ರಿಪ್ಪನ್ಪೇಟೆ: ಬಡತನದ ರೇಖೆಯವರ ಹೊತ್ತಿನ ಗಂಜಿಗೂ ಪರದಾಟ... ನಿತ್ಯಕೂಲಿಯೇ ಮನೆಯ ಜೀವನಕ್ಕೆ ಆಧಾರ... ಇಂಥ ಸಂದರ್ಭದಲ್ಲಿ ಬಡ ಕುಟುಂಬದ ಮಹಿಳೆಯ ತನ್ನ ತಾಯ್ತನದ ಬಯಕೆ ಕೇವಲ ಮರೀಚಿಕೆ. ಇದಕ್ಕೆ ವಿದಾಯ ಹಾಡಿದ್ದು ಸರ್ಕಾರದ ಸಾಮೂಹಿಕ ಸೀಮಂತ ಕಾರ್ಯಕ್ರಮ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ನೈರ್ಮಲ್ಯ ಸಮಿತಿ ವತಿಯಿಂದ ಹರತಾಳು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 28 ಫಲಾನುಭವಿಗಳಿಗೆ ಸೀಮಂತ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪತಂಜಲಿ ನೆರವೇರಿಸಿ ಮಾತನಾಡಿ, ಹೆಣ್ಣುಮಕ್ಕಳ ಭವಿಷ್ಯಕ್ಕೆ ಸರ್ಕಾರ ಉತ್ತಮ ಯೋಜನೆಗಳನ್ನು ರೂಪಿಸಿದೆ. ಗರ್ಭಿಣಿಯರು ಈ ಕಾಲಘಟ್ಟದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.

ಹರತಾಳು ಗ್ರಾ.ಪಂ. ಅಧ್ಯಕ್ಷ ಕಣ್ಕಿ ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಆರೋಗ್ಯ ಸಹಾಯಕ ಬಿ.ಎಂ. ಶೇಷಗಿರಿ, ಕಿರಿಯ ಆರೋಗ್ಯ ಸಹಾಯಕ ಎನ್.ಸಿ. ಸದಾಶಿವಪ್ಪ, ಗ್ರಾ.ಪಂ. ಸದಸ್ಯರಾದ ಸುಮಿತ್ರಾ ಟೀಕಪ್ಪ, ಶ್ರೀಧರ, ಲೀಲಾವತಿ, ಪಿಡಿಒ ಚಂದ್ರಶೇಖರ, ಎನ್ಆರ್ಎಚ್ಎಂನ ತಾಲ್ಲೂಕು ಸಂಚಾಲಕ ರಮೇಶ, ಲೋಕೇಶ, ಹಾಜರಿದ್ದರು.

ನಿರ್ಮಲಾ ಪ್ರಾರ್ಥಿಸಿದರು. ಡಿ. ಚಂದ್ರು ಸ್ವಾಗತಿಸಿದರು. ಶಶಿಕಲಾ ಗಣಪತಿ ನಿರೂಪಿಸಿದರು. ಪದ್ಮಶ್ರೀ ವಂದಿಸಿದರು.

ಉಳಿತಾಯ ಬಜೆಟ್
ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ 2012-13ನೇ ಸಾಲಿಗೆ ರೂ 1ಲಕ್ಷದ ಉಳಿತಾಯ ಬಜೆಟ್ಅಂಗೀಕರಿಸಿದೆ.
ಆದಾಯ ವರ್ಗ 1ರಲ್ಲಿರೂ9.50 ಲಕ್ಷ, ಅಭಿವೃದ್ಧಿ ಅನುದಾನದಲ್ಲಿ ರೂ8 ಲಕ್ಷ, 13ನೇ ಹಣಕಾಸಿನಲ್ಲಿರೂ 11.40 ಲಕ್ಷ, ಉದ್ಯೋಗ ಖಾತರಿಯಲ್ಲಿರೂ52ಲಕ್ಷ, ಇಂದಿರಾ ಮನೆರೂ10.80 ಲಕ್ಷ, ಬಸವ ಇಂದಿರಾ ಆವಾಸ್ ಯೋಜನೆ ಮನೆ ರೂ 75 ಲಕ್ಷ, ಅಂಬೇಡ್ಕರ್ ವಸತಿ ಯೋಜನೆರೂ1.91 ಲಕ್ಷ, ಹಾಗೂ ನೀರು ನಿರ್ವಹಣೆ ಅನುದಾನ ರೂ 30 ಸಾವಿರ ಸೇರಿದಂತೆ ಒಟ್ಟು ರೂ1.69 ಕೋಟಿ ಆದಾಯ ಬರಲಿದೆ.

ಖರ್ಚು: ಸಿಬ್ಬಂದಿ ವೇತನ, ಆಡಳಿತ ವೆಚ್ಚ ಮತ್ತು ಅಭಿವೃದ್ಧಿ ಕಾಮಗಾರಿ, ಶೇ. 25ರ ವೆಚ್ಚ ಉಪಕರಣಗಳ ಪಾವತಿಗಾಗಿ ರೂ 8.50ಲಕ್ಷ, ಅಭಿವೃದ್ಧಿ ಅನುದಾನದ ವೆಚ್ಚಕ್ಕಾಗಿ ರೂ 8ಲಕ್ಷ, 13ನೇ ಹಣಕಾಸು ಯೋಜನೆ ಕಾಮಗಾರಿಗೆರೂ11.40 ಲಕ್ಷ ಇಂದಿರಾ, ಬಸವ, ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳಿಗೆ ವಂತಿಕೆ ರೂ 87.79ಲಕ್ಷ, ನೀರು ನಿರ್ವಹಣೆ ಸಾಮಗ್ರಿ ಖರೀದಿ ರೂ 30 ಸಾವಿರ ಸೇರಿದಂತೆ ಉಳಿತಾಯ ರೂ 1 ಲಕ್ಷ ಬಜೆಟ್ ಮಂಡನೆ ಮಾಡಿದೆ. ಎಂದು ಗ್ರಾ.ಪಂ.ನ ಪಿಡಿಒ ಚಂದ್ರಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.