ಫ್ಯಾಷನ್ ಸಪ್ತಾಹದಲ್ಲಿ ಬೆಡಗು...ಬೆರಗು

7

ಫ್ಯಾಷನ್ ಸಪ್ತಾಹದಲ್ಲಿ ಬೆಡಗು...ಬೆರಗು

Published:
Updated:
ಫ್ಯಾಷನ್ ಸಪ್ತಾಹದಲ್ಲಿ ಬೆಡಗು...ಬೆರಗು

ಒಂದು ನಗರಿಯ ಸೌಂದರ್ಯವನ್ನು ವ್ಯಾಖ್ಯಾನಿಸುವ ಸಂಗತಿಗಳು ಯಾವುವು? ರಸ್ತೆಬದಿಯ ಮರದಲ್ಲಿ ಬಿಟ್ಟೂ ಬಿಡದಂತೆ ಕಾಣುವ ಚಿಗುರೊಡೆದ ಹಸಿರು, ಮತ್ತೇರಿಸುವ ಐಷಾರಾಮಿ ತಾಣಗಳು, ರಾತ್ರಿ ವೇಳೆ ಝಗಮಗಿಸುವ ದೀಪಗಳು... ಊಹೂಂ, ಇವ್ಯಾವುದೂ ಅಲ್ಲ. ಒಂದು ನಗರಿಯನ್ನು ಸುಂದರಗೊಳಿಸಬಲ್ಲವರು ಅಲ್ಲಿರುವ ಸುಂದರ ಜನರು ಮಾತ್ರ. ಇದೇ ಚೆಲುವಿನ ವ್ಯಾಖ್ಯಾನಕ್ಕಿರುವ ಪ್ರಬಲ ಮಾನದಂಡ.ಈಗ ಬೆಂಗಳೂರಿನಲ್ಲಿ ಸುಂದರಿಯರ ಹಿಂಡು ಬೀಡು ಬಿಟ್ಟಿದೆ. ಇವರೆಲ್ಲರೂ ಭಾನುವಾರದವರೆಗೆ ತಮ್ಮ ಚೆಲುವನ್ನು ವಿವಿಧ ಪೋಷಾಕುಗಳನ್ನು ಧರಿಸಿ ತೋರಲಿದ್ದಾರೆ. ಛಾಯಾಚಿತ್ರಗ್ರಾಹಕರ ಕ್ಯಾಮೆರಾ ಫ್ಲಾಶ್‌ಲೈಟ್‌ಗೆ ಮೈ-ಮುಖ ಒಡ್ಡಿ ಪೇಜ್ 3ಗೆ ರಸಗವಳ ಒದಗಿಸಲಿದ್ದಾರೆ. ಶೋನಲ್ಲಿ ಡಿಸೈನರ್‌ಗಳಿಗೆ ಫ್ಯಾಷನ್ ಪಂಡಿತರನ್ನು ಮೆಚ್ಚಿಸುವ ಹಪಹಪಿ; ರೂಪದರ್ಶಿಗಳಿಗೆ ತಮ್ಮೆಲ್ಲಾ ಚೆಲುವನ್ನು ಫ್ಯಾಷನ್ ಪ್ರಿಯರಿಗೆ ಉಣಬಡಿಸುವ ತವಕ. ಹಾಗಾಗಿ ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟಾಕ್ಷಣ ರೂಪದರ್ಶಿಗಳ ಮೊಗದಲ್ಲಿ ಆತ್ಮವಿಶ್ವಾಸದ ಬುಗ್ಗೆ ಪುಟಿದೇಳುತ್ತದೆ. ಅದು ಅವರ ಪ್ರತಿ ಹೆಜ್ಜೆ, ಒನಪು, ವಯ್ಯಾರ, ನೋಟ ಎಲ್ಲದರಲ್ಲೂ ಬಿಂಬಿಸುತ್ತದೆ.