ಅರಕಲಗೂಡು: ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಕೂಲಿ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಹೊ.ತಿ. ಹುಚ್ಚಪ್ಪ, `ರಾಜ್ಯದ 123 ತಾಲ್ಲೂಕುಗಳಲ್ಲಿ ಬರಸ್ಥಿತಿ ಇದೆ ಎಂದು ಸರ್ಕಾರವೇ ಘೋಷಿಸಿದೆ. ಆದರೆ ಬರ ಪೀಡಿತ ಪ್ರದೇಶಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಬರ ಇದ್ದರೂ ಮಂತ್ರಿಗಳು, ಶಾಸಕರು, ಅಧಿಕಾರಿಗಳು ತಮಗೆ ಬರಬೇಕಾದ ವೇತನ ಹಾಗೂ ಸವಲತ್ತು ಪಡೆಯತ್ತಿದ್ದಾರೆ~ ಎಂದು ಟೀಕಿಸಿದರು.

`ಬಿತ್ತಿದ ಬೆಳೆಯನ್ನು ರೈತರು ಕಳೆದುಕೊಂಡಿದ್ದಾರೆ. ದನಕರುಗಳು ಕುಡಿಯುವ ನೀರು, ಮೇವು ಇಲ್ಲದೆ ಸಂಕಟ ಅನುಭವಿಸುತ್ತಿವೆ. ಸಮಾಜಕ್ಕೆ ಅನ್ನ ನೀಡುವ ರೈತರಿಗೆ ಕೂಲಿ ಕೊಡಲು ಸರ್ಕಾರ ನಿರಾಕರಿಸುತ್ತಿದೆ~ ಎಂದು ಆರೋಪಿಸಿದರು.

ಕೃಷಿ ಚಟುವಟಿಕೆಯಿಂದ ರೈತರಿಗೆ ಸಿಗುತ್ತಿದ್ದ ಆದಾಯವನ್ನು ಸರ್ಕಾರ ಕೂಲಿ ರೂಪದಲ್ಲಿ ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

ತಾಲ್ಲೂಕು ಕಚೇರಿ ಮುಂದೆ ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದ ರೈತರು, ಬಳಿಕ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.