ಶನಿವಾರ, ಮಾರ್ಚ್ 6, 2021
29 °C
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವ ಶಾಮನೂರು

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ

ದಾವಣಗೆರೆ: ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬಲಿಷ್ಠ ರಾಷ್ಟ್ರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿ ಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋ ಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ  ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.‘ಸರ್ಕಾರಿ ಅಧಿಕಾರಿಗಳು, ನೌಕರರು, ಶಿಕ್ಷಕರು ಹಾಗೂ ನಾಗರಿಕರು ತಮ್ಮ ಕರ್ತವ್ಯ ಪ್ರಜ್ಞೆ ಮರೆಯಬಾರದು. ತಮ್ಮ ಕಾಯಕವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕ ತೆಯಿಂದ ನಿಭಾಯಿಸಬೇಕು. ನಾವು ಮಾಡಿದ ಸಾಧನೆಗಳು ನಮ್ಮ ಅಳತೆಗೋಲು ಆಗಬೇಕು. ಪ್ರತಿ ನಾಗರಿ ಕನ ಅಭ್ಯುದಯವಾದರೆ ದೇಶವೂ ಪ್ರಗತಿಯತ್ತ ದಾಪುಗಾಲು ಇಡಲಿದೆ. ಆದ್ದರಿಂದ, ಎಲ್ಲರೂ ಆ ನಿಟ್ಟಿನಲ್ಲಿ ಪರಿಶ್ರಮ ಹಾಕಬೇಕು’ ಎಂದು ಆಶಿಸಿದರು.‘ಪ್ರಥಮವಾಗಿ ನಾವು ಈ ನಾಡಿಗೆ ಏನು ಮಾಡಿದ್ದೇವೆ; ಏನು ಮಾಡಲು ಇಚ್ಛಿಸಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜನಿಸಿದ ನಾಡಿಗೆ ದ್ರೋಹ ಮಾಡಬಾರದು ಎಂಬ ಕಲ್ಪನೆಯಿದ್ದರೆ, ಮಾತ್ರ ಜವಾಬ್ದಾರಿಯುತ ಪ್ರಜೆ ಎನಿಸಿಕೊಳ್ಳಲು ಸಾಧ್ಯ. ನಾಗರಿಕರು ತಮ್ಮ ಹಕ್ಕುಗಳ ಪ್ರತಿಪಾದನೆಯ ಜೊತೆಗೆ ಕರ್ತವ್ಯಗಳನ್ನು ಮನಃಪೂರ್ವಕವಾಗಿ ನಿಭಾಯಿಸಬೇಕು’ ಎಂದು ಮನವಿ ಮಾಡಿದರು.‘ನಿನ್ನೆಯಷ್ಟೇ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿ ಸಲಾಗಿದೆ. 18 ವರ್ಷ ಮೇಲ್ಪಟ್ಟವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಈ ದಿನಾಚರಣೆ ಅರಿವು ಮೂಡಿಸುತ್ತಿದೆ. ಬಲಿಷ್ಠ ಹಾಗೂ ಸಮೃದ್ಧ ಪ್ರಜಾಪ್ರಭುತ್ವವನ್ನಾಗಿ ಮಾಡಲು ಈ ದಿನಾಚರಣೆ ಮಹತ್ವದಾಗಿದೆ’ ಎಂದು ಹೇಳಿದರು.ಆಕರ್ಷಕ ಪಥಸಂಚಲನ: ಸಚಿವ ಶಾಮನೂರು ಶಿವಶಂಕರಪ್ಪ ಅವರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ತಂಡಗಳನ್ನು ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್‌ ಹಾಗೂ ವಿವಿಧ ಶಾಲಾ– ಕಾಲೇಜು ತಂಡಗಳು ನಡೆಸಿಕೊಟ್ಟ ಪಥಸಂಚಲನ ಆಕರ್ಷಕವಾಗಿತ್ತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ  ಮಾಡಲಾಯಿತು.ಜಿಲ್ಲಾ ‘ಕಲಾಶ್ರೀ’ಪ್ರಶಸ್ತಿ: ಅಮೃತ ವಿದ್ಯಾಲಯದ 10ನೇ ತರಗತಿಯ ಎಸ್‌. ಅಭಿಜ್ಞಾ (ಭರತನಾಟ್ಯ), ಜಗಳೂರು ಸಂಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು 8ನೇ ತರಗತಿ ಎಚ್‌.ಬಿ. ಹನುಮಂತರಾಜು (ವಾದ್ಯ ಸಂಗೀತ), ಹರಿಹರ ಮರಿಯಾ ನಿವಾಸ್‌ ಶಾಲೆ 7ನೇ ತರಗತಿಯ ಜಿ.ಪಂಚಾಕ್ಷರಿ (ಶಾಸ್ತ್ರೀಯ ಸಂಗೀತ), ಚನ್ನಗಿರಿ ಸರ್ಕಾರಿ ಜೂನಿಯರ್‌ ಕಾಲೇಜು 10ನೇ ತರಗತಿ ಎಂ.ಪ್ರೇಮಾ (ಸೃಜನಾತ್ಮಕ ಬರವಣಿಗೆ), ದಾವಣಗೆರೆಯ ತರಳಬಾಳು ಕೇಂದ್ರೀಯ ಶಾಲೆಯ 10ನೇ ತರಗತಿಯ ಗೌರಿ ವೈ. ಸುಬೇದಾರ್‌ (ಸೃಜನಾತ್ಮಕ ಬರವ ಣಿಗೆ), ಜಗಳೂರು ಎನ್‌ಎಂಕೆ ಪ್ರೌಢಶಾಲೆ 9ನೇ ತರಗತಿ ಎಸ್‌.ಎನ್‌. ಶಶಾಂಕ್‌ (ವಿಜ್ಞಾನದಲ್ಲಿ ನೂತನ ಆವಿಷ್ಕಾರ), ಮಾಡರ್ನ್‌ ಶಾಲೆಯ ಎಂ.ಸಿರಿ (ವಿಜ್ಞಾನದಲ್ಲಿ ಆವಿಷ್ಕಾರ).ಬಾಲಭವನ ಪ್ರಶಸ್ತಿ: ಹರಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ಜಿ.ಕಾವ್ಯಾ (ಸೃಜನಾತ್ಮಕ ಬರವಣಿಗೆ), ದಾವಣಗೆರೆಯ ತರಳ ಬಾಳು ಶಾಲೆಯ ಎಸ್‌.ಎಂ.ವಿಸ್ಮಯ (ಪ್ರದರ್ಶನ ಕಲೆ).ಸರ್ವೋತ್ತಮ ಪ್ರಶಸ್ತಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಬಿ.ಆನಂದ, ಪಾಲಿಕೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ಎಂ.ನಾಗ ರಾಜ್‌, ಹರಿಹರ ತಹಶೀಲ್ದಾರ್‌ ಜಿ.ನಜ್ಮಾ, ಜಿಲ್ಲಾಧಿಕಾರಿ ಕಚೇರಿಯ ಲೆಕ್ಕ ಪರಿ ಶೋಧನಾಧಿಕಾರಿ ಎಂ.ಎನ್‌. ನಾಡಿ ಗೇರ್‌, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾ ಸಹಾ ಯಕ ಎಂ.ಸಿ.ಉಮೇಶ್‌, ಜಿಲ್ಲಾಧಿ ಕಾರಿ ಕಚೇರಿ ದ್ವಿತೀಯ ದರ್ಜೆ ಸಹಾಯಕ ಕೆ.ಎಲ್‌.ಶ್ರೀನಿವಾಸ್‌ ಅವರಿಗೆ ಇದೇ ವೇಳೆ ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶೇಖರಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌, ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಡಿ.ಬಸವರಾಜ್‌, ಪುಷ್ಪಾ ಲಕ್ಷ್ಮಣಸ್ವಾಮಿ, ಮೇಯರ್‌ ಎಚ್‌.ಬಿ. ಗೋಣೆಪ್ಪ, ಅಯೂಬ್‌ ಪೈಲ್ವಾನ್‌, ಜಿಲ್ಲಾಧಿಕಾರಿ ಎಸ್‌.ಟಿ. ಅಂಜನ ಕುಮಾರ್‌, ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್‌ ಗುಳೇದ, ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಗಿರೀಶ್‌ ಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ ಹಾಜರಿದ್ದರು.ಮನಸೆಳೆದ ನೃತ್ಯರೂಪಕ

