ಗುರುವಾರ , ಮೇ 6, 2021
25 °C

ಬಳ್ಳಿ ಕತ್ತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಲಿಕಾಂ ಬಡಾವಣೆಯಲ್ಲಿ ವಿದ್ಯುತ್‌ ವಾಹಕ ತಂತಿಗೆ ಬಳ್ಳಿ ಹಬ್ಬಿದ್ದರೂ ಸ್ಥಳೀಯ ಬೆಸ್ಕಾಂ ಸಿಬ್ಬಂದಿಗೆ ಕಾಣದಾಗಿದೆ. ಜಕ್ಕೂರಿನಿಂದ ಟೆಲಿಕಾಂ ಬಡಾವಣೆಗೆ ಮೇವು ಅರಸಿ ಬರುವ ಸಾಕುಪ್ರಾಣಿಗಳು ಇಲ್ಲಿ ಹುಲ್ಲು ತಿನ್ನುವಾಗ ಬಳ್ಳಿಯನ್ನು ತಿನ್ನಬಹುದು.ಇದರಿಂದ ಪ್ರಾಣಿಗಳ ಜೀವಕ್ಕೆ ಆಪತ್ತು ಬರಬಹುದು.  ಅಲ್ಲದೇ ಇದರ ಪಕ್ಕದಲ್ಲೇ ಬೃಹತ್‌ ರಸ್ತೆಯಿದ್ದು ಬೆಸ್ಕಾಂ ಸಿಬ್ಬಂದಿ ತುರ್ತು ಕಾರ್ಯ ನಿರ್ವಹಣೆಗೆ ಹೋಗಿ ಬರುತ್ತಲೇ ಇರುತ್ತಾರೆ.ಬೆಸ್ಕಾಂ ಸಿಬ್ಬಂದಿ ಬಳಿ ಇರುವ ದುರಸ್ತಿ ವಾಹನದಲ್ಲಿ ಏಣಿ, ಬಳ್ಳಿ ಕತ್ತರಿಸುವ ಸಾಧನ ಸಹ ಬೆಸ್ಕಾಂ ಸಿಬ್ಬಂದಿ ಬಳಿಯಿದೆ. ಆದರೂ ಅವರು ಈ ಬಳ್ಳಿಯನ್ನು ಕತ್ತರಿಸದೇ ಬಿಟ್ಟಿರುವುದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.