ಶುಕ್ರವಾರ, ಮೇ 7, 2021
26 °C

ಬಂಡೆಯೊಳಗೆ ಗುಹೆ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಕನ್ಯಾನ ಗ್ರಾಮದ ತೋಟದಮೂಲೆ ಎಂಬಲ್ಲಿ ಬಂಡೆಕಲ್ಲಿನೊಳಗೆ ಸುಂದರವಾದ ಗುಹೆವೊಂದು ಮಂಗಳವಾರ ಪತ್ತೆಯಾಗಿದೆ. ಇದು ಆಶ್ಚರ್ಯವನ್ನು ಹುಟ್ಟಿಸಿರುವ ಹಿನ್ನೆಲೆಯಲ್ಲಿ ಕನ್ಯಾನ  ಸುತ್ತಮುತ್ತಲಿನ ಹಲವು ಮಂದಿ ಈ ಗುಹೆಯನ್ನು ವೀಕ್ಷಿಸಿದರು.



ಗುಡ್ಡವೊಂದರ ತುತ್ತತುದಿಯಲ್ಲಿ ದೊಡ್ಡ ಬಂಡೆಕಲ್ಲು ಇದ್ದು ಸೋಮವಾರ ರಾತ್ರಿ ವೇಳೆ ಇದರ ಮೇಲೆ ಮಕ್ಕಳು ಆಡುತ್ತಿದ್ದರು. ಆಗ ಭಾರಿ ಶಬ್ದ ಕೇಳಿ ಬಂತು. ಮಕ್ಕಳೇ ಆಟ ಆಡುತ್ತ ಆಡುತ್ತ ಸುತ್ತಲೂ ಇರುವ ಮಣ್ಣನ್ನು ಅಗೆದು ತೆಗೆದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲಿ ಕಲ್ಲಿನ ಕೆಳಭಾಗದಲ್ಲಿ ದ್ವಾರ ಕಂಡುಬಂತು. ದ್ವಾರಕ್ಕೆ ಅನೇಕ ಕಲ್ಲುಗಳನ್ನೇ ಮುಚ್ಚಿ, ಒಳಗೆ ಪ್ರವೇಶಿಸಲು ಸಾಧ್ಯವಿಲ್ಲದಂತೆ ಮಾಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.



ಯುವಕನೊಬ್ಬ ಇದರೊಳಗೆ ಪ್ರವೇಶಿಸಿ, ಇಡಿ ಬಂಡೆಕಲ್ಲಿನ ಅಡಿಭಾಗವನ್ನು ಕೊರೆದು ಈ ಗುಹೆಯನ್ನು ನಿರ್ಮಿಸಿರುವ ಸಾಧ್ಯತೆಯಿದೆ. ದ್ವಾರದಲ್ಲಿ ಕುಳಿತು ಒಳಗೆ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತದೆ. ಒಳಗೆ 4.5 ಅಡಿಯ ವೃತ್ತಾಕಾರದ ಗುಹೆ ಗೋಚರವಾಗುತ್ತದೆ. ಮಧ್ಯದಲ್ಲಿ ಒಂದು ಅಡಿ ಆಳದ ಹೊಂಡವನ್ನು ನಿರ್ಮಿಸಲಾಗಿದೆ. ಇದು ಸುಮಾರು 50ರಿಂದ 100 ವರ್ಷದ ಹಿಂದಿನ ಗುಹೆ ಆಗಿರಬಹುದೆಂದು ಸ್ಥಳೀಯರು ಹೇಳುತ್ತಾರೆ. ಇದೇ ಗುಡ್ಡದ ಇತರ ಬಂಡೆಕಲ್ಲುಗಳಲ್ಲೂ ಇಂಥ ಗುಹೆಗಳಿವೆ ಎಂದೂ ಅವರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.