ಭಾನುವಾರ, ಜೂನ್ 13, 2021
29 °C

ಬಂಟ್ವಾಳ: ಬಂದ್ ಬಹುತೇಕ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ನದಿ ತಿರುವು ಯೋಜನೆ­ಯನ್ನು ವಿರೋಧಿಸಿ ಸೋಮವಾರ ನಡೆದ ಬಂದ್ ಬಂಟ್ವಾಳ ತಾಲ್ಲೂಕಿ­ನಲ್ಲಿ ಕೂಡಾ ಬಹುತೇಕ ಯಶಸ್ವಿ­ಯಾಗಿದೆ.ತಾಲ್ಲೂಕಿನಾದ್ಯಂತ ಕೆಲವೊಂದು ಔಷಧಿ ಅಂಗಡಿ ಮತ್ತು ಆಸ್ಪತ್ರೆಗಳು ಹಾಗೂ ಬ್ಯಾಂಕ್ ಮತ್ತಿತರ ಸರ್ಕಾರಿ ಕಚೇರಿಗಳು ಮಾತ್ರ ತೆರದಿದ್ದರೂ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಬೆಳಿಗ್ಗೆಯಿಂದಲೇ ಬಸ್ ಮತ್ತು ರಿಕ್ಷಾ ಸಂಚಾರ ಸ್ಥಗಿತಗೊಂಡಿತ್ತು.ಬಹುತೇಕ ಶಾಲಾ ಕಾಲೇಜುಗಳು ಬೆಳಿಗ್ಗೆ ತೆರೆದಿದ್ದು, ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಧ್ಯಾಹ್ನ ಬಳಿಕ ಸ್ವಯಂ ರಜೆ ಘೋಷಿಸಿದವು.

ತಾಲ್ಲೂಕಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ­ಕೊಂಡು ವ್ಯಾಪಾರ ವಹಿ­ವಾಟು ನಡೆಸದೆ ಬಂದ್‌ಗೆೆ ಬೆಂಬಲ ವ್ಯಕ್ತಪಡಿಸಿದರು. ಬಿ.ಸಿ.ರೋಡ್ ಪೇಟೆಯಲ್ಲಿ ಸೋಮವಾರ ಜನ­ಸಂಚಾರ ಇಲ್ಲದೆ ಬಸ್‌ನಿಲ್ದಾಣ, ತಾಲ್ಲೂಕು ಕಚೇರಿ, ನ್ಯಾಯಾಲಯ ಆವರಣಗಳು ಖಾಲಿ ಇದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.