ಬನ್ನಿ ಹಾಡೋಣ ಕವಿತೆಯ...

7

ಬನ್ನಿ ಹಾಡೋಣ ಕವಿತೆಯ...

Published:
Updated:
ಬನ್ನಿ ಹಾಡೋಣ ಕವಿತೆಯ...

ಜೆ.ಪಿ.ನಗರದಲ್ಲಿರುವ ಸಂಗೀತಧಾಮ ಸಂಸ್ಥೆಯು ಮೃತ್ಯುಂಜಯ ದೊಡ್ಡವಾಡ್ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಬನ್ನಿ ಹಾಡೋಣ ಕವಿತೆಯ~ ರಾಜ್ಯಮಟ್ಟದ ಸುಗಮ ಸಂಗೀತ ಶಿಬಿರ ಯಶಸ್ವಿಯಾಗಿ ನಡೆಯಿತು.ಖ್ಯಾತ ಹಿಂದುಸ್ತಾನಿ ಗಾಯಕ ಶ್ರೀಮಂತ ಆವಟಿ, ಕವಿ ಕಾ.ವೆಂ. ಶ್ರೀನಿವಾಸಮೂರ್ತಿ, ಬಾಗೂರು ಮಾರ್ಕಂಡೇಯ ಹಾಗೂ ಗಾಯಕಿ ಜ್ಯೋತಿ ರವಿ ಪ್ರಕಾಶ್ ಶಿಬಿರ ಉದ್ಘಾಟಿಸಿದರು. ನಂತರ ಮೃತ್ಯುಂಜಯ ದೊಡ್ಡವಾಡ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಭಾವಗೀತೆಗಳನ್ನು ಶಿಬಿರಾರ್ಥಿಗಳು ಟ್ರ್ಯಾಕ್‌ನೊಂದಿಗೆ ಅಭ್ಯಾಸ ನಡೆಸಿದರು.ಬಾಗೂರು ಮಾರ್ಕಂಡೇಯ ಅವರ `ಬಗೆ ಬಗೆ ಬಣ್ಣದ~, ಬಿ.ಆರ್.ಲಕ್ಷ್ಮಣ್‌ರಾವ್ ಅವರ `ಕಾಯುತ್ತಾ ಕೂರುವುದೇ~, ಚೆನ್ನವೀರ ಕಣವಿ ಅವರ `ಎಳ್ಳೀಗೆ, ಎಣ್ಣೀಗೆ~ ಕಾ.ವೆಂ.ಶ್ರೀನಿವಾಸಮೂರ್ತಿ ಅವರ `ಬೆಳ್ಳಿ ಬಾನಲ್ಲಿ~ ಗೀತೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry