ಮೂಡಿಗೆರೆ: ಬೆಲೆ ಗಗನಕ್ಕೇರಿದ್ದರೂ ಬೆಳೆಯಿಲ್ಲದೇ ಕಂಗಾಲಾಗಿರುವ ತಾಲ್ಲೂಕಿನ ಕಾಫಿ ಬೆಳೆಗಾರರರ ಮೊಗದಲ್ಲಿ, ಕಳೆದ ವಾರ ಸುರಿದ ಮಳೆ ಹರ್ಷ ಮೂಡಿಸಿದೆ.

ತಾಲ್ಲೂಕಿನಾದ್ಯಂತ ಕಳೆದ ಹತ್ತು ದಿನಗಳ ಹಿಂದೆ ಸುರಿದ ಮೊದಲ ಮಳೆ, ಕಾಫಿಗೆ ಉತ್ತಮ ಹೂ ಮಳೆಯಾಂತಾಗಿದ್ದು, ಬಿಸಿಲ ಬೇಗೆಯಿಂದ ಅರಳಿದ್ದ ಬೀಡುಗಳು, ಸೂಕ್ತ ಕಾಲಕ್ಕೆ ಹೂವಾಗಿ ಅರಳಲು ಸಾಧ್ಯವಾಗಿದೆ. ತಾಲ್ಲೂಕಿನಲ್ಲಿ ಜನವರಿ ಪ್ರಾರಂಭದಿಂದಲೇ ಕಾಫಿ ತೋಟಗಳಿಗೆ ನೀರಾಯಿಸುವ ಕಾರ್ಯ ಪ್ರಾರಂಭವಾಗಿದ್ದು, ಬಹುತೇಕ ರೋಬಾಸ್ಟಾ ತೋಟಗಳಿಗೆ ನೀರಾಯಿಸಿದ್ದರೂ, ಬಿಸಿಲ ಬೇಗೆ ಹೆಚ್ಚಿದ್ದರಿಂದ ಹೂವಾಗುವಲ್ಲಿ ಅಸ್ತವ್ಯಸ್ತ ಕಂಡುಬಂದಿತ್ತು. ಆದರೆ ತಾಲ್ಲೂಕಿನ ಎಲ್ಲಾ ಕಡೆ ಸರಾಸರಿ ಅರ್ಧ ಇಂಚಿಗೂ ಹೆಚ್ಚಾಗಿ ಸುರಿದ ಮಳೆ ಸೂಕ್ತವಾಗಿ ಹೂವಾಗಲು ಕಾರಣವಾಗಿದೆ. ಇನ್ನು ನೀರು ಕಾಣದ ಅರೇಬಿಕಾ ಕಾಫಿಗೆ ಸುರಿದ ಮಳೆ ವರವಾಗಿ ಪರಿಣಮಿಸಿದ್ದು, ಬಹುತೇಕ ಕಾಫಿ ತೋಟಗಳಲ್ಲಿ ಸೋಮವಾರದಿಂದಲೇ ಹೂವಾಗತೊಡಗಿದ್ದು, ಕಾಫಿ ತೋಟಗಳು ಹೂವಿನಿಂದ ಸಿಂಗಾರಗೊಂಡಿವೆ.

ಬುಧವಾರಕ್ಕೆ ಹೂವು ಅಂತಿಮ ಘಟ್ಟ ತಲುಪಿದ್ದು, ಹೂವಿನ ವೇಳೆ ಮಳೆಯಾದರೆ ಗತಿ ಏನು ಎಂದು ಚಿಂತಿಸುತ್ತಿದ್ದ ರೈತರಿಗೆ ಧೈರ್ಯ ಮೂಡಿದೆ. ಇನ್ನು ಮಳೆಯಾದರೂ ಹಾನಿ ಪ್ರಮಾಣ ಕಡಿಮೆಯಾಗುತ್ತದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎರಡನೇ ಹದದ ಮಳೆ ಸುರಿದರೆ, ಹಿನ್ನೀರು ಹಾಯಿಸಿದಂತಾಗಿ ಹೂವು ಹೀಚಾಗಲು ಹೊಂದಾಣಿಕೆಗೆ ಸಹಾಯಕವಾಗುತ್ತದೆ.

