ಗುರುವಾರ , ಮೇ 13, 2021
36 °C

ಬರವಣಿಗೆಗೆ ಮುನ್ನಅಧ್ಯಯನ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಆಳವಾದ ಅಧ್ಯಯನ, ಪಾತ್ರಗಳ ಪರಕಾಯ ಪ್ರವೇಶದಂತಹ ಗುಣಗಳು ಸಾಹಿತಿಯಲ್ಲಿ ಅಡಗಿರದಿದ್ದರೆ ಉತ್ತಮ ಕೃತಿ ಹೊರಬರಲು ಸಾಧ್ಯವೇ ಇಲ್ಲ. ತಮ್ಮ ಕೃತಿಗಳು ಅದಕ್ಕಾಗಿಯೇ ಇಂದು ಮಹತ್ವ ಗಳಿಸಿಕೊಂಡಿವೆ ಎಂದು ಕೇಂದ್ರದ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ನುಡಿದರು.ವೀರಪ್ಪ ಮೊಯಿಲಿ ಸಾಹಿತ್ಯಾವಲೋಕನ ಸಮಿತಿ ಮತ್ತು ಜನಶಕ್ತಿ ಸೇವಾ ಟ್ರಸ್ಟ್‌ಗಳು ಶುಕ್ರವಾರ ಪುರಭವನದಲ್ಲಿ ಹಮ್ಮಿಕೊಂಡ ಸಾಹಿತ್ಯಾವಲೋಕನದ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು ಈ ವಿಷಯ ತಿಳಿಸಿದರು.`ನಾನು ಜಗತ್ತಿನ ಹಲವು ಸಾಹಿತ್ಯ ಕೃತಿಗಳನ್ನು ಓದಿದ್ದೇನೆ. ಒಂದೊಂದು ಪಾತ್ರವನ್ನೂ ಸೃಷ್ಟಿಸಿ, ಬೆಳೆಸುವಾಗಲೂ ಅದರೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಇದೀಗ ರಚಿಸುತ್ತಿರುವ `ಶ್ರೀಮುಡಿ ಪರಿಕ್ರಮ~ ಕೃತಿಯಲ್ಲೂ ದ್ರೌಪದಿಯ ಪಾತ್ರಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಆಳವಾದ ಆಧ್ಯಯನ ಮತ್ತು ಪಾತ್ರದ ಒಳಹೊಕ್ಕು ನಿರೂಪಿಸುವಂತಹ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ನುಡಿದರು.`ನಮಗೆ ಪ್ರತಿಸ್ಪರ್ಧಿ ಎಂದರೆ ಸಮಯ ಮಾತ್ರ. ಅದನ್ನು ಹೊಂದಿಸಿಕೊಂಡು ಹೋಗುವಲ್ಲಿಯೇ ಯಶಸ್ಸು ಅಡಗಿದೆ~ ಎಂದ ಅವರು, `ಜಡಭರತನ ಕನಸುಗಳು~ ಕೃತಿಯನ್ನು ಓದಿದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು ಎಂದು ನೆನಪಿಸಿಕೊಂಡರು.ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ನಾನು ಜಾತಿ ಕಟ್ಟಿಕೊಂಡು ಬೆಳೆದವನಲ್ಲ. ನನ್ನಲ್ಲಿ ನೆಲದ ಗುಣ ಕಾಣಬಹುದು. ಈ ಮಣ್ಣಿನಲ್ಲಿ ಹುಟ್ಟಿರದಿದ್ದರೆ ನಾನು ಕವಿಯಾಗುತ್ತಿರಲಿಲ್ಲ. ಕಷ್ಟದಲ್ಲಿ ಎದೆಗುಂದದೆ ಬದುಕುವ ಕಲೆಯನ್ನು ನನಗೆ ಈ ನೆಲ ಕಲಿಸಿಕೊಟ್ಟಿದೆ~ ಎಂದರು.ಉಪನ್ಯಾಸಕರಾದ ಪಿ.ಎಲ್.ಧರ್ಮ, ಗಣನಾಥ ಎಕ್ಕಾರು, ವಾಸುದೇವ ಬೆಳ್ಳೆ ಅವರು ಮೊಯಿಲಿ ಅವರಿಗೆ ಕೃತಿ ಕುರಿತು ಪ್ರಶ್ನೆಗಳನ್ನು ಕೇಳಿದರು. ಸಮಾರೋಪದಲ್ಲಿ ಪತ್ನಿ ಸಮೇತ ತಮಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಮೊಯಿಲಿ ಅವರು ನಯವಾಗಿಯೇ ನಿರಾಕರಿಸಿದರು. `ನನ್ನ ಸಾಹಿತ್ಯ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ನನ್ನ ಸನ್ಮಾನ ಬೇಡ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.