ಶನಿವಾರ, ಏಪ್ರಿಲ್ 17, 2021
32 °C

ಬಡವರಿಗೆ 209 ಮನೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಮಹದೇವಪುರ ಕ್ಷೇತ್ರದ ಸಾದರಮಂಗಲ ಹಾಗೂ ವರ್ತೂರು ಗ್ರಾಮದ 209 ಬಡ ಫಲಾನುಭವಿಗಳಿಗೆ ಮನೆಗಳನ್ನು ಈಚೆಗೆ ವಿತರಿಸಲಾಯಿತು.ಸಮಾರಂಭದಲ್ಲಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, `ಈಗಾಗಲೇ ಕ್ಷೇತ್ರದಲ್ಲಿ ಗುರುತಿಸಿರುವ ಕೊಳೆಗೇರಿಗಳ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸ ಲಾಗಿದೆ~ ಎಂದು ತಿಳಿಸಿದರು.`ಸದ್ಯ ಉಚಿತವಾಗಿ ಕಟ್ಟಿದ ಮನೆಗಳನ್ನು ಹಂಚುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಫಲಾನುಭವಿಗಳ ಆಯ್ಕೆಯನ್ನು ಪಾರದರ್ಶಕತೆಯಿಂದ ಮಾಡಲಾಗಿದೆ. ಅರ್ಹರಿಗೆ ಮಾತ್ರ ಮನೆಗಳನ್ನು ನೀಡಲಾಗಿದೆ~ ಎಂದು ಅವರು ತಿಳಿಸಿದರ.ಸಾದರಮಂಗಲ ಗ್ರಾಮದಲ್ಲಿ 82 ಮನೆಗಳನ್ನು ಹಾಗೂ ವರ್ತೂರು ಗ್ರಾಮದಲ್ಲಿ  ನಿರ್ಮಿಸಲಾದ 127 ಮನೆಗಳ ಕೀಲಿ ಕೈಗಳನ್ನು ಫಲಾನುಭವಿಗಳಿಗೆ ಇದೇ ವೇಳೆ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.