ಕಳೆದ ವರ್ಷ ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರೂ, ಹೂ ಬಿಡುವ ವೇಳೆಗೆ ಎರಡನೇ ಬಾರಿಗೆ ಮಳೆ ಸುರಿದಿದ್ದರಿಂದ, ಹೂವೆಲ್ಲವೂ ಕಲಸಿದಂತಾಗಿ, ಹೀಚುಕಟ್ಟಲು ಸಾಧ್ಯವಾಗದಿದ್ದರಿಂದ ರೈತರಿಗೆ ಫಸಲು ಲಭಿಸಲಿಲ್ಲ. ಅಲ್ಲದೇ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸುರಿದ ದಾಖಲೆ ಮಳೆ ಉಳಿದಿದ್ದ ಅಲ್ಪಸ್ವಲ್ಪ ಬೆಳೆಗೂ ಹಾನಿ ಉಂಟು ಮಾಡಿದ್ದರಿಂದ, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಐದಂಕಿ ದಾಟ್ಟಿದ್ದರೂ, ಬಹುತೇಕ ರೈತರಿಗೆ ಬೆಲೆ ಏರಿಕೆ ಉಪಯುಕ್ತವಾದಂತಿಲ್ಲ. ಅಲ್ಲದೇ ಬೆಳೆ ಕಡಿತಗೊಂಡಿದ್ದರಿಂದ ಬಹುತೇಕ ರೈತರು ಪ್ರಾರಂಭದಲ್ಲಿಯೇ ಕಾಫಿಯನ್ನು ಮಾರಾಟ ಮಾಡಿರುವುದರಿಂದ ರೈತರಿಗೆ ಬೆಲೆ ಏರಿಕೆ ಅಷ್ಟೇನು ಸಿಹಿಯಾಗಿಲ್ಲ.

‘ಈ ವರ್ಷ ಕಾಫಿ ಬೆಳೆಗಾರರಿಗೆ ಕಳೆದ ಹತ್ತು ವರ್ಷಗಳಲ್ಲಿಯೇ ಅತೀ ಹೆಚ್ಚು ನಷ್ಟ ಉಂಟುಮಾಡಿದ ವರ್ಷವಾಗಿದ್ದು, ಕಾಫಿ ಬೆಳೆದು ಸಾಲ ಮಾಡಿದವರೇ ಹೆಚ್ಚಾಗಿದ್ದಾರೆ. ಈಗ ಸುರಿದಿರುವ ಮಳೆ ಬಹಳಷ್ಟು ರೈತರಿಗೆ ನೀರಾಯಿಸುವ ಖರ್ಚು ಉಳಿಸುವುದರೊಂದಿಗೆ, ಉತ್ತಮ ಹೂ ಅರಳಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆಲಿಕಲ್ಲು ಮಳೆಯಾಗದೇ ಮತ್ತು ಅತೀವೃಷ್ಠಿ ಉಂಟು ಮಾಡದಿದ್ದರೆ ಬಂಪರ್ ಕಾಫಿ ಫಸಲು ಕಾಣಲು ಸಾಧ್ಯವಾಗುತ್ತದೆ. ಸಮಾನ್ಯವಾಗಿ ಕೃಷಿಯಲ್ಲಿ ನಿರೀಕ್ಷೆಗಳು ಸುಳ್ಳಾಗುವುದೇ ಹೆಚ್ಚಾಗಿದ್ದು, ಈ ಬಾರಿಯಾದರೂ ಕಾಫಿ ಬೆಳೆಗಾರರಿಗೆ ನಿರ್ವಹಣೆಯಷ್ಟಾದರೂ ವರಮಾನ ಬಂದರೆ ಸಾಕು ಎನ್ನುತ್ತಾರೆ ಕಾಫಿ ಬೆಳೆಗಾರ ರಾಮಚಂದ್ರ.

ಕಳೆದ ನಾಲ್ಕು ವರ್ಷಗಳಿಂದ ಮಲೆನಾಡಿನ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು ಮತ್ತು ಏಲಕ್ಕಿ ಬೆಳೆಗಳಲ್ಲಿ ಬೆಲೆಯಿದ್ದರೆ, ಬೆಳೆಯಿಲ್ಲ ಮತ್ತು ಬೆಳೆಯಿದ್ದರೆ ಬೆಲೆಯಿಲ್ಲದೇ ಸದಾ ನಷ್ಟವನ್ನೇ ಅನುಭವಿಸುತ್ತಿರುವ ಬೆಳೆಗಾರರಿಗೆ, ವರ್ಷದ ಪ್ರಾರಂಭದಲ್ಲಿ ಸುರಿದಿರುವ ಮಳೆ ಕಾಫಿ ಬೆಳೆಗಾರರಲ್ಲಿ ಹರ್ಷ ಮೂಡಿಸಿದ್ದರೂ, ಮುಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯಕ್ಕೆ ಸಿಲುಕದೇ ಕಾಫಿ ಬೆಳೆಗಾರರ ಕೈ ಹಿಡಿಯುತ್ತದೆಯೇ ಎಂಬುದು ರೈತರ ನಿರೀಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.