ಶ್ರೀನಿವಾಸಪುರ: ಪಟ್ಟಣದ ಹೊರ ವಲಯದಲ್ಲಿನ ಎಪಿಎಂಸಿ ಮಾರುಕಟ್ಟೆ ಸಮೀಪದ ರಸ್ತೆ ಬದಿಯಲ್ಲಿ ಈ ಹಿಂದೆ ಎಸೆಯಲಾಗಿದ್ದ ಸಾವಿರಾರು ಟನ್ ಅನುಪಯುಕ್ತ ಮಾವು ಇನ್ನೂ ಕೊಳೆತು ನಾರುತ್ತಿದೆ.

ಕಳೆದ ಮಾವಿನ ಸುಗ್ಗಿ ವೇಳೆ ಬೆಲೆ ಕುಸಿತ ಪರಿಣಾಮ ಬೆಳೆಗಾರರು ಮಾವನ್ನು ತಡವಾಗಿ ಕಿತ್ತ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಹಣ್ಣು ಕೊಳೆಯಿತು. ಗ್ರೇಡಿಂಗ್ ಸಂದರ್ಭದಲ್ಲಿ ಹಿಂದಕ್ಕೆ ಬಿದ್ದ ಮಾವಿಗೆ ಬೇಡಿಕೆ ಕುಸಿಯಿತು. ಇದರಿಂದ ಅಧಿಕ ಪ್ರಮಾಣದ ಮಾವು ಮಂಡಿಗಳಿಂದ ಹೊರಗೆ ಚೆಲ್ಲಲ್ಪಟ್ಟಿತು. ಅಲ್ಲಿಂದ ಹೊರಗೆ ಸಾಗಿಸಿದ ಮಾವನ್ನು ಶ್ರೀನಿವಾಸಪುರ ಚಿಂತಾಮಣಿ ರಸ್ತೆಯ ಪಕ್ಕದಲ್ಲಿ ಸುಮಾರು ಮೂರು ಕಿ.ಮೀ ದೂರ ರಾಶಿ ಹಾಕಲಾಗಿತ್ತು.

ಅದು ಅಲ್ಲಿ ಕೊಳೆತು ನೊಣಗಳ ಉತ್ಪಾದನಾ ಕ್ಷೇತ್ರವಾಗಿ ಪರಿಣಮಿಸಿದೆ. ಇದರಿಂದ ನೊಣಗಳ ಹಾವಳಿ ಸಹ ವಿಪರೀತವಾಗಿದೆ. ಆದರೆ ಕೊಳೆಯನ್ನು ದೂರ ಸಾಗಿಸುವ ಯತ್ನ ನಡೆಯಲಿಲ್ಲ. ಅದರ ಪರಿಣಾಮ ಈ ಪ್ರದೇಶದಲ್ಲಿ ಇನ್ನೂ ಮೂಗಿಡುವಂತಿಲ್ಲ. ರಾಶಿಗಳಲ್ಲಿ ಅದು ಇನ್ನೂ ಕೊಳೆಯುತ್ತಲೇ ಇದ್ದು ಅನಾರೋಗ್ಯಕರ ಪರಿಸರ ಉಂಟಾಗಿದೆ.

ಅದು ಸಾಲದೆಂಬಂತೆ ಮಾರುಕಟ್ಟೆ ಆವರಣದಲ್ಲಿ ಈವರೆಗೆ ಕೊಳೆಯುತ್ತಿದ್ದ ಮಾವನ್ನು ಎತ್ತಿ ರಸ್ತೆ ಬದಿಯಲ್ಲಿ ಈಗಾಗಲೇ ಕೊಳೆತ ರಾಶಿಗಳ ಮೇಲೆ ಹಾಕಲಾಗಿದೆ. ಇದರಿಂದ ರಸ್ತೆ ಸಮೀಪ ವಾಸಿಸುವ ನಿವಾಶಿಗಳಿಗೆ ತೊಂದರೆಯಾಗಿದೆ.

ಕೆಲವು ಕಡೆಗಳಲ್ಲಿ ಮಾವಿನ ಬೀಜ ಮೊಳಕೆಯೊಡೆದು ಸಸಿಗಳು ಬೆಳೆಯುತ್ತಿವೆ. ಈ ಮಧ್ಯೆ ಮಾವಿನ ನರ್ಸರಿಗಳವರು ಬಿತ್ತನೆ ಬೀಜಕ್ಕಾಗಿ ಕೊಳೆತ ರಾಶಿಗಳನ್ನು ಕೆದಕಿ ಒಳ್ಳೆಯ ಬೀಜ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಅದರಿಂದ ನಿರೀಕ್ಷಿತ ಪ್ರಯೋಜನವಾಗುತ್ತಿಲ್ಲ. ಒಟ್ಟಾರೆ ಕೊಳೆತ ಮಾವು ನಾಗರಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.