ಶನಿವಾರ, ಏಪ್ರಿಲ್ 17, 2021
28 °C

ಬರ ಪರಿಹಾರದ ನಿರ್ವಹಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಬಾರದೆ ಸತತ ಎರಡನೇ ವರ್ಷವೂ ಬರಗಾಲ ಕಾಣುತ್ತಿರುವುದರಿಂದ, ಕಳ್ಳತನ, ಕೊಲೆ ಸುಲಿಗೆಗಳು, ಮೋಸ, ಭಯ ಹಾಗೂ ಆತ್ಮಹತ್ಯೆಗಳು ಹೆಚ್ಚುವುದನ್ನು ತಡೆಯಬೇಕು. ಸರ್ಕಾರಗಳು ಅನುತ್ಪಾದಕ ಮತ್ತು ಅನಗತ್ಯ ಬಾಬುಗಳಿಗೆ ಹಣ ವ್ಯಯ ಮಾಡುವುದನ್ನು ಕಡಿಮೆಗೊಳಿಸಿ ಜವಾಬ್ದಾರಿಯಿಂದ ಉತ್ಪಾದನಾ ಮತ್ತು ಅಭಿವೃದ್ಧಿಯ ಕ್ಷೇತ್ರಗಳಿಗೆ ಆಸಕ್ತಿ ವಹಿಸಬೇಕು.ಜನರಿಗೆ ಕುಡಿಯುವ ನೀರಿನ ಮತ್ತು ಕಡಿಮೆ ದರದಲ್ಲಿ ದವಸ ಧಾನ್ಯ ಹಾಗೂ ಅಗತ್ಯ ವಸ್ತುಗಳ ಪೂರೈಕೆಯಾಗಬೇಕು. ಉತ್ತಮ ಪಶುಗಳನ್ನು ಕಸಾಯಿ ಖಾನೆಯಿಂದ ಪಾರು ಮಾಡಲು ಅಲ್ಲಲ್ಲಿ ದನಗಳಿಗೆ ಕುಡಿಯುವ ನೀರಿನ ತೊಟ್ಟಿಗಳು ಹಾಗೂ ತಾಲ್ಲೂಕುವಾರು ಮೇವಿನ ಬ್ಯಾಂಕುಗಳನ್ನು ತೆರೆದು ಮೇವು ಪೂರೈಸಬೇಕು.ಆಸ್ಟ್ರೇಲಿಯವು ಹಸುವೊಂದನ್ನು ಸಾಕಲು ದಿನವೊಂದಕ್ಕೆ ರೂ. 70 ರಿಂದ 80 ಪ್ರೋತ್ಸಾಹ ಧನವಾಗಿ ನೀಡುತ್ತಿದೆ. ನಮ್ಮಲ್ಲಿಯೂ ಕನಿಷ್ಠ 40 ರೂ. ಆದರೂ ನೀಡುವ ಆದೇಶವಾಗಬೇಕು.ಬರ ಪರಿಹಾರವು ಎಕರೆ ಒಂದಕ್ಕೆ ಕನಿಷ್ಠ ರೂ. 6000 ಖರ್ಚು ಮಾಡಿ ಮತ್ತು ಬಿತ್ತಿದ ನಂತರ ಮಳೆ ಬೆಳೆ ಆಗದ ಪ್ರದೇಶಕ್ಕೆ ರೂ. 8000 ಹಾಗೂ 25-45 ಭಾಗ ಬೆಳೆ ಆದ ಕಡೆ ರೂ. 4000 ಈ ರೀತಿ ಬರ ಪರಿಹಾರ ನೀಡಬೇಕು.ಈ ರೀತಿ ಬರಪರಿಹಾರ ನೀತಿ ಬದಲಿಸಿದಲ್ಲಿ ಮಾತ್ರ ರೈತರಿಗೆ ಸಹಾಯವಾಗುವುದು. ರೈತರ ಸಾಲ ವಸೂಲಾತಿಗೆ ವಿಶ್ರಾಂತಿ ನೀಡಿ ಬಡ್ಡಿ ಮನ್ನಾ ಮಾಡಿ, ಅಲ್ಪಾವಧಿ ಸಾಲಗಳನ್ನು ಮಧ್ಯಮಾವಧಿಗೆ ಮತ್ತು ಮಧ್ಯಮಾವಧಿಯ ಸಾಲಗಳನ್ನು ದೀರ್ಘಾವಧಿಗೆ ಹಾಗೂ ದೀರ್ಘಾವಧಿಯ ಸಾಲದ ಕಂತುಗಳನ್ನು ಮೂರು ವರ್ಷ ಮುಂದಕ್ಕೆ ಹಾಕುವ ಪರಿವರ್ತನೆಗಳಾಗಬೇಕು.ಕೆರೆ, ಡ್ಯಾಮ್‌ಗಳ ಹೂಳು ಮಣ್ಣು ಎತ್ತಬೇಕು ಮತ್ತು ಗಂಗಾ - ಕಾವೇರಿ ನದಿಗಳ ಜೋಡಣೆಗಳಗಬೇಕು. ಇದರ ಜೊತೆಗೆ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ನೀಡುವ ನೆರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.