ದಾವಣಗೆರೆ
: ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ವಿದ್ಯಾರ್ಥಿ ಗಳು ನಡೆಸಿಕೊಟ್ಟ ನೃತ್ಯರೂಪಕ ಎಲ್ಲರ ಗಮನ ಸೆಳೆಯಿತು.ವರ್ತುಲ ರಸ್ತೆಯ ನವೋದಯ ಶಾಲೆಯ ವಿದ್ಯಾರ್ಥಿಗಳು ಮೇರೆ ಭಾರತ್‌ಕೀ ದರ್ತಿ ಹಾಡಿಗೆ ಹೆಜ್ಜೆ ಹಾಕಿದರು. ಬಳಿಕ ತ್ರಿಶೂಲ್‌ ಕಾನ್ವೆಂಟ್‌ ವಿದ್ಯಾರ್ಥಿಗಳ ನೃತ್ಯರೂಪ ಕಕ್ಕೆ ಭಾರಿ ಚಪ್ಪಾಳೆಯ ಪ್ರತಿಸ್ಪಂದ ನೆಯೇ ಸಿಕ್ಕಿತು. ಸೈನ್ಯಕ್ಕೆ ಆಯ್ಕೆಯಾದ ಬಳಿಕ ಕುಟುಂಬ, ಮಕ್ಕಳನ್ನು ಬಿಟ್ಟು ದೇಶ ಕಾಯಲು ಹೊರಡುವ ಸನ್ನಿವೇಶ, ಸೈನ್ಯದಲ್ಲಿ ತರಬೇತಿ, ಭಯೋತ್ಪಾದಕರ ದಾಳಿ, ಬಳಿಕ ಭಾರತಾಂಬೆಯೇ ಉಗ್ರರನ್ನು ಸದೆಬಡಿ ಯುವ ನೃತ್ಯರೂಪಕ ಎಲ್ಲರ ಮೆಚ್ಚುಗೆ ಗಳಿಸಿತು.

