ಹುಬ್ಬಳ್ಳಿ: ಮನದ ಕಲ್ಮಶವನ್ನು ಕಳೆದು ಹೊಸ ಮನೋಭಾವ ಮೈಗೂಡಿಸಿಕೊಳ್ಳುವ ಮೂಲಕ ಬದುಕನ್ನು ರಂಗುರಂಗಾಗಿಸುವುದನ್ನು ಸಾಂಕೇತಿಕವಾಗಿ ಸಾರುವ ಬಣ್ಣದಾಟದಲ್ಲಿ ನಗರ ಮುಳುಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದೇ ಓಕುಳಿಯಾಟ ಶಾಂತಯುತವಾಗಿ ನಡೆಯಿತು.

ಗುರುವಾರ ರಂಗ ಪಂಚಮಿ ಹಿನ್ನೆಲೆಯಲ್ಲಿ ನಗರದ ಕಮರಿಪೇಟೆ, ದಾಜೀಬಾನಪೇಟೆ, ದುರ್ಗದಬೈಲ್, ಹಳೇಹುಬ್ಬಳ್ಳಿಯಲ್ಲಿ ಬಣ್ಣದಾಟದ ಸಂಭ್ರಮ ಹೆಚ್ಚಿತ್ತು. ನಗರದ ಉಳಿದ ಪ್ರದೇಶಗಳಲ್ಲಿಯೂ ಬಣ್ಣದಾಟ ಇದ್ದರೂ, ಅಬ್ಬರ ಕಡಿಮೆ ಇತ್ತು.

ಮಧ್ಯಾಹ್ನದ ವರೆಗೆ ಎಲ್ಲ ಅಂಗಡಿ–ಮುಂಗಟ್ಟುಗಳು ಮುಚ್ಚಿದ್ದರಿಂದ ನಗರದಲ್ಲಿ ಅಘೋಷಿತ ಬಂದ್ ಇರುವಂತೆ ಭಾಸವಾಯಿತು. ಅಲ್ಲೊಂದು–ಇಲ್ಲೊಂದು ಸಣ್ಣ ಅಂಗಡಿಗಳು, ಹೋಟೆಲ್ಗಳು ಮಾತ್ರ ತೆರೆದಿದ್ದರಿಂದ ಬಣ್ಣ ಆಡಿ ದಣಿದವರಿಗೆ ತಂಪು ಪಾನೀಯ, ಚಹಾ ಸೇವನೆಗೆ ಅನುಕೂಲವಾಗಿತ್ತು. ಬಸ್ ಹಾಗೂ ಇತರ ವಾಹನಗಳ ದಟ್ಟಣೆಯಿಲ್ಲದ ನಗರದ ರಸ್ತೆಗಳಲ್ಲಿ ಯುವಕರು ಜೋರಾದ ಶಬ್ದದೊಂದಿಗೆ ಭರ್ರನೇ ಓಡಿಸುತ್ತಿದ್ದ ಬೈಕ್ಗಳ ಅಬ್ಬರವೇ ಇತ್ತು. ಕೆಲವರಂತೂ ಸೈಲನ್ಸರ್ ಪೈಪ್ ತೆಗೆದು ಹಾಕಿ, ಕರ್ಕಶವಾಗಿ ದನಿ ಮಾಡುವ ಬೈಕ್ಗಳನ್ನು ಓಡಿಸಿಕೊಂಡು ಹೋಗುವ ದೃಶ್ಯವೂ ಸಾಮಾನ್ಯವಾಗಿತ್ತು.

ವಿಕಾರವಾದ ಮುಖವಾಡಗಳನ್ನು ಹಾಕಿಕೊಂಡವರು, ರೇಷ್ಮೆ ನೂಲಿನಂತೆ ಹೊಳೆಯುವ ಸುನೇರಿ, ಹಸಿರು, ನೀಲಿ ಬಣ್ಣಗಳ ಚೌರಿ. ಶಿವನ ಜಡೆಯಂತಿರುವ ಚೌರಿಗಳನ್ನು ಧರಿಸಿದ ಯುವಕರು ಗಮನ ಸೆಳೆದರು.