ಬ್ಲೆಂಡರ್ಸ್ ಫ್ರೈಡ್ ಆಯೋಜಿ ಸಿರುವ `ಬೆಂಗಳೂರು ಫ್ಯಾಷನ್ ವೀಕ್ ವಿಂಟರ್ ಫೆಸ್ಟಿವಲ್~ನ 7ನೇ ಆವೃತ್ತಿ ಹೋಟೆಲ್ ಅಶೋಕಾದಲ್ಲಿ ನಡೆಯುತ್ತಿದೆ. ಮೊದಲ ದಿನ ನಡೆದ ಫ್ಯಾಷನ್ ಶೋನಲ್ಲಿ ಖ್ಯಾತ ಡಿಸೈನರ್‌ಗಳಾದ ಏಮನ್ ಅಘಾ, ಅರ್ಮಾನ್, ಚೈತಾಲಿ ಗಿರಿ, ಬಿಪ್‌ಲ್ಯಾಬ್ ಗಿರಿ, ಮಂದೀಪ್ ಲಿತ್, ರಾಹುಲ್ ಬಲ್ಲಾ, ಶೆರ್ಲಿನ್, ಸ್ವಪ್ನಿಲ್ ಶಿಂಧೆ ಹಾಗೂ ಪ್ರಿಯಾ ಕಟಾರಿಯಾ ಪುರಿ ಅವರ ವಿಶೇಷ ವಿನ್ಯಾಸದ ವಸ್ತ್ರಗಳನ್ನು ರೂಪದರ್ಶಿಗಳು ತೊಟ್ಟು ರ‌್ಯಾಂಪ್ ಮೇಲೇರಿದರು.ಖ್ಯಾತ ಡಿಸೈನರ್‌ಗಳಾದ ಶೆರ್ಲಿನ್ ಎಸ್ಟಿಬೆರಿಯೋ ಹಾಗೂ ಸ್ವಪ್ನಿಲ್ ಶಿಂಧೆ ಅವರು ವಿನ್ಯಾಸಗೊಳಿಸಿದ ವಸ್ತ್ರಗಳು ಮೊದಲ ದಿನದ ಪ್ರಮುಖ ಆಕರ್ಷಣೆ. ಶೆರ್ಲಿನ್ 17 ಮತ್ತು 18ನೇ ಶತಮಾನದಲ್ಲಿ ಫ್ರೆಂಚ್ ಜನರು ತೊಡುತ್ತಿದ್ದ ವಸ್ತ್ರಗಳನ್ನು ತಮ್ಮ ವಿನ್ಯಾಸಕ್ಕೆ ಆಯ್ದುಕೊಂಡಿದ್ದರು.ಆಗಿನ ಕಾಲದಲ್ಲಿ ಜ್ಯಾಸ್ ನೃತ್ಯಪಟುಗಳು ತೊಡುತ್ತಿದ್ದ ವಸ್ತ್ರ, ಪಾರ್ಟಿವೇರ್‌ಗಳು ಹಾಗೂ ಶ್ರೀಮಂತ ಜನರು ಧರಿಸುತ್ತಿದ್ದ ಗ್ಲಾಮರಸ್ ದಿರಿಸುಗಳ ಸಂಗ್ರಹವನ್ನು ರೂಪದರ್ಶಿಗಳಿಗೆ ತೊಡಿಸಿ ರ‌್ಯಾಂಪ್‌ವಾಕ್ ಮಾಡಿಸಿದರು. ರೂಪದರ್ಶಿಯ ಮೈಯನ್ನು ಬಿಗಿದಪ್ಪಿಕೊಳ್ಳುವ ಈ ವಸ್ತ್ರಗಳು ಆಕೆ ಧರಿಸಿದ ಎದೆಪಟ್ಟಿಯಿಂದಾಗಿ ವಿಶೇಷವೆನಿಸುತ್ತಿದ್ದವು.ಎದೆ ಹಾಗೂ ಸೊಂಟದ ಏರು-ತಗ್ಗುಗಳನ್ನು ಸ್ಪಷ್ಟವಾಗಿ ಬಿಂಬಿಸುವ ಈ ವಸ್ತ್ರಗಳು ರೂಪದರ್ಶಿಗಳ ಬೆನ್ನನ್ನು ತೆರೆದಿಟ್ಟಿದ್ದವು. ಅವರು ಧರಿಸಿದ ಲಂಗವನ್ನು ಉಬ್ಬಿಸಿ ಅದರ ಮೇಲೆ ಪಂಜರದ ಆಕೃತಿ ಮೂಡಿಸಿದ್ದರು ಶೆರ್ಲಿನ್. ಶುಭ್ರ ಶ್ವೇತವರ್ಣದ ಸಿಲ್ಕ್ ಹಾಗೂ ಜಾರ್ಜೆಟ್‌ನ್ನು ತಮ್ಮ ವಿನ್ಯಾಸಕ್ಕೆ ಆಯ್ದುಕೊಂಡಿದ್ದ ಶೆರ್ಲಿನ್ ತಮ್ಮ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆದರು.ಕಾಡು ಜನರು ತೊಡುತ್ತಿದ್ದ ವಸ್ತ್ರಗಳನ್ನು ತಮ್ಮ ವಿನ್ಯಾಸಕ್ಕೆ ಆಯ್ದುಕೊಂಡಿದ್ದರು ಸ್ವಪ್ನಿಲ್ ಶಿಂಧೆ.  ಇವರು ಕಾಡು ಪ್ರಾಣಿಗಳ ಕೊಂಬು, ತುಪ್ಪಟ, ಗೊರಸು ಹಾಗೂ ಪ್ರಾಣಿಗಳ ಮೈ ಆಕಾರವನ್ನು ಗಮನದಲ್ಲಿಟ್ಟುಕೊಂಡು ವಸ್ತ್ರವಿನ್ಯಾಸ ಮಾಡಿದ್ದರು. 20 ರೂಪದರ್ಶಿಗಳು ಶಿಂಧೆ ವಿನ್ಯಾಸಕ್ಕೆ ಮೈಯೊಡ್ಡಿದ್ದರು. ಬಾಲಿವುಡ್ ನಟಿ ಉಮ್ಮೆ ಖುರೇಷಿ ಕೊನೆಯಲ್ಲಿ ಶಿಂಧೆ ಜತೆ ಹೆಜ್ಜೆ ಹಾಕಿ ಕ್ಯಾಮೆರಾಗೆ ಪೋಸು ಕೊಟ್ಟಾಗ ಸಭೆಯಲ್ಲಿ `ಏನೋ ಒಂಥರಾ..~ ಕಂಪನ.ಪ್ರಿಯಾ ಕೊಠಾರಿಯ ಪುರಿ `ಸಮ್ಮರ್ ಲವ್, ಯಂಗ್, ವೈಲ್ಡ್ ಅಂಡ್ ಫ್ರೀ~ ಥೀಮ್ ಇರಿಸಿಕೊಂಡು ವಸ್ತ್ರವಿನ್ಯಾಸ ಮಾಡಿದ್ದರು. ಇವರ ಉಡುಗೆಗಳು ಪ್ರವಾಸಿಗರು, ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಹೇಳಿ ಮಾಡಿಸಿದಂತಿದ್ದವು. ಇವರು ತಮ್ಮ ವಿನ್ಯಾಸಕ್ಕೆ ಋತುಮಾನ, ಕಣ್ಣುಕುಕ್ಕುವ ಬಣ್ಣಗಳಿಂದ ರೂಪಿಸಿದ ಉದ್ದನೆಯ ಕೋಟು, ಕಾಲಿನ ಬಳಿ ಸೀಳಿಕೊಂಡಿತ್ತು. ಹಾಗೆಯೇ ಜಾಕೆಟ್, ಸ್ವಿಮ್ ಸೂಟ್, ಶಾರ್ಟ್ಸ್‌ಗಳೂ ರ‌್ಯಾಂಪ್‌ನಲ್ಲಿ ಮಿಂಚಿದವು. 

                                

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry