ಕಲಾಪ

ಕಲ್ಪನೆಯ ಹಂಗಿಲ್ಲದೆ ಬದುಕಿನಲ್ಲಿ ಕಂಡ, ಅನುಭವಿಸಿದ ಚಿತ್ರಣಗಳನ್ನು ಗೆರೆಗಳಲ್ಲಿ ಅಭಿವ್ಯಕ್ತಗೊಳಿಸಿದವರು ಕಲಾವಿದ ಬಾದಲ್ ನಂಜುಂಡಸ್ವಾಮಿ. ಕಲಾನಿರ್ದೇಶಕನಾಗಿ ಜಾಹೀರಾತು ಕಂಪೆನಿ, ಸಿನಿಮಾ, ರಂಗಭೂಮಿಗಳಲ್ಲಿ ಕೆಲಸ ಮಾಡಿರುವ ಬಾದಲ್ ವಾಸ್ತವ ಬದುಕನ್ನು ಸೆರೆಹಿಡಿಯುವ ಮಾಧ್ಯಮವಾಗಿ ಕಲೆಯನ್ನು ಬಳಸಿಕೊಂಡವರು.

ರಂಗಾಯಣದ ಕೆಲಸಕ್ಕಾಗಿ ಮೈಸೂರು- ಬೆಂಗಳೂರು ನಡುವೆ ನಿರಂತರ ಪ್ರಯಾಣಿಸುವ ಬಾದಲ್ ಅವರನ್ನು ಸೆಳೆದದ್ದು ರೈಲು ಪಯಣದ ಜಂಜಾಟ. ರೈಲಿಗಾಗಿ ಕಾದು ಕುಳಿತವರು, ಸೀಟಿಗಾಗಿ ನೂಕಾಡುವವರು, ಕೊನೆಗೂ ಸೀಟು ಹಿಡಿದು ಗೆದ್ದೆವೆಂದು ಬೀಗುವವರು, ಕೂರಲು ಜಾಗ ಸಿಗದೆ ಪರಿತಪಿಸುವವರು, ನೆಮ್ಮದಿಯಿಂದ ನಿದ್ರೆಗೆ ಜಾರುವವರು, ಹೀಗೆ ರೈಲ್ವೆ ಪ್ರಯಾಣ ಅವರಲ್ಲಿ ಮೂಡಿಸಿದ್ದು ಆರಂಭದಲ್ಲಿ ಅಸಹನೆಯನ್ನು.

ಕೇವಲ ಮೂರು ಗಂಟೆ ಪ್ರಯಾಣದ ಈ ಹೋರಾಟದ ಜೀವನ ನೀಡಿದ ಪ್ರೇರಣೆಯನ್ನೇ ಕಲೆ ರೂಪದಲ್ಲಿ ಅರಳಿಸುವ ಹಂಬಲ ಮೂಡಿತು. ಹೊಸತನವಿರಲಿ ಎಂಬ ಕಾರಣಕ್ಕೆ ಕೈಗೆತ್ತಿಕೊಂಡದ್ದು ಬಣ್ಣಬಣ್ಣದ ಜೆಲ್ಪೆನ್ಗಳನ್ನು. ಸುಮಾರು ಆರು ತಿಂಗಳ ಹಿಂದೆ ರೈಲಿನಲ್ಲಿ ಆರಂಭವಾದ ಅವರ ಗೆರೆಗಳ ಒಡನಾಟದ ಪಯಣ ಈಗ ಅವುಗಳ ಪ್ರದರ್ಶನದವರೆಗೂ ಸಾಗಿದೆ.

ರೈಲಿನಿಂದಿಳಿದ ಅವರ ಗೆರೆಗಳು ಬದುಕನ್ನು ಒಳಹೊಕ್ಕವು. ತಮ್ಮ ಮನೆ, ಮಲಗುವ ಕೋಣೆ, ಪುಸ್ತಕವನ್ನೋದುತ್ತಿರುವ ಪತ್ನಿ, ಮನೆ ತಾರಸಿಯಿಂದ ಕಾಣುವ ಕಾಲೋನಿಯ ಮೇಲ್ನೋಟ ಇವುಗಳು ಅವರ ಲೇಖನಿಯಲ್ಲಿ ಜೀವತಳೆದವು.

ಆಪ್ತ ಗೆಳೆಯನ ಮುಖದ ಭಾವನೆಗಳು ಅವರ ಗೆರೆಗಳಲ್ಲಿ ವ್ಯಕ್ತಗೊಂಡಿತು. ಕೇರಳದ ಹಳ್ಳಿ ಜೀವನದ ಸಂಜೆಯ ನೋಟ ಬಿಳಿ ಹಾಳೆ ಮೇಲೆ ರಂಗು ಪಡೆಯಿತು. ಆಧುನಿಕ ಮಹಿಳೆ, ಐಷಾರಾಮದ ಬದುಕು, ರಂಗಾಯಣದ ವನರಂಗದ ಹುರುಪುಗಳೂ ಅವರ ಗೆರೆಗಳಲ್ಲಿ ಸೆರೆಯಾದವು. ಪಟ್ಟಣದ ಬೀದಿ, ಗೂಳಿ ಕಾಳಗ, ಗಣಿಗಾರಿಕೆಯಂತಹ ಕಣ್ಣೆದುರಿಗಿನ ವಿಷಯಗಳು ಅವರ ಬಣ್ಣದ ಗೆರೆಗಳಿಗೆ ಸಂಗಾತಿಯಾದವು.

ಮೈಸೂರಿನ ಕುಕ್ರಳ್ಳಿಯವರಾದ ಬಾದಲ್ ನಂಜುಂಡಸ್ವಾಮಿ `ಕಾವಾ~ದಲ್ಲಿ ಫೈನ್ ಆರ್ಟ್ಸ್ನಲ್ಲಿ ಚಿನ್ನದ ಪದಕ ಗಳಿಸಿದವರು. ರಂಗಾಯಣದಲ್ಲಿ ಥಿಯೇಟರ್ ಡಿಪ್ಲೊಮಾ ಪೂರೈಸಿರುವ ಅವರು ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. `ಲೈಫು ಇಷ್ಟೇನೆ~ ಚಿತ್ರದಲ್ಲಿ `ಯಾರಿಗ್ಹೇಳೋಣಾ ನಮ್ಮ ಪ್ರಾಬ್ಲಮ್ಮು~ ಹಾಡಿಗೆ ಬಾದಲ್ ಮಾಡಿದ್ದ ಕಲಾನಿರ್ದೇಶನ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಥ್ರೀಡಿ ಚಿತ್ರ ಚಿತ್ರಿಸಿದವರು ಬಾದಲ್. ರಸ್ತೆಯ ಮೇಲೆ ಗೆರೆಗಳನ್ನು ಹಾಕಿ ಬಣ್ಣ ತುಂಬುವ ಅತ್ಯಂತ ಸೂಕ್ಷ್ಮ ಕುಸುರಿ ಕೆಲಸದ ಈ ಕಲೆಯಿಂದ ಬಾದಲ್ ಜನಪ್ರಿಯತೆ ಗಳಿಸಿದರು.

ಕಡು ಬಡತನದ ನಡುವೆಯೂ ಕಲೆಯನ್ನು ನೆಚ್ಚಿಕೊಂಡು ಅದನ್ನೇ ಬದುಕಿನ ಮಾರ್ಗವಾಗಿ ಸ್ವೀಕರಿಸಿದ ಬಾದಲ್ ಪ್ರಕಾರ ಮೈಸೂರಿನಲ್ಲಿ ಕಲೆ ಅನಾಥ. ಅಲ್ಲಿ ಕಲೆ ಮತ್ತು ಕಲಾವಿದನಿಗೆ ಉತ್ತಮ ಪ್ರೋತ್ಸಾಹ ದೊರಕುತ್ತಿಲ್ಲ ಎಂಬ ಬೇಸರ ಅವರಲ್ಲಿದೆ.

ಮೈಸೂರಿನಲ್ಲಿ ಒಮ್ಮೆ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದ ಬಾದಲ್, ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅವುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಅವರ ಸುಮಾರು 70 ಕಲಾಕೃತಿಗಳಲ್ಲಿ 40 ಕಲಾಕೃತಿಗಳು `ಬಣ್ಣಗಳು ಮತ್ತು ಅದರಾಚೆ~ ಹೆಸರಿನಲ್ಲಿ ಮಾರ್ಚ್ 15ರವರೆಗೆ ಪ್ರದರ್ಶನಗೊಳ್ಳುತ್ತಿವೆ.

ಸ್ಥಳ: ಬೆಂಗಳೂರು ಆರ್ಟಿಸ್ಟ್ ರೆಸಿಡೆನ್ಸಿ ಒನ್, ಮಿಷನ್ ರಸ್ತೆ, ಕಾರ್ಸ್ ಆರ್ ಯುವರ್ಸ್ ಕಟ್ಟಡದ ಮೂರನೇ ಮಹಡಿ. ಪ್ರದರ್ಶನದ ಸಮಯ: ಮಧ್ಯಾಹ್ನ 2 ರಿಂದ ರಾತ್ರಿ 8ಗಂಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.