ಗುರುವಾರ , ಜನವರಿ 30, 2020
18 °C

ಬನ್ನೇರುಘಟ್ಟ: ಪ್ರವೇಶ ದರ ಏರಿಕೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್:  ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರವೇಶ ದರವನ್ನು ಫೆಬ್ರುವರಿ 1ರಿಂದ ಏರಿಸಲಾಗುತ್ತಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ರಾಜು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉದ್ಯಾನದ ಪ್ರವೇಶ ದರದಲ್ಲಿ ಏರಿಕೆಯಾಗಿದ್ದು, ಮೃಗಾಲಯದ ವೀಕ್ಷಣೆಗೆ ವಯಸ್ಕರಿಗೆ 60 ರೂಪಾಯಿ (ಹಿಂದಿನ ದರ 45ರೂ), 6ರಿಂದ 12 ವಯಸ್ಸಿನ ಮಕ್ಕಳಿಗೆ 30 ರೂಪಾಯಿ (ಹಿಂದಿನ ದರ 25ರೂ), ಹಿರಿಯ ನಾಗರಿಕರಿಗೆ 40 ರೂಪಾಯಿ(ಹಿಂದಿನ ದರ 30 ರೂ) ನಿಗದಿ ಪಡಿಸಲಾಗಿದೆ.

 

ಹುಲಿ, ಸಿಂಹ, ಕರಡಿ ಹಾಗೂ ಸಸ್ಯಹಾರಿ ಪ್ರಾಣಿಗಳ ಗ್ರ್ಯಾಂಡ್ ಸಫಾರಿ ವೀಕ್ಷಣೆಗೆ ವಯಸ್ಕರಿಗೆ 150 ರೂಪಾಯಿ (ಹಿಂದಿನ ದರ 115ರೂ), ಮಕ್ಕಳಿಗೆ 70 ರೂಪಾಯಿ(ಹಿಂದಿನ ದರ 60ರೂ) ಹಾಗೂ ಹಿರಿಯ ನಾಗರಿಕರಿಗೆ 100 ರೂಪಾಯಿಯನ್ನು (ಹಿಂದಿನ ದರ 70ರೂ) ನಿಗದಿಪಡಿಸಲಾಗಿದೆ.ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಧಾಮಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಡಿ.22ರಂದು ನಡೆದ ಮೃಗಾಲಯ ಪ್ರಾಧಿಕಾರದ 119ನೇ ಸಭೆಯಲ್ಲಿ ದರ ಏರಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)