ಯಾದಗಿರಿ: ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಶಾಸಕರಾಗಿರುವ ಬಾಬುರಾವ ಚಿಂಚನಸೂರ ಸೌಜನ್ಯಕ್ಕಾದರೂ ಈ ಗ್ರಾಮಗಳಿಗೆ ಭೇಟಿ ನೀಡದೇ ಇರುವುದು ಗ್ರಾಮಸ್ಥರಿಂದ ತಿಳಿದು ಬಂದಿದೆ. ಗ್ರಾಮಸ್ಥರ ಗೋಳು ಕೇಳತೀರದಾಗಿದೆ ಎಂದು ಜೆಡಿಎಸ್ ಬರ ಅಧ್ಯಯನ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ ಗ್ರಾಮದ ಜನರು ಪ್ರಮುಖವಾಗಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ವಿದ್ಯುತ್, ಮಹಿಳೆಯರಿಗೆ ಶೌಚಾಲಯ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ತಂಡದ ಎದುರು ಅಹವಾಲು ಸಲ್ಲಿಸಿದರು.

ಪ್ರತಿಯೊಂದು ಗ್ರಾಮದಲ್ಲೂ ಸಮಸ್ಯೆಗಳ ಸುರಿಮಳೆಯೇ ಕಂಡು ಬಂತು. ಗ್ರಾಮಸ್ಥರು ತಮ್ಮ ವ್ಯಥೆಯನ್ನು ತಿಳಿಸಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು ಎಂದು ತಂಡದ ಸದಸ್ಯರು ತಿಳಿಸಿದರು.
ನೇತೃತ್ವ ವಹಿಸಿದ್ದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ, ಜಿಲ್ಲೆಯ ಬರದ ಛಾಯೆ ಇದೆ. ಜನರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲೂ ಶಾಸಕರು ಒಣ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಜನರಿಂದ ಆಯ್ಕೆಯಾದವರು ಜನರ ಸಮಸ್ಯೆಗಳ ಬಗ್ಗೆ ಪರಿಶೀಲಿಸಬೇಕು.

ಆದರೆ ಕ್ಷೇತ್ರದಾದ್ಯಂತ ಸಮಸ್ಯೆಗಳೇ ತಾಂಡವವಾಡುತ್ತಿವೆ. ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಗಮನಕ್ಕೆ ಬಂದಿದೆ ಎಂದು ಹೇಳಿದರು. ಈ ಎಲ್ಲ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಏ. 30 ರೊಳಗೆ ಸಮಗ್ರ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುತ್ತಿದೆ. ಎಲ್ಲ ಸಮಸ್ಯೆಗಳಿಗೂ ಪಕ್ಷದಿಂದ ಆದಷ್ಟು ಸಹಾಯ ಮಾಡಲು ನಿರ್ಧರಿಸಲಾಗಿದೆ ಎಂದರು.

ತಿಮ್ಮಣ್ಣ ಹೆಡಗಿಮದ್ರಿ, ವಿಶ್ವನಾಥ, ಜಿ. ತಮ್ಮಣ್ಣ, ನಾಗರತ್ನಾ ಅನಪೂರ, ಪದ್ಮಾವತಿ, ಬಸಮ್ಮ, ನವಾಜರೆಡ್ಡಿ ಚಪೇಟ್ಲಾ, ಮುಸಿಯುದ್ದೀನ್ ಹಾಜಿ, ಭೀಮರೆಡ್ಡಿ ಚಪೇಟ್ಲಾ, ಉದಯಕುಮಾರ ಮುಂತಾದವರನ್ನು ಒಳಗೊಂಡ ಅಧ್ಯಯನ ತಂಡ, ಶಿವಪುರ, ರಾಮಪೂರ, ಗಾಜರಕೋಟ್, ದೇವರಹಳ್ಳಿ, ಯದ್ಲಾಪುರ, ಚಪೇಟ್ಲಾ, ಹಿಮಲಾಪುರ, ಸಿದ್ಧಾಪುರ, ಎಂ.ಟಿ. ಪಲ್ಲಿ, ಕಾಕಲವಾರ, ಬೂದುರು, ಚಂಡ್ರಕಿ, ಮಡೆಪಲ್ಲಿ, ಪುಟಪಾಕ್ ತಾಂಡಾ, ದಂತಾಪುರ, ಕೇಶ್ವಾರ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.