ಇದು ಬಣ್ಣ ಆಡುವವರ ವಿಚಿತ್ರ ವೇಷ–ಭೂಷಣವಾದರೆ, ತುತ್ತೂರಿಯನ್ನು ಹೋಲುವ ವಾದ್ಯವನ್ನು ಜೋರಾಗಿ ಊದುವುದು, ಹಲಗೆಯನ್ನು ಬಾರಿಸುತ್ತಾ ಬೈಕ್ನಲ್ಲಿ ಓಡಾಡುವ ದೃಶ್ಯವೂ ಸಾಮಾನ್ಯವಾಗಿತ್ತು.

ಇಂತಹ ಚಿತ್ರ–ವಿಚಿತ್ರ ದೃಶ್ಯಗಳನ್ನು ನೋಡುತ್ತಾ ಕಮರಿಪೇಟೆಯನ್ನು ಪ್ರವೇಶಿಸಿದರೆ, ಅಲ್ಲಿ ಬಣ್ಣದಾಟದ ಸಂಭ್ರಮ ಇನ್ನೂ ಹೆಚ್ಚಿತ್ತು. ಬಕೆಟು, ಕೊಡ, ಬಿಂದಿಗೆಗಳಲ್ಲಿ ನೀರು, ಬಣ್ಣದ ನೀರು ತುಂಬಿಕೊಂಡು ನಿಂತಿರುವ ಜನರು ಪರಸ್ಪರರ ಮೇಲೆ ಎರಚುತ್ತಿದ್ದರು. ಓಣಿ ಮೂಲಕ ಹೋಗುವವರಿಗೂ ಬಣ್ಣದ ನೀರಿನ ಸಿಂಚನ ತಪ್ಪುತ್ತಿರಲಿಲ್ಲ. ಅಕ್ಕಪಕ್ಕದಿಂದ ಯಾರಾದರೂ ಬಣ್ಣದ ನೀರು ಹಾಕುತ್ತಾರೇನೋ ಎಂದು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದವರಿಗೆ ಮೇಲಿನಿಂದ ಬಣ್ಣದ ನೀರಿನ ಸ್ನಾನವಾಗುತ್ತಿತ್ತು.

ಪ್ಲಾಸ್ಟಿಕ್ನ ಸಣ್ಣ ಪಾಕೀಟುಗಳಲ್ಲಿ ನೀರು, ಬಣ್ಣದ ನೀರು ತುಂಬಿಕೊಂಡು ನಿಂತಿರುತ್ತಿದ್ದ ಮಕ್ಕಳು, ತಮ್ಮ ಮುಂದೆ ಸಾಗಿ ಸ್ವಲ್ಪ ದೂರ ಹೋದವರತ್ತ ಆ ಪಾಕೀಟುಗಳನ್ನು ಎಸೆಯುತ್ತಿದ್ದರು. ಬೆನ್ನಿಗೆ, ಪಕ್ಕೆಗೆ ಕೆಲವೊಮ್ಮೆ ಕುತ್ತಿಗೆ, ಮುಖಕ್ಕೆ ರಪ್ಪೆಂದು ಬಡಿಯುವ ಪಾಕೀಟುಗಳು ತಕ್ಷಣ ಒಡೆಯುತ್ತಿದ್ದವಲ್ಲದೇ, ಅವುಗಳಲ್ಲಿದ್ದ ನೀರು ಇಲ್ಲವೇ ಬಣ್ಣದ ನೀರು ರಾಚುತ್ತಿತ್ತು.ರಂಗಿನಾಟದ ಈ ಸಂಭ್ರಮದ ನಡುವೆ, ಕಾಮಣ್ಣನ ಮೂರ್ತಿಯ ಮೆರವಣಿಗೆಯಲ್ಲಿಯೂ ಜನರು ಅಷ್ಟೇ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಹಲಗೆ ಬಾರಿಸುವುದು, ದೊಡ್ಡ ಸ್ಪೀಕರ್ಗಳನ್ನು ಅಳವಡಿಸಿ ಚಿತ್ರಗೀತೆಗಳನ್ನು ಜೋರಾಗಿ ಹಚ್ಚುವುದು, ಕಾಮಣ್ಣನ ಮೂರ್ತಿ ಹೊತ್ತ ವಾಹನದ ಮುಂದೆ ನೃತ್ಯ ಸಹ ಗಮನ ಸೆಳೆಯುತ್ತಿತ್ತು.
ಓಣಿಯಲ್ಲಿ ಹಾಯ್ದು ಹೋಗುತ್ತಿದ್ದ ವಾಹನ ನಿಂತಾಗ, ಕಾಮಣ್ಣಗೆ ಕುಂಕುಮ–ಅರಿಶಿಣ, ಹೂವು ಅರ್ಪಿಸುತ್ತಿದ್ದ ಮಹಿಳೆಯರು, ಅಗರಬತ್ತಿಯನ್ನು ಬೆಳಗಿ, ಕಾಯಿ ಒಡೆದು ಧನ್ಯರಾಗುತ್ತಿದ್ದರು.

