ಬುಧವಾರ, ಮೇ 25, 2022
31 °C

ಬಲ್ವಾ ಜತೆ ಸಂಪರ್ಕ;

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಲಾಪುರ (ಪಿಟಿಐ): 2 ಜಿ ತರಂಗಾಂತರ ಹಗರಣದ ಸಂಬಂಧ ಸಿಬಿಐನಿಂದ ಬಂಧಿತನಾಗಿರುವ ಡಿಬಿ ರಿಯಾಲ್ಟಿಯ ವ್ಯವಸ್ಥಾಪಕ ನಿರ್ದೇಶಕ ಶಾಹಿದ್ ಉಸ್ಮಾನ್ ಬಲ್ವಾಗೂ ತನಗೂ ಸಂಪರ್ಕವಿದೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತಳ್ಳಿಹಾಕಿದ್ದಾರೆ.‘ಮಾಧ್ಯಮಗಳಲ್ಲೇ ವರದಿಯಾಗಿರುವ ಪ್ರಕಾರ ಆತನ ವಯಸ್ಸು 32. ನನ್ನ ವಯಸ್ಸು ಈಗ 70. ನಾನು ಆತನಿಗೆ ಸ್ನೇಹಿತನಾಗಲು ಹೇಗೆ ಸಾಧ್ಯ?’- ಎಂದು ಎನ್‌ಸಿಪಿ ಮುಖಂಡ ಕೇಳಿದ್ದಾರೆ.ಬಾರಾಮತಿಯಲ್ಲಿರುವ ತಮಗೆ ಸೇರಿದ ಜಾಗದಲ್ಲಿದೆ ಎನ್ನಲಾದ ಡೈನಾಮಿಕ್ಸ್ ಡೈರಿ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಬಲ್ವಾ ಪಾಲುದಾರಿಕೆ ಇದೆ ಎಂಬ ವರದಿಗಳನ್ನೂ ಅವರು ನಿರಾಕರಿಸಿದ್ದಾರೆ. ಅಮೆರಿಕದ ಸ್ಕ್ರೀಬರ್ ಫುಡ್ಸ್ ಇಂಕ್. ಎಂಬ ಕಂಪೆನಿ ಈ ಡೈರಿಯ ಒಡೆತನ ಹೊಂದಿದ್ದು ಇದರಲ್ಲಿ ಬೇರ್ಯಾರೂ ಪಾಲುದಾರಿಕೆ ಹೊಂದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಬಾರಾಮತಿಯ ರೈತರು ಕಳೆದ 30 ವರ್ಷಗಳಿಂದ ಈ ಡೈರಿಗೆ ಹಾಲು ಪೂರೈಸುತ್ತಿದ್ದಾರೆ. ಈ ಡೈರಿ ಆರಂಭವಾದಾಗ ಬಲ್ವಾ ಕೇವಲ ಎರಡು ವರ್ಷದ ಮಗು ಆಗಿದ್ದ ಎಂದೂ ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.