ಗುರುವಾರ , ಜೂನ್ 17, 2021
22 °C

ಬಜೆಟ್ ಅನುದಾನ ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಿಂದುಳಿದ ಸಮುದಾಯಗಳ ವಿಶೇಷ ಅಭಿವೃದ್ಧಿ ಹಾಗೂ ಗುರುಪೀಠಗಳ ಶೈಕ್ಷಣಿಕ ಮೂಲಸೌಕರ್ಯಕ್ಕಾಗಿ ಶ್ರಮಿಸುತ್ತಿರುವ ಮಠಗಳಡಿ ಯೋಗಿ ನಾರೇಯಣ ಮಠಕ್ಕೆ ಒದಗಿಸಿರುವ ಅನುದಾನವನ್ನು ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಅವರು ತಿರಸ್ಕರಿಸಿದ್ದಾರೆ.ಕೈವಾರ ಕ್ಷೇತ್ರದಲ್ಲಿ ತಾತಯ್ಯನವರ ಗುರುಪೀಠವಿದೆ. ಆದರೆ, ಮಠವು ಯಾವುದೇ ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಿಲ್ಲ. ಮಠದ ಮೂಲ ಉದ್ದೇಶವೇ ತಾತಯ್ಯ ಅವರ ತತ್ವ ಬೋಧನೆಗಳನ್ನು ಪ್ರಚುರಪಡಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಸರ್ಕಾರದ ಅನುದಾನ ಪಟ್ಟಿಯಲ್ಲಿ ಕೈವಾರ ಕ್ಷೇತ್ರವನ್ನು ಬಲಿಜ ಕೈವಾರ ತಾತಯ್ಯ ಕ್ಷೇತ್ರ ಎಂದು ಹೆಸರಿಸಲಾಗಿದೆ. ಎಲ್ಲ ಜಾತಿ, ಮತ, ಧರ್ಮದ ಜನರು ತಾತಯ್ಯ ತತ್ವಗಳನ್ನು ಅನುಸರಿಸುತ್ತಿದ್ದು, ಕೇವಲ ಬಲಿಜ ಜನಾಂಗಕ್ಕೆ ಮಠವನ್ನು ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪಿಸಿದ್ದಾರೆ.ಪೂಜಾ ಕೈಂಕರ್ಯ ಸೇರಿದಂತೆ ಒಟ್ಟು ಮಠದ ವ್ಯವಸ್ಥೆಯು ಭಕ್ತಾದಿಗಳ ದೇಣಿಗೆಯಿಂದ ನಡೆಯುತ್ತಿದ್ದು, ಸರ್ಕಾರದ ಯಾವುದೇ ಅನುದಾನ  ಮತ್ತು ಆರ್ಥಿಕ ನೆರವಿನ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.