ಬುಧವಾರ, ಜನವರಿ 29, 2020
28 °C

ಬಡ್ತಿ ನೀಡಲು ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ 22.8.11 ರಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಲು ಅಗತ್ಯ ದಾಖಲಾತಿಗಳನ್ನು 15.9.11ರೊಳಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ನವೆಂಬರ್ 30 ರೊಳಗೆ ಆಕ್ಷೇಪಣೆಯನ್ನು ಸಹ ಸಲ್ಲಿಸುವಂತೆ ತಿಳಿಸಿತ್ತು. ಹೊಸ ವರ್ಷ ಆರಂಭವಾದರೂ ಬಡ್ತಿ ನೀಡುವ ಆದೇಶ ಹೊರಡಿಸುವ ಪ್ರಯತ್ನವನ್ನೇ ಇಲಾಖೆ ಮಾಡಿಲ್ಲ. ಅದಕ್ಕೆ ಏನು ಕಾರಣ ಎನ್ನುವುದೂ ಗೊತ್ತಾಗುತ್ತಿಲ್ಲ. ಎಷ್ಟು ಜನ ದಾಖಲಾತಿ ಒದಗಿಸಿದ್ದರೋ ಅವರಿಗೆ ಬಡ್ತಿ ನೀಡಿ ಇನ್ನೂ ಹುದ್ದೆಗಳು ಖಾಲಿ ಉಳಿದರೆ ಇನ್ನಷ್ಟು ದಾಖಲಾತಿ ಒದಗಿಸುವಂತೆ ಕಾಲಾವಕಾಶ ಕೊಡಬಹುದು. ಅನೇಕ ದೈಹಿಕ ಶಿಕ್ಷಕರು ಬಡ್ತಿಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಮತ್ತು ಇಲಾಖೆಯ ಆಯುಕ್ತರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.

 

ಪ್ರತಿಕ್ರಿಯಿಸಿ (+)