ನವದೆಹಲಿ: ಮೂಲಸೌಕರ್ಯ ವಲಯಕ್ಕೆ ಕೇಂದ್ರ ಬಜೆಟ್ನಲ್ಲಿ ಅಗತ್ಯ ಒತ್ತು ನೀಡಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಸುಮಾರು ರೂ 60,000 ಕೋಟಿ ತೆರಿಗೆ ಮುಕ್ತ ಬಾಂಡ್ಗಳನ್ನು ಹೆಚ್ಚಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ.

ಅಗತ್ಯ ಮೂಲಸೌಕರ್ಯಗಳ ಕೊರತೆ ಅಭಿವೃದ್ಧಿಗೆ ಅಡ್ಡಗಾಲಾಗಿದೆ. ಈವರೆಗೆ ನಾವು ಹೂಡಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರ ಅನುಸರಿಸಿದ್ದೆವು. 2011-12 ನೇ ಸಾಲಿನಲ್ಲಿ ಹಣಕಾಸು ಮೂಲಸೌಕರ್ಯ ಯೋಜನೆಗಳಿಗೆ ರೂ 30,000 ಕೋಟಿ ತೆರಿಗೆ ಮುಕ್ತ ಬಾಂಡ್ ಘೋಷಿಸಿದ್ದೆವು. ಪ್ರಸಕ್ತ ವರ್ಷದಲ್ಲಿ ಈ ಮೊತ್ತವು ದ್ವಿಗುಣಗೊಳ್ಳುತ್ತಿದ್ದು, ರೂ 60,000 ಕೋಟಿಗೆ ಹೆಚ್ಚಿದೆ ಎಂದು ಮುಖರ್ಜಿ ಹೇಳಿದ್ದಾರೆ.
ಹೊಸ ಐಐಎಂಗಳನ್ನು ಸ್ಥಾಪಿಸಲು ರೂ 150 ಕೋಟಿ ಹಾಗೂ ಹೊಸ ಐಐಟಿಗಳ ಆರಂಭಕ್ಕೆ ರೂ 25 ಕೋಟಿ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂಗವಿಕಲರ ಪಿಂಚಣಿಯಲ್ಲಿ ಹೆಚ್ಚಳ

ಬಡತನ ರೇಖೆಗಿಂತ ಕೆಳಗಿನ ಅಂಗವಿಕಲರಿಗೆ ಪಿಂಚಣಿಯನ್ನು ಶೇ 30 ಕ್ಕಿಂತಲೂ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 471 ಕೋಟಿ ರೂಪಾಯಿ ಬಜೆಟ್ ಅನುದಾನ ನೀಡಲಾಗಿದೆ.
ಕಳೆದ ವರ್ಷ ಈ ಮೊತ್ತವು 424 ಕೋಟಿ ರೂಪಾಯಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.