ಇನ್ನು, ಚನ್ನಪೇಟೆ, ಢಾಕಪ್ಪ ಸರ್ಕಲ್, ದಿವಟೆ ಓಣಿ, ಬಟರ್ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ಜನರು ಬಣ್ಣದ ನೀರಿನಲ್ಲಿ ಮಿಂದು ಖುಷಿಪಟ್ಟರು.

ಸಂಜೆ ಹೊತ್ತಿಗೆ ಕಾಮದಹನದ ನಂತರ ಬಣ್ಣದ ಹಬ್ಬಕ್ಕೆ ತೆರೆ ಬಿತ್ತು. ಬಣ್ಣ ಹಾಕಿಕೊಂಡೇ ಹೊತ್ತು ಮುಳುವವರೆಗೂ ಬೈಕ್ಗಳಲ್ಲಿ ಓಡಾಡುತ್ತಾ, ಗೆಳೆಯರೊಂದಿಗೆ ಹರಟುತ್ತಾ ಕುಳಿತಿದ್ದ ಯುವಕರು ನಂತರ ಮನೆಯತ್ತ ಹೆಜ್ಜೆ ಹಾಕಿದರು.

ಬಿಜೆಪಿ ಕಾರ್ಯಕರ್ತರ ಓಕುಳಿಯಾಟ ಸಂಭ್ರಮ
ಹುಬ್ಬಳ್ಳಿ: ಸತತ ಮೂರನೇ ಬಾರಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಬೇಕೆಂಬ ಸಂಸದ ಪ್ರಹ್ಲಾದ ಜೋಶಿ ಕನಸಿಗೆ ಬಿಜೆಪಿ ಕಾರ್ಯಕರ್ತರು ಬಣ್ಣ ತುಂಬಿದರು.

ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಹೋಳಿ ಆಚರಣೆಯಲ್ಲಿ ಸಂಸದರನ್ನು ಬಣ್ಣದಲ್ಲಿ ಮುಳುಗಿಸಿದ ಮುಖಂಡರು ಮತ್ತು ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ರಣಕಹಳೆ ಮೊಳಗಿಸಿದರು.

‘ಚುನಾವಣೆಯ ಫಲಿತಾಂಶ ಬಂದ ನಂತರ ಇನ್ನೊಮ್ಮೆ ಹೋಳಿ ಆಚರಿಸೋಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಜೋಶಿ ಹೇಳುತ್ತಿದ್ದಂತೆ ಕಾರ್ಯಕರ್ತರ ಹುಮ್ಮಸ್ಸು ನೂರ್ಮಡಿಗೊಂಡಿತು.

ಬಿಜೆಪಿ ಕಚೇರಿಯ ಮುಂದೆ ಬೆಳಿಗ್ಗೆಯಿಂದ ಸಂಭ್ರಮ ನೆಲೆ ನಿಂತಿತ್ತು. ಚುನಾವಣೆಗೆ ಸಂಬಂಧಿಸಿದ ಕೆಲಸಗಳಿಗೆ ಬಿಡುವು ನೀಡಿದ ಕಾರ್ಯಕರ್ತರು ಪರಸ್ಪರ ಬಣ್ಣ ಎರಚುತ್ತ ಶುಭಾಶಯ ವಿನಿಮಯ ಮಾಡುತ್ತ ಸಂತಸ ಹಂಚಿಕೊಂಡರು. ಜುಬ್ಬಾಧಾರಿ ಮುಖಂಡರು ಒಬ್ಬೊಬ್ಬರಾಗಿ ಬರುತ್ತಿದ್ದಂತೆ ಅವರೆಲ್ಲರಿಗೆ ಬಣ್ಣ ಹಚ್ಚಿದ ಕಾರ್ಯಕರ್ತರು ಹಲಗೆ ವಾದನದ ಸದ್ದಿಗೆ ಹೆಜ್ಜೆ ಹಾಕಿ ಖುಷಿಪಟ್ಟರು.
ಸಂಸದರು ಬಂದಾಗ ಅವರನ್ನು ಮುತ್ತಿಕೊಂಡ ಮುಖಂಡರು ಮತ್ತು ಕಾರ್ಯಕರ್ತರು ಒಂದೇ ನಿಮಿಷದಲ್ಲಿ ಅವರ ‘ಬಣ್ಣ ಬದಲಾಯಿಸಿ’ ನಗೆ ಚೆಲ್ಲಿದರು.