ಸಿಗದ ಪೂರ್ಣ ಅವಕಾಶ:  ಹೊಂಡದ ವೃತ್ತದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ರೈತರ ಸ್ಥಿತಿಗತಿಯ ನೃತ್ಯರೂಪಕವನ್ನು ಪೂರ್ಣಗೊಳಿಸಲು ಅವಕಾಶ ಸಿಗಲಿಲ್ಲ. ಅರ್ಧಕ್ಕೆ ನಿಲ್ಲಿಸಲಾಯಿತು. ಇದರಿಂದ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಅವಕಾಶ ಸಿಗದೇ ನಿರಾಶೆಗೊಂಡರು. ಸೋಮೇಶ್ವರ ಶಾಲೆಯ ವಿದ್ಯಾರ್ಥಿಗಳ ಮಲ್ಲಕಂಬ ಸಾಹಸ ಆಕರ್ಷಕವಾಗಿತ್ತು. ಸೇಂಟ್‌ ಜಾನ್ಸ್‌ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು.ಪೊಲೀಸ್ ಸರ್ಪಗಾವಲು

ರಾಜ್ಯದ ವಿವಿಧೆಡೆ ಶಂಕಿತ ಉಗ್ರರ ಬಂಧನ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪೊಲೀಸ್‌ ಸರ್ಪಗಾವಲ ಮಧ್ಯೆಯೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಇದೇ ಮೊದಲ ಬಾರಿಗೆ ನಗರದಲ್ಲಿ ಇಂತಹ ಭದ್ರತೆ ನೀಡಲಾಗಿತ್ತು. ಎಲ್ಲೆಲ್ಲೂ ಪೊಲೀಸರೇ ಇದ್ದರು. ಇದರಿಂದ ಕ್ರೀಡಾಂಗಣಕ್ಕೆ ಬಂದವರೂ ಒಮ್ಮೆ ಅಚ್ಚರಿಗೆ ಒಳಗಾದರು. ಕ್ರೀಡಾಂಗಣಕ್ಕೆ ಉಸ್ತುವಾರಿ ಸಚಿವರ ವಾಹನ ಬಿಟ್ಟರೆ ಬೇರೆ ವಾಹನಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಮೆಟಲ್‌ ಡಿಟೆಕ್ಟರ್‌ ಅಳವಡಿಸಲಾಗಿತ್ತು.

ಗೃಹ ಇಲಾಖೆ ಸೂಚನೆಯ ಮೇರೆಗೆ ಸರ್ಕಾರಿ ಇಲಾಖೆ ವಾಹನ ಚಾಲಕರು ವಾಹನ ಬಿಟ್ಟು ಹೋಗದಂತೆ ಎಚ್ಚರಿಕೆ ನೀಡಲಾಗಿತ್ತು.

ಹೀಗಾಗಿ, ಚಾಲಕರು ವಾಹನ ಬಳಿಯೇ ಕಾದು ಕುಳಿತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.