲೂ ಟ್ಯಾಟೂ ಹಾಕಿಸಿಕೊಂಡು ಖುಷಿಪಟ್ಟರು. ಡೊನಾಲ್ಡ್ ಡಕ್, ಗೂಫಿ, ಮಿನಿ ಮೌಸ್, ಮಿಕ್ಕಿ ಮೌಸ್ ಜತೆ ಫೋಟೊ ತೆಗೆಸಿಕೊಂಡರು.

`ಡಿಸ್ನಿಯ ಎಲ್ಲಾ ಕಾರ್ಯಕ್ರಮಗಳು, ಚಲನಚಿತ್ರಗಳನ್ನು ನಾನು ವೀಕ್ಷಿಸಿದ್ದೇನೆ. ಅದರಲ್ಲಿ ಬರುವ ಎಲ್ಲಾ ಪಾತ್ರಗಳೂ ನನಗಿಷ್ಟ. ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿ ಬಂದು ಎಲ್ಲಾ ಆಟಗಳಲ್ಲಿ ಪಾಲ್ಗೊಂಡಿದ್ದೇನೆ~ ಎಂದು ಖುಷಿ ಹಂಚಿಕೊಂಡ ಹತ್ತರ ಪೋರ ಕೋರಮಂಗಲದ ಡಾನಿ ಶೈಲೇಶ್.

`20 ಅಡಿ ಉದ್ದದ ಕ್ಯಾನ್ವಾಸ್ ತಯಾರಾಗುತ್ತಿದ್ದು, ಇದು ಮಕ್ಕಳ ಕಲಾಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಭಾನುವಾರ (22ರಂದು) `ಆರ್ಟ್ ಅಟಾಕ್~ನ ನಿರೂಪಕ ಗೌರವ್ ಮಕ್ಕಳೊಂದಿಗೆ ಬೆರೆಯಲಿದ್ದಾರೆ. ಮ್ಯೂಸಿಕ್ ಕ್ಲಾಸ್ನಲ್ಲಿ ಎಲ್ಲಾ ಮಕ್ಕಳಿಗೂ ಒಂದೊಂದು ಡ್ರಮ್ ನೀಡಿ ಬಾರಿಸಲು ಕಲಿಸಲಾಗುವುದು.

ಇಲ್ಲಿಗೆ ಭೇಟಿ ನೀಡುವ ಗ್ರಾಹಕರಿಗೆ ಸದಾ ಹೊಸತನ್ನು ನೀಡಬೇಕೆನ್ನುವ ಆಸೆ ನಮ್ಮದು. ಡಿಸ್ನಿ ಎಲ್ಲಾ ಮಕ್ಕಳ ಪ್ರೀತಿಯ ಪಾತ್ರ. ಮಕ್ಕಳ ಮನಸ್ಸು ಅರಳಿಸುವ ಈ ಪಾತ್ರದ ಅನುಭವ ಅವರಿಗಾಗುವಂತೆ ಮಾಡಬೇಕು ಎಂಬ ಕಾರಣಕ್ಕೆ ಈ ವಿಷಯ ಆಯ್ದುಕೊಂಡೆವು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

ಎಲ್ಲಾ ಆಟಗಳೂ ಜುಲೈ 22ರವರೆಗೆ ಮುಂದುವರೆಯಲಿರುವುದರಿಂದ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಎರಡು ಕುಟುಂಬಗಳು ಹಾಂಗ್ಕಾಂಗ್ಗೆ ಹಾರುವ ಅವಕಾಶವನ್ನೂ ಪಡೆಯಲಿವೆ~ ಎಂದು ವಿವರಿಸಿದರು ಮಾರುಕಟ್ಟೆ ಅಧಿಕಾರಿ ನಿಖಿತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.