ಶುಕ್ರವಾರ, ಏಪ್ರಿಲ್ 16, 2021
21 °C

ಫ್ರೆಂಚ್‌ರ ಸ್ಮಾರಕ ರಕ್ಷಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಗೋವಾ ಹಾಗೂ ಪಾಂಡಿಚೇರಿ ರಾಜ್ಯದಲ್ಲಿ ದೊರೆ ತಿರುವಂತೆ ಪಾಂಡವಪುರದಲ್ಲಿ ಫ್ರೆಂಚರ ಇತಿಹಾಸಯುಳ್ಳ ಸ್ಮಾರಕ ದೊರೆತಿದ್ದು, ಇವುಗಳನ್ನು ರಕ್ಷಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಎನ್.ಎಸ್. ರಂಗರಾಜು ಅಭಿಪ್ರಾಯಪಟ್ಟರು.

ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಯುಜಿಸಿ ವತಿಯಿಂದ ಆಯೋಜಿಸಿದ್ದ ಕರ್ನಾಟಕ ದೇವಾಲಯಗಳ ಕಲೆ ಮತ್ತು ವಾಸ್ತು ಶಿಲ್ಪದ ಉಗಮ ಮತ್ತು ವಿಕಾಸಕ್ಕೆ ಸಂಬಂಧಪಟ್ಟಂತೆ ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡಿದರು.

ಶ್ರೀರಂಗಪಟ್ಟಣದಲ್ಲಿ ಬ್ರಿಟೀಷರ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಂಶಸ್ಥರ ಇತಿಹಾಸ ಸ್ಮರಿಸುವ ಸಮಾಧಿ ಸಂರಕ್ಷಿಸಲಾಗಿದೆ. ಆದರೆ, ರಾಜ ಒಡೆಯರ್ ಮತ್ತು ಫ್ರೆಂಚರ ಸ್ಮಾರಕ ಸಂರಕ್ಷಿಸಿದರೆ ಜಗತ್ತಿನ ಇತಿಹಾಸ ಪುಟಗಳಲ್ಲಿ ಸೇರಿಸಿದಂತಾಗುತ್ತದೆ ಎಂದರು.

ಪಾಂಡವಪುರದಲ್ಲಿ ಫ್ರೆಂಚರ 25 ಸಮಾಧಿಗಳಿವೆ. ಅದರಲ್ಲಿ 25 ವರ್ಷದ ಫ್ರೆಂಚ್ ಮಳೆಯೊಬ್ಬರು ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪಿರುವ ಸಂದರ್ಭದಲ್ಲಿ ಸಮಾಧಿ ನಿರ್ಮಿಸಿದ್ದಾರೆ. ಈ ಸಮಾಧಿಯಲ್ಲಿ ಮರಣದ ದಿನಾಂಕ ನಮೂದಿಸಲಾಗಿದೆ. ಇದರ ಜೊತೆಗೆ ಮದ್ದು ಗುಂಡುಗಳನ್ನು ಸಂರಕ್ಷಿಸುತ್ತಿದ್ದ ಅನೇಕ ಕಟ್ಟಡಗಳಿವೆ. ಇದಕ್ಕಿಂತ ದಾಖಲೆ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ವಿವಿಧ ಕಾಲೇಜಿನ ಇತಿಹಾಸ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತಿಹಾಸ ತಜ್ಞರು ಪಾಲ್ಗೊಂಡಿದ್ದರು. ಸಮಾರಂಭವನ್ನು ಶಾಸಕ ಸಿ.ಎಸ್. ಪುಟ್ಟರಾಜು ಉದ್ಗಾಟಿಸಿದರು. ಕಾಲೇಜಿನ ಗೌ.ಕಾರ್ಯದರ್ಶಿ ಕೆ. ಬಸವರಾಜು ಪ್ರಾಸ್ತಾಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶು ಪಾಲ ಪ್ರೊ.ಬಿ. ನಾರಾಯಣಗೌಡ, ಪ್ರೊ. ಎಂ ನಾಗರಾಜು, ಉಪನ್ಯಾಸಕ ಎನ್.ಕೆ ವೆಂಕಟೇಗೌಡ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.