ಇಪ್ಪತ್ತು ನಿಮಿಷಗಳ ಬಣ್ಣದಾಟದ ನಂತರ ಹೋಳಿ ಸಂದೇಶ ನೀಡಿದ ಜೋಶಿ ‘ಇದು ಸಂತಸ, ಸಂಭ್ರಮದ ಹಬ್ಬ. ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಬಿಜೆಪಿ ಮತ್ತೊಮ್ಮೆ ಹೋಳಿ ಆಡಲಿದೆ’ ಎಂದು ಹೇಳಿದರು.

‘ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ. ದೇಶದಲ್ಲಿ ಈಗ ನರೇಂದ್ರ ಮೋದಿ ಅಲೆ ಎದ್ದಿದೆ. ಐದು ವರ್ಷಗಳಿಂದ ನಾನು ಜನರ ಸಂಪರ್ಕದಲ್ಲೇ ಇದ್ದೇನೆ. ಇದೆಲ್ಲವೂ ಮತ್ತೊಮ್ಮೆ ನನ್ನ ಜಯಕ್ಕೆ ಕಾರಣವಾಗಲಿದೆ. ಎದುರಾಳಿ ಯಾರೇ ಆಗಿರಲಿ, ಅದರ ಬಗ್ಗೆ ಚಿಂತೆ ಇಲ್ಲ. ಜನರು ಬಿಜೆಪಿ ಮತ್ತು ನನಗೇ ಮತ ಹಾಕುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಸಾವಕಾರ ವಾದನ; ನೃತ್ಯದ ಮೋಡಿ: ಸಂಸದರು ಬರುವ ಮೊದಲು ಕಾರ್ಯಕರ್ತರ ಜೊತೆಗೂಡಿದ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಸಾವಕಾರ ಹಲಗೆ ನುಡಿಸಿ ಪಕ್ಷಕ್ಕಾಗಿ ದುಡಿಯುವವರಿಗೆ ಹುರುಪು ತುಂಬಿದರು. ಹಲಗೆ ಹಿಡಿದುಕೊಂಡು ಕಡ್ಡಿಗಳಲ್ಲಿ ಲಯಬದ್ಧ ನಾದ ಹೊರಡಿಸಿದಾಗ ಸುತ್ತ ಇದ್ದವರು ಹೆಜ್ಜೆ ಹಾಕಿದರು. ಪ್ರಹ್ಲಾದ ಜೋಶಿ ಕೂಡ ಸ್ವಲ್ಪ ಹೊತ್ತು ಹಲಗೆ ಬಾರಿಸಿದರು. ಹೀಗಾಗಿ ಅಲ್ಲಿ ನಾದ–ನೃತ್ಯದ ಸೊಬಗು ಮೈವೆತ್ತಿತು.

ಮೋದಿ ಮುಖವಾಡ ಹಾಕಿಕೊಂಡಿದ್ದ ಕಾರ್ಯಕರ್ತರು ಗಮನ ಸೆಳೆದರು. ಭಾರತ ಮಾತೆ, ಬಿಜೆಪಿ, ಮೋದಿ ಮುಂತಾದವರಿಗೆ ಜಯಘೋಷವೂ ಕೇಳಿಬಂತು. ಪಕ್ಷದ ಮಹಾನಗರ ಜಿಲ್ಲಾ ಘಟಕದ ವಕ್ತಾರ ವೀರೇಶ ಸಂಗಳದ, ರಂಗಾ ಬದ್